ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಗಕ್ಕೆ ಈಗ ’ಹೋಂ ಸ್ಟೇ’ಗಳ ಮೆರುಗು

By * ರಾಘವೇಂದ್ರ ಶರ್ಮಾ, ತಲವಾಟ
|
Google Oneindia Kannada News

Mattuga Home Stay, Jog
ಪ್ರವಾಸ ಎಂದರೆ ಮೋಜು ಮಜ ಮಸ್ತಿ. ನಿತ್ಯ ಜಂಜಡದಿಂದ ದೂರವಾಗಿ ಮನಸ್ಸಿಗೆ ಮುದಕೊಡಲು ಮನುಷ್ಯ ಆರಿಸಿಕೊಂಡ ಮಾರ್ಗ. ಪ್ರವಾಸಿಗರು ಅವರವರ ಅಭಿರುಚಿಗನುಗುಣವಾಗಿ ಪ್ರವಾಸಿ ಸ್ಥಳಗಳನ್ನು ಆಯ್ದುಕೊಳ್ಳುತ್ತಾರೆ. ದೇವಸ್ಥಾನಗಳು, ಪ್ರಕೃತಿ ನಿರ್ಮಿತ ಗುಡ್ಡಬೆಟ್ಟಗಳು, ನದಿತೊರೆಗಳು ಜಲಪಾತಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಆ ಕಾರಣಕ್ಕಾಗಿ ಪ್ರವಾಸಿಗರ ದಾಹ ಇಂಗಿಸಲು ನೂರಾರು ಪ್ರೇಕ್ಷಣೀಯ ತಾಣಗಳು ಇವೆ.

ಅವುಗಳಲ್ಲಿ ಮನುಷ್ಯ ನಿರ್ಮಿತ ಪ್ರಕೃತಿನಿರ್ಮಿತ ಎಂಬ ವಿಂಗಡನೆಯೊಂದಿಗೆ ವೀಕ್ಷಕರ ಮನ ತಣಿಸುತ್ತದೆ. ಆದರೆ ಅಲ್ಲಿ ಮೂಲ ಸೌಲಭ್ಯ ಇದೆಯೇ ಇದ್ದರೆ ಹೇಗಿದೆ ಎಂಬಂತಹ ಪ್ರಶ್ನೆ ಅಲ್ಲಿಗೆ ಹೋಗುವ ಮೊದಲು ಕಾಡುವ ಸಮಸ್ಯೆ. ಅಂತಹ ನೋಡಬೇಕಾದ ಜಾಗಗಳು ಮಾತ್ರಾ ಸುಂದರವಿದ್ದರೆ ಸಾಲದು ಅಲ್ಲಿನ ಸೌಲಭ್ಯವೂ ಸುಂದರ ಎನ್ನುವ ಪ್ರವಾಸಿಗರ ಮನದಾಸೆಗೆ ಹುಟ್ಟಿಕೊಂಡ ವ್ಯವಸ್ಥೆಯೆ ಹೋಂ ಸ್ಟೇ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ "ಬ್ರೆಡ್ ಎಂಡ್ ಬ್ರೇಕ್ ಫಾಸ್ಟ್" ಎಂಬ ಹೆಸರಿನೊಂದಿಗೆ ಚಾಲ್ತಿಗೆ ಬಂದ ವಸತಿ ವ್ಯವಸ್ಥೆ ಇದು.

ಪ್ರವಾಸಿ ತಾಣಗಳಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ಮನೆಯಲ್ಲಿ ಅತಿಥಿಗಳಿಗೆ ಉಳಿಯಲು ಅವಕಾಶ ಮಾಡಿಕೊಟ್ಟು ಅದಕ್ಕೆ ತಕ್ಕುದಾದ ಹಣವನ್ನು ಪಡೆಯುವ ವ್ಯವಸ್ಥೆಗೆ ನಮ್ಮ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಅಂಕಿತ ನೀಡಿ ಪ್ರೋತ್ಸಾಹಿಸಿತು. ಅದರ ಪರಿಣಾಮ ಕೊಡಗು ಮಡಕೇರಿಗಳಲ್ಲಿ ದಶಕಗಳ ಹಿಂದೆಯೇ ನೂರಾರು ಹೋಂ ಸ್ಟೇ ಗಳು ಕಾರ್ಯಾರಂಭಿಸಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಆದರೆ ಮಲೆನಾಡಿನ ಜೋಗ ಜಲಪಾತದ ಸುತ್ತ ಆರಂಭವಾಗಿದ್ದು ಎರಡು ವರ್ಷಗಳ ಈಚೆಗೆ.

ಜೋಗ ಜಲಪಾತದ ಬಗ್ಗೆ "ಕಣ್ಣಿಗೆ ತಂಪು ಹೊಟ್ಟೆಗೆ ಕಿಚ್ಚು" ಎಂಬ ವಾಕ್ಯ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು. ಅದಕ್ಕೆ ಕಾರಣ ಎಲ್ಲಾ ಸರ್ಕಾರಿ ಕೃಪಾಪೋಷಿತ ವಸತಿ ಊಟ ವ್ಯವಸ್ಥೆ. ಯೂತ್ ಹಾಸ್ಟೆಲ್ ಯುವಕರಿಗೆ ಇನ್ನುಳಿದ ಪ್ರವಾಸಿ ಬಂಗಲೆಗಳು ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಮೀಸಲಾಗಿದ್ದರಿಂದ ಸಾರ್ವಜನಿಕರು ವಸತಿ ಹಾಗೂ ಉತ್ತಮ ಊಟಕ್ಕೆ ಪರದಾಡಬೇಕಾಗಿತ್ತು. ಹಾಗಾಗಿ ಜನಸಾಮಾನ್ಯರಿಗೆ ಸೂಕ್ತ ವಸತಿ ಊಟ ಜೋಗದಲ್ಲಿ ಇತ್ತೀಚಿನವರೆಗೂ ಇರಲಿಲ್ಲ.

ಗ್ಯಾಲರಿ:
ಗೇರುಸೊಪ್ಪ ಜೋಗ ಬಳಿಯ ಸುಂದರ ಹೋಂ ಸ್ಟೇಗಳು

ಆದರೆ ಹೋಂ ಸ್ಟೇಗಳು ಕಾರ್ಯಾರಂಭ ಮಾಡಿದ ನಂತರ ಈಗ ಆ ವಾಕ್ಯ ಬದಲಾಗುತ್ತಿದೆ. ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸಮರ್ಪಕವಾಗಿ ಸ್ಪಂದಿಸಿದ ಪರಿಣಾಮವಾಗಿ ಈ ಎರಡು ವರ್ಷಗಳ ಈಚೆಗೆ ಜೋಗದ ಸುತ್ತ ಪ್ರಾರಂಭವಾದ ಹೋಂ ಸ್ಟೇ ಗಳು ಜೋಗ ಜಲಪಾತಕ್ಕೆ ಮೆರುಗು ನೀಡುತ್ತಿವೆ. ಅವುಗಳ ಚಿಕ್ಕ ಮಾಹಿತಿ ಇಲ್ಲಿದೆ.

ಮತ್ತುಗ : ಜೋಗದಿಂದ ಎಂಟು ಕಿಲೋಮೀಟರ್ ಹಿಂದೆ ರಾಷ್ಟೀಯ ಹೆದ್ದಾರಿ 206 ರ ಪಕ್ಕದಲ್ಲಿ ಮನಮನೆ ಎಂಬ ಊರಿನ ಬಳಿ ಸಿಗುವ ಸುಸಜ್ಜಿತ ಹೋಂ ಸ್ಟೇ ಇದು. ಶ್ರೀ ನರಹರಿ ಹಾಗೂ ಕಾಮಾಕ್ಷಿ ದಂಪತಿಗಳು ಈ ಹೋಂ ಸ್ಟೆಯ ಯಜಮಾನರು. ಹತ್ತು ಎಕರೆ ವಿಶಾಲವಾದ ಅಡಿಕೆ ಏಲಕ್ಕಿ ಕಾಫಿ ತೋಟಗಳ ನಡುವೆ ಇರುವ "ಮತ್ತುಗ" ಕಳೆದೆರಡು ವರ್ಷದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಒಂದುಬಾರಿಗೆ ೨೨ ಜನರ ಆತಿಥ್ಯಕ್ಕೆ ಇಲ್ಲಿ ವ್ಯವಸ್ಥೆಯಿದೆ. ಒಮ್ಮೆಲೆ ಮೂರ್ನಾಲ್ಕು ಕುಟುಂಬಗಳೂ ಇಲ್ಲಿ ತಂಗಬಹುದು. ಶಾಖಾಹಾರಿ ಊಟ ಹಾಗೂ ಸುಸಜ್ಜಿತ ಕೊಠಡಿಗಳು ಎಲ್ಲವೂ ಪ್ರಥಮ ದರ್ಜೆಯದು.
ಸಂಪರ್ಕ: (08183) 207 581 / 94480 68870
email:
[email protected]
Web:
http://matthuga.in

ನಮ್ಮನೆ: ಜೋಗದಿಂದ ಏಳು ಕಿಲೋಮೀಟರ್ ಹಿಂದೆ ರಾಷ್ಟೀಯ ಹೆದ್ದಾರಿ 206 ರ ಪಕ್ಕದಲ್ಲಿ ತಲವಾಟ ಎಂಬ ಊರಿನಲ್ಲಿರುವ ಉಳಿಮನೆ ಇದು. ಶ್ರೀ ಜಯಕೃಷ್ಣ ಹಾಗೂ ಸ್ನೇಹಿತರು ಈ ಹೋಂ ಸ್ಟೇ ಯ ನಿರ್ವಾಹಕರು. ಸಂಪೂರ್ಣ ಮಲೆನಾಡು ಶೈಲಿಯ ಮನೆಯ ಈ ಹೋಂ ಸ್ಟೇಯಲ್ಲಿ ಮೂರು ರೂಂಗಳಿದ್ದು ಒಮ್ಮೆ 12 ಜನರ ವರೆಗೂ ಉಳಿಯಲು ಅವಕಾಶವಿದೆ. ಎಲ್ಲಾ ಹೋಂ ಸ್ಟೆಗಳಿಗಿಂತ ತುಸು ಭಿನ್ನವಾಗಿರುವ ಇದು ಅತಿಥಿಗಳಿಗೆ ಅವರದೇ ಮನೆಯಲ್ಲಿ ವಾಸವಾದ ಅನುಭವಕ್ಕಾಗಿ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.ಕಾಡಿನ ನಡುವೆ ಒಂಟಿಮನೆಯ ಅನುಭವ ನೀಡುವ ಇದು ಪ್ರಶಾಂತ ವಾತಾವರಣ ಹೊಂದಿದೆ. ಒಂದು ಬಾರಿ ಒಂದು ಕುಟುಂಬ ಎಂಬ ನಿಯಮ ಇಲ್ಲಿಯದು. ಮಲೆನಾಡು ಶೈಲಿಯ ಸಸ್ಯಹಾರಿ ಭೋಜನ ಇಲ್ಲಿನ ಹೆಗ್ಗಳಿಕೆ.
ಫೋನ್: (08183) 207 361/93422 53240
Email: [email protected]

ಗುಂಡಿಮನೆ: ಜೋಗದಿಂದ ಭಟ್ಕಳ ಮಾರ್ಗದಲ್ಲಿರುವ ಈ ಹೋಂ ಸ್ಟೇ ಜೋಗದಿಂದ 15 ಕಿಲೋಮೀಟರ್ ದೂರದಲ್ಲಿದೆ. ಶ್ರೀ ಗಣಪತಿ ರಾವ್ ದಂಪತಿಗಳು ಇದರ ನಿರ್ವಾಹಕರು. ಶರಾವತಿ ನದಿಯ ಹಿನ್ನೀರಿನ ಸಮೀಪವಿರುವ ಈ ಹೋಂ ಸ್ಟೆ ಕಾಡುಗಳ ನಡುವೆ ಇದ್ದು ಪ್ರಕೃತಿಪ್ರಿಯರ ಏಕಾಂತ ಧ್ಯಾನಕ್ಕೆ ಹೇಳಿಮಾಡಿಸಿದ ಸ್ಥಳ. ಸುಂದರ ಬೆಟ್ಟಗುಡ್ಡಗಳ ನಡುವೆ ವಿಹಂಗಮ ದೃಶ್ಯ ಇಲ್ಲಿನ ಹಿರಿಮೆ. ಮಲೆನಾಡು ಸಸ್ಯಾಹಾರಿ ಊಟೋಪಚಾರ ಇಲ್ಲಿನ ಆಕರ್ಷಣೆ.
ಫೋನ್: 99009 56760/ (08186) 243 131
Email: [email protected]
Web: http://www.gundimane.com / http://ulimane.blogspot.com

ಶರಾವತಿ ಪ್ರಕೃತಿ ಶಿಬಿರ : ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ಉಸ್ತುವಾರಿಯಲ್ಲಿರುವ ಈ ವಸತಿ ವ್ಯವಸ್ಥೆ ಸಾರ್ವಜನಿಕರಿಗೂ ಮುಕ್ತ. ನಾಲ್ಕು ಮಧ್ಯಮ ತರಗತಿಯ ಕುಟೀರ ಹಾಗೂ ಎರಡು ಲಕ್ಷುರಿ ಕುಟೀರವನ್ನು ಹೊಂದಿರುವ ಪ್ರಕೃತಿ ಶಿಬಿರ ಜಲಪಾತಕ್ಕೆ ಅತೀ ಸನಿಹದಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ದೊರಕುವ ವಸತಿ ನಿಲಯ. ಇಲ್ಲಿ ಶಾಖಾಹಾರಿ ಹಾಗೂ ಮಾಂಸಹಾರಿ ಊಟದ ವ್ಯವಸ್ಥೆ ಇದೆ. ಮುಂಗಡ ಕಾಯ್ದಿರಿಸುವ ವ್ಯವಸ್ಥೆಯಿದೆ.
ಸಂಪರ್ಕ: ನಾರಾಯಣ್: 94496 18056 / ಮಂಜುನಾಥ್: 94813 49133

ಹೊನ್ನೇಮರಡು: ದಿ ಅಡ್ವೆಂಚರರ್ಸ್ ನ ಎಸ್.ಎಲ್.ಎನ್. ಸ್ವಾಮಿ ಹಾಗೂ ನೊಮಿತೋ ದಂಪತಿಗಳ ನೇತೃತ್ವದ ಸಾಹಸ ಶಿಕ್ಷಣ ಸಮನ್ವಯ ಕೇಂದ್ರವಾದ ಹೊನ್ನೇಮರಡು ಜೋಗಕ್ಕೆ 10 ಕಿ.ಮೀ ಹಿಂದೆ ಸಿಗುತ್ತದೆ. ಮುಂಗಡ ಕಾಯ್ದಿರಿಸುವ ಪ್ರವಾಸಿಗರಿಗೆ ಇಲ್ಲಿ ಕಯಾಕಿಂಗ್, ಸ್ವಿಮ್ಮಿಂಗ್ ಜತೆ ಕಾಡಿನಲ್ಲಿ ಟ್ರಕ್ಕಿಂಗ್ ಹಾಗೂ ನಡುಗುಡ್ಡೆಯಲ್ಲಿ ಟೆಂಟ್ ಹಾಕಿ ಕ್ಯಾಂಪ್ ಫೈರ್ ಮುಂತಾದ ವ್ಯವಸ್ಥೆ ಲಭ್ಯ. ಊಟ ವಸತಿ ಜತೆ ಇಲ್ಲಿ ಪರಿಸರ ಶಿಕ್ಷಣವೂ ಲಭ್ಯ. ಫೋ: (08183) 207 740. [ಕರ್ನಾಟಕ ಪ್ರವಾಸೋದ್ಯಮ]

English summary
Jog, Gerusoppa is now filled with many Home Stays near by with boom in Karnataka tourism many home stay center are flourished. One can stay at Muttuga, gundimane, Sharavati nature camp, Honnemaradu and other place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X