ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಯಾಯತಿ ದರದಲ್ಲಿ ತೀರ್ಥ ಕ್ಷೇತ್ರ ಸುತ್ತಿ ಬನ್ನಿ

By Mahesh
|
Google Oneindia Kannada News

Kashi Temple
ಬೆಂಗಳೂರಿನ ಜೈ ಕರ್ನಾಟಕ ಸೇವಾ ಪ್ರತಿಷ್ಠಾನ ಸಂಸ್ಥೆಯು ರೈಲ್ವೆ ಮಂಡಳಿಯಿಂದ ದೊರೆಯುವ ರಿಯಾಯಿತಿ ಸೌಲಭ್ಯಗಳನ್ನು ಪಡೆದು ರಾಷ್ಟ್ರದ ಸಮಗ್ರತೆ, ಭೌಗೋಳಿಕ ಪರಿಚಯ, ಮಹಾ ನದಿಗಳಲ್ಲಿ ಸ್ನಾನ ಹಾಗೂ ತೀರ್ಥ ಕ್ಷೇತ್ರಗಳ ಪ್ರವಾಸ ಕಾರ್ಯಕ್ರಮವನ್ನು ಆಯೋಜಿಸಿದೆ.

15 ದಿನಗಳ ಕಾಶಿ, ರಾಮೇಶ್ವರಗೆ ಹೋಗಿ ಬರಲು ಮಹಾ ಯಾತ್ರೆಯನ್ನು ಆಯೋಜಿಸಲಾಗುತ್ತಿದ್ದು, ಸದರಿ ಯಾತ್ರೆಯು ಲಾಭ-ನಷ್ಟ ರಹಿತವಾಗಿದ್ದು, ಶ್ರೀಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿರುತ್ತದೆ ಎಂದು ಸಂಸ್ಥೆ ಹೇಳಿದೆ. ಕಾಶಿ, ರಾಮೇಶ್ವರಮ್ ಯಾತ್ರೆಯ ಹಂಬಲ ಹೊಂದಿರುವ ಮಹಾ ಜನತೆ ಈ ರಿಯಾಯಿತಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಸ್ಲೀಪರ್ ದರ್ಜೆ ರೈಲಿನಲ್ಲಿ ಶೇ.50ರವರೆಗೆ ರಿಯಾಯಿತಿ ಸೌಲಭ್ಯವನ್ನು ನೀಡಲಾಗುವುದು. ಯಾತ್ರೆಯು ತಿಂಗಳ 2ನೇ ಅಥವಾ 3ನೇ ಭಾನುವಾರ ರಾತ್ರಿ 10 ಗಂಟೆಗೆ ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ ಹೊರಟು ರಾಷ್ಟ್ರದ ರಾಜಧಾನಿ ನವದೆಹಲಿ ಮುಖಾಂತರ ಹರಿ ದ್ವಾರ, ಮಥುರಾ, ಪ್ರಯಾಗ, ಶ್ರೀಕಾಶಿ, ಕೊಲ್ಕತ್ತಾ, ಶ್ರೀಜಗನ್ನಾಥ ಪುರಿ, ಭುವನೇಶ್ವರ, ರಾಮೇಶ್ವರಂ ಮುಂತಾದ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸಲಾಗುವುದು.

ಪ್ರವಾಸ ಕಾಲದಲ್ಲಿ ಸಸ್ಯಾಹಾರಿ ಊಟ ಮತ್ತು ವಸತಿ, ಮಾರ್ಗದರ್ಶಕರ ವ್ಯವಸ್ಥೆ ಇರತ್ತದೆ. ಹಿರಿಯ ನಾಗರೀಕರು ಸೇರಿದಂತೆ ಎಲ್ಲಾ ಮಹಾ ಜನತೆ ಮೇಲ್ಕಂಡ ರಿಯಾಯಿತಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಚಳಿಗಾಲವಾದ್ದರಿಂದ ಉತ್ತರ ಭಾರತದ ಪ್ರವಾಸ ಕಾರ್ಯಕ್ರಮ ಲಭ್ಯವಿರುವುದಿಲ್ಲ. ಒಟ್ಟಾರೆ 15 ದಿನಗಳ ಪ್ರವಾಸಕ್ಕೆ 7,500 ರು ತಗುಲುತ್ತದೆ ಹಾಗೂ ಹಿರಿಯ ನಾಗರೀಕರಿಗೆ 500 ರು ರಿಯಾಯಿತಿ ಕೂಡಾ ನೀಡಲಾಗುತ್ತದೆ ಎಂದು ಆಯೋಜಕ ನಾರಾಯಣ್ ದಟ್ಸ್ ಕನ್ನಡಕ್ಕೆ ತಿಳಿಸಿದರು.

ಶಿವರಾತ್ರಿ ಸ್ಪೆಷಲ್ : ಮುಂದಿನ ವರ್ಷ ಫೆಬ್ರವರಿ 23 ಬೆಂಗಳೂರು ಬಿಟ್ಟು, ಆಗ್ರಾ, ಮಥುರಾ ಪುರಿ, ಗಯಾ ಸೇರಿದಂತೆ ಹಲವು ಕ್ಷೇತ್ರಗಳಿಗೆ ಭೇಟಿ ನೀಡಲಾಗುವುದು, ಮಾರ್ಚ್ 3 ರ ಶಿವರಾತ್ರಿ ಶುಭ ಸಂದರ್ಭವನ್ನು ಕಾಶಿಯಲ್ಲಿ ಕಳೆಯಲು ಯೋಜನೆ ಹಾಕಲಾಗಿದೆ ಎಂದು ನಾರಾಯಣ್ ತಿಳಿಸಿದರು.

ಆಸಕ್ತರು ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ವ್ಯವಸ್ಥಾಪಕರು, ಜೈ ಕರ್ನಾಟಕ ಸೇವಾ ಪ್ರತಿಷ್ಠಾನ,
(ಅಡಿಗಾಸ್ ಹೋಟೆಲ್ ಬಳಿ)
ನಂ. 64/75, ಎನ್.ಎ.ಟಿ. ರಸ್ತೆಯ ಅಡ್ಡರಸ್ತೆ, ಗಾಂಧಿಬಜಾರ್
ಬಸವನಗುಡಿ, ಬೆಂಗಳೂರು-560 004,
ಮೊಬೈಲ್: 94805 88568, 94495 67445
ಇಮೇಲ್ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X