• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾದಿರಾಜರ ತಪೋಭೂಮಿ ಶಿರಸಿ ಬಳಿಯ ಸೊಂದೆ

By * ಬಾಲರಾಜ್ ತಂತ್ರಿ, ಉಡುಪಿ
|

ಶ್ರೀ ವಾದಿರಾಜರು ತಪಗೈದಿರುವ ಪುಣ್ಯಸ್ಥಳ ಶಿರಸಿ ಬಳಿಯಿರುವ ಸೊಂದಾ ಅಥವಾ ಸೋದೆ ವಾದಿರಾಜ ಮಠ ಭಕ್ತರಿಗೆ ಮಾತ್ರವಲ್ಲ ಪರಿಸರವನ್ನು ಪ್ರೇಮಿಸುವವರಿಗೆ ಮಲೆನಾಡ ಮಡಿಲಲ್ಲಿರುವ ಅದ್ಭುತ ತಾಣ. ನಗರದಿಂದ ದೂರ, ಪ್ರಕೃತಿಗೆ ಹತ್ತಿರವಾಗಿರುವ ಈ ತಪೋಭೂಮಿ ಕರ್ನಾಟಕ ಮಾತ್ರವಲ್ಲ ದೇಶದ ಎಲ್ಲೆಡೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ.

ಶಾಲ್ಮಲಾ ನದಿ ಹರಿಯುತ್ತಿರವ ನೈಸರ್ಗಿಕವಾಗಿ ರಮ್ಯ ಮನೋಹರವಾಗಿರುವ ಈ ಪುಣ್ಯಕ್ಷೇತ್ರ ಕ್ರಿ.ಶ.1555ರಿ೦ದ 1598ರಲ್ಲಿ ವಿಜಯನಗರದ ಸಾಮ೦ತರಾಜ ಅರಸಪ್ಪನಾಯಕನ ಆಳ್ವಿಕೆಗೆ ಸೇರಿತ್ತು. ಭಾವೀ ಸಮೀರರಾದ ಶ್ರೀವಾದಿರಾಜರು ತಪಗೈದು, ಸ್ಥಳವನ್ನು ಪುನೀತಗೊಳಿಸಿ ಪುಣ್ಯಕ್ಷೇತ್ರವನ್ನಾಗಿ ಮಾಡಿದರು ಎನ್ನುವುದು ಪ್ರತೀತಿ.

ಬೆಂಗಳೂರಿನಿಂದ 450 ಕಿ.ಮೀ. ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಿ೦ದ 25 ಕಿಲೋ ಮೀಟರ್ ದೂರದಲ್ಲಿ ಈ ಕ್ಷೇತ್ರವಿದೆ. ಕ್ಷೇತ್ರವನ್ನು ಸೊಂದ ಅಥವಾ ಸೋದೆ ಎಂದು ಕೂಡಾ ಕರೆಯುವರು. ಇಲ್ಲಿ ಮೂರು ಮಠಗಳು ಇರುತ್ತವೆ. ಶ್ರೀವಾದಿರಾಜರ ಮಠ, ಶ್ರೀ ಜೈನಮಠ ಮತ್ತು ಶ್ರೀ ಸ್ವಣ೯ವಲ್ಲಿಮಠವಿರುವ ತ್ರಿವಳಿ ಮಠಗಳ ಸ೦ಗಮವೇ ಸೋದೆ.

ಪುರಾಣ : ಶಾವ೯ರಿ ಫಾಲ್ಗುಣ ಕ್ರಷ್ಣ ಪಕ್ಷ ತೃತೀಯ ಶಾಲಿವಾಹನ ಶಕ 1522ನೇ ಬುಧವಾರ ಸ್ವಾತಿ ನಕ್ಷತ್ರದಲ್ಲಿ ಶ್ರೀ ವಾದಿರಾಜರು ಮೂದಲೇ ನಿಮಾ೯ಣಗೊ೦ಡು ಪೂಜಿತವಾದ ಪ೦ಚವೃಂದಾವನಗಳಲ್ಲಿ ಶ್ರೀಹಯಗ್ರೀವ ದೇವರನ್ನು ಹಾಗೂ ಶ್ರೀವೇದವ್ಯಾಸ ದೇವರನ್ನು ಆರಾಧಿಸುತ್ತಾ, ಮಧ್ಯ ವೃ೦ದಾವನದಲ್ಲಿ ಪ್ರವೇಶಮಾಡಿ ಕುಳಿತರು. ತಮ್ಮ ಕೈಯಲ್ಲಿರುವ ಜಪಮಣಿ ಸರಿದಾಡುವುದು ನಿ೦ತಕೂಡಲೇ ಮು೦ಭಾಗದ ಶಿಲೆಯನ್ನು ಮುಚ್ಚಲು ಅಪ್ಪಣೆಯಿತ್ತು ವೃಂದಾವನದೊಳಗೆ ಕುಳಿತು ಧ್ಯಾನಮಗ್ನರಾದರು. ಮರುದಿನ ಶಾಲಿವಾಹನ ಶಕ 1522ನೇ ಶಾವ೯ರಿ ಫಾಲ್ಗುಣ ಕೃಷ್ಣ ಪಕ್ಷ ತೃತೀಯ ಬುಧವಾರ ಸ್ವಾತಿ ನಕ್ಷತ್ರದಲ್ಲಿ ಶ್ರೀಮದ್ವಾದಿರತೀಥ೯ ಪರಮಹ೦ಸ ಕುಲತಿಲಕರ ಹಸ್ತದಿ೦ದ ಜಪಸರವು ಕೆಳಗೆ ಬಿದ್ದಿತು. ಕೂಡಲೇ ವೃಂದಾವನದ ಮುಚ್ಚಳವನ್ನು ಮುಚ್ಚಲಾಯಿತು.

ಆಗ ಮಿ೦ಚುವ ವಿಮಾನದಲ್ಲಿ ಶ್ರೀಗಳು ಕುಳಿತಕೂಡಲೇ ಅದು ಮೇಲಕ್ಕೇರಲಾರ೦ಭಿಸಿತು. ಭಕ್ತವೃಂದದ ಆತ೯ಧ್ವನಿ ಆಲಿಸಿದ ಶ್ರೀಗಳು ಕರುಣೆಯಿ೦ದ ಪಾದುಕೆಗಳನ್ನು ಮತ್ತು ತಾವು ಹೊದ್ದುಕೊ೦ಡಿರುವ ಶಾಟಿಯನ್ನು ಭಕ್ತರ ಕಡೆಗೆ ಹಾಕಿ "ನಾನು ಇಲ್ಲಿಯೆ ವೃಂದಾವನದಲ್ಲಿ ಸನ್ನಿಹಿತರಾಗಿ, ಶ್ರೀಭೂತರಾಜರ ಸೇವೆ ಕೈಗೊ೦ಡು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತೇನೆ" ಎ೦ದು ಹೇಳಿ ವಿಮಾನದ ಜೊತೆ ಕಣ್ಮರೆಯಾದರೆನ್ನುವುದು ಕ್ಷೇತ್ರದ ಇತಿಹಾಸ.

ಕ್ಷೇತ್ರದ ಕಾರಣಿಕ ಎಂದರೆ ಕ್ಷೇತ್ರವನ್ನು ಮುನ್ನಡೆಸುತ್ತಿದೆ ಎಂದು ನಂಬಲಾಗುವ ದೈವಶಕ್ತಿ "ಶ್ರೀ ಭೂತರಾಜರು". ಮಾರ್ಚ್ ತಿಂಗಳಲ್ಲಿ ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಇಲ್ಲಿ ಮೂರು ದಿನಗಳ ಆರಾಧನೆ ಕೂಡ ಇರುತ್ತದೆ. ಮಠದಲ್ಲಿ ಊಟ ಇಲ್ಲದಿದ್ದರೆ ಭಟ್ಟರ ಮನೆಯಲ್ಲಿ ಸಂಮೃದ್ಧ ಭೋಜನ ಸಿಗುತ್ತದೆ. ಉಡುಪಿಯ ಅಷ್ಠ ಮಠಗಳಲ್ಲಿ ಸೋದೆ ಮಠ ಕೂಡ ಒಂದು.

ಪ್ರೇಕ್ಷಣೀಯ ಸ್ಥಳಗಳು : ಶಿರಸಿಯಲ್ಲಿಯೇ ಸರ್ವಾಭಿಷ್ಟ ಸಿದ್ಧಿಸುವ ಶಿರಸಿ ಮಾರಿಕಾಂಬಾ ದೇವಿಯ ದೇವಸ್ಥಾನವಿದೆ. ಫೆಬ್ರವರಿಯಲ್ಲಿ ಇಲ್ಲಿ 9 ದಿನಗಳ ಉತ್ಸವವಿರುತ್ತದೆ. ಶಿರಸಿಯ ಸುತ್ತಮುತ್ತ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಸಾವಿರ ಲಿಂಗಗಳಿರುವ ಸಹಸ್ರಲಿಂಗ ನೋಡತಕ್ಕ ರಮಣೀಯ ಸ್ಥಳ. ಶಿರಸಿಯಿಂದ ಕೇವಲ 45 ಕಿ.ಮೀ. ದೂರದಲ್ಲಿರುವ ಪಶ್ಚಿಮಘಟ್ಟದಲ್ಲಿರುವ ಯಾಣ ಚಾರಣಿಗರಿಗೆ ಹೇಳಿ ಮಾಡಿದ ಸ್ಥಳ. ಸೊಂದೆಗಾಗಲಿ ಯಾಣಕ್ಕಾಗಲಿ ಶಿರಸಿಯಿಂದ ತಲುಪಲು ಸಾಕಷ್ಟು ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ವಾಹನಗಳ ಸೌಕರ್ಯವಿದೆ.

ಸೋದೆಮಠದ ವಿಳಾಸ:

ಸೋದೆ ಶ್ರೀವಾದಿರಾಜ ಮಠ

ಶಿರಸಿ ತಾಲೂಕ್, ಉತ್ತರ ಕನ್ನಡ ಜಿಲ್ಲೆ

ದೂರವಾಣಿ : 08384 279685

ಉಚಿತ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sonda Math near Sirsi in Uttara Kannada district is one of the most visited pilgrimage place in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more