• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾರ್ತಿಕ ಸೋಮವಾರ ವಿಶೇಷ: ಎಲ್ಲೂರು ವಿಶ್ವೇಶ್ವರ ದೇಗುಲ

By * ಬಾಲರಾಜ್ ತಂತ್ರಿ, ಉಡುಪಿ
|

ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ "ಮಹಾತೊಭಾರ ಎಲ್ಲೂರು ಶ್ರೀವಿಶ್ವೇಶ್ವರ ದೇವಾಲಯ" ಕೂಡ ಒಂದು. ಎಲ್ಲೂರಿನ ಮೂಲಸ್ಥಾನ ಶ್ರೀ ವಿಶ್ವನಾಥ ಅಥವಾ ಶ್ರೀವಿಶ್ವೇಶ್ವರ ಸನ್ನಿಧಾನವು ಸ್ವಯಂಭು ಸನ್ನಿಧಿ ಎನ್ನುವುದು ಪ್ರತೀತಿ. ಅಪೂರ್ವ ವಾಸ್ತು ವಿನ್ಯಾಸದ ಮತ್ತು ಸರಳ ರೂಪದಲ್ಲಿರುವ ದೇವರು ಕಾಶಿಯಿಂದ ಬಂದವರೆಂದು ನಂಬಿಕೆ.

ಸ್ಥಳ ಪುರಾಣ:ಉದ್ಭವ ಮಹಾದೇವನು ಮೊದಲು ಬುಡಕಟ್ಟು ವರ್ಗದ ವೃದ್ದ ಮಹಿಳೆಗೆ ಗೋಚರಿಸಿದ್ದು. ಮಹಿಳೆ ಅಣಬೆ ತೆಗೆಯಲು ಕತ್ತಿಯನ್ನು ಉಪಯೋಗಿಸಿದಾಗ ಆ ಕತ್ತಿ, ಉದ್ಭವ ಲಿಂಗಕ್ಕೆ ತಾಗಿ ರಕ್ತ ಒಸರಿಸಲಾರಂಭಿಸಿತಂತೆ. ವಿಷಯ ತಿಳಿದ ಅರಸ ಮತ್ತು ಆತನ ಗುರುಗಳು ಆಗಮಿಸಿ ಎಳನೀರು ಸುರಿದಾಗ ಮಹಾದೇವ ಗೋಚರಿಸಿದನು. ಕುಂದ ಹೆಗ್ಗಡೆ ಅರಸು ಮನೆತನದ ಭೂರಿ ಕೀರ್ತಿ ಎಂಬ ಅರಸನು ಸಂತಾನ ಅಪೇಕ್ಷೆಯಿಂದ ಮತ್ತು ತನ್ನ ರಾಜ್ಯದಲ್ಲಿ ದೇವಾಲಯವಿಲ್ಲವೆಂಬ ಕಾರಣಕ್ಕೆ ಕಾಶಿಗೆ ಹೋಗಿ ತಪಸ್ಸನ್ನು ಆಚರಿಸಿ ದೇವರನ್ನು ಕರೆತಂದನೆಂದು ಕೂಡ ಇತಿಹಾಸ ಪುಟದಲ್ಲಿ ಗುರುತಿಸಲ್ಪಟ್ಟಿದ್ದಾನೆ.

ಅರಸು ತಪಸ್ಸನ್ನು ಆಚರಿಸಿದರೂ ಮಹಾದೇವ ಮೊದಲು ಗೋಚರಿಸಿದ್ದು ಮಣ್ಣಿನಮಗಳಿಗೆ, ಆಕೆಯಿಂದ "ಎಲ್ಲು" ಎಂದು ಮೊದಲು ಕರೆಯಲ್ಪಟ್ಟಿತು. ಅಂದಿನಿಂದ ಆಕೆಯ ನೆನಪಿಗಾಗಿ ಕ್ಷೇತ್ರಕ್ಕೆ ಎಲ್ಲೂರು ಎಂದಾಯಿತು.

ಎಳನೀರು ಸೇವೆ ವಿಶೇಷ:ಎಲ್ಲೂರು ಸೀಮೆ ವ್ಯಾಪ್ತಿಯಲ್ಲಿ ನಂದಿಕೂರು, ಕುಂಜೂರು, ಕಳತ್ತೂರುಗಳಲ್ಲಿ ಅನುಕ್ರಮವಾಗಿ ದುರ್ಗಾಪರಮೇಶ್ವರಿ, ದುರ್ಗಾ ಮತ್ತು ಮಹಾಲಿಂಗೇಶ್ವರ ದೇವಾಲಯಗಳಿವೆ. ಸೋದೆ ಮಠದ ಶ್ರೀ ವಾದಿರಾಜ ಸ್ವಾಮೀಜಿಯವರು ತಮ್ಮ ತೀರ್ಥ ಪ್ರಬಂಧ ಕಥನದಲ್ಲಿ ಕ್ಷೇತ್ರಕ್ಕೆ ಆಗಮಿಸಿ ಐದು ಶ್ಲೋಕಗಳಿಂದ ಎಲ್ಲೂರು ವಿಶ್ವೇಶ್ವರನನ್ನು ಸ್ತುತಿಸಿದ ಉಲ್ಲೇಖವಿದೆ.

ಕ್ಷೇತ್ರದಲ್ಲಿ ಎಳನೀರು ಸೇವೆ ಬಹಳ ವಿಶೇಷ. ಎಳ್ಳೆಣ್ಣೆ ಸೇವೆ ನೀಡಿದರೆ ಸಕಲ ಗ್ರಹದೋಷ, ದುಷ್ಟಾರಿಷ್ಟ, ಅಪತ್ತು ದೂರವಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ರೋಗಭಾದೆ, ಬಾಲಗ್ರಹ ನಿವಾರಣೆಗೆ ತುಲಾಭಾರ ಸೇವೆ ಕೂಡ ಸ್ವಾಮಿಗೆ ಅರ್ಪಣೆಯಾಗುತ್ತಿದೆ.

ಬಿಲ್ಲವ, ಮೊಗವೀರ, ಮಡಿವಾಳ, ದೇವಾಡಿಗ ವಿಶ್ವಕರ್ಮ , ಬಂಟ್ಸ್, ಬ್ರಾಹ್ಮಣ ಸಮಾಜದವರ ಸಹಭಾಗಿತ್ವ ಕ್ಷೇತ್ರದ ವೈಶಿಷ್ಟ್ಯ. ಇತ್ತೀಚಿಗೆ ಕ್ಷೇತ್ರದ ಜೀರ್ಣೋದ್ದಾರ ಹೆಚ್ಚುಕಮ್ಮಿ ಆರು ಕೋಟಿ ರುಪಾಯಿ ವೆಚ್ಚದಲ್ಲಿ 2009 ಮಾರ್ಚ್ ತಿಂಗಳಲ್ಲಿ ವಿಜೃಂಭಣೆಯಿಂದ ನಡೆದಿತ್ತು.

ಕ್ಷೇತ್ರದ ವಿಳಾಸ:

ಮಹತೋಭಾರ ವಿಶ್ವೇಶ್ವರ ದೇವಾಲಯ,

ಎಲ್ಲೂರು ಅಂಚೆ, ತಾಲೂಕು

ಮತ್ತು ಜಿಲ್ಲೆ - ಉಡುಪಿ

ದೂ. ಸ. 0820 -2550365

ಮಾರ್ಗ: ಉಡುಪಿಯಿಂದ : ರಾ.ಹೆ 17 ರಲ್ಲಿ ಬಂದು ಕಟಪಾಡಿ, ಕಾಪು, ಉಚ್ಚಿಲ ಬಳಿ ಎಡಕ್ಕೆ ತಿರುಗಬೇಕು(ಮದರಂಗಡಿಗೆ ಹೋಗುವ ರಸ್ತೆ)

ಮಂಗಳೂರಿನಿಂದ : ರಾ.ಹೆ 17 ರಲ್ಲಿ ಬಂದು ಸುರತ್ಕಲ್ , ಮೂಲ್ಕಿ, ಪಡುಬಿದ್ರೆ , ಉಚ್ಚಿಲ ಬಳಿ ಬಲಕ್ಕೆ ತಿರುಗಬೇಕು (ಮುದರಂಗಡಿಗೆ ಹೋಗುವ ರಸ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mahathobhara Yelluru Shree Vishweshwara Temple is a Hindu temple dedicated to Lord Vishweshwara (Shiva) in the Yellur village of Udupi district in the state of Karnataka, India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more