ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೆ ಹೇಳಿ ಒಂದು ದಿನ ಗುಡ್ ಬೈ

By Super
|
Google Oneindia Kannada News

Devarayanadurga
ಬೆಂಗಳೂರು ಸುತ್ತಮುತ್ತ ಇರುವ ಪ್ರವಾಸಿ ತಾಣಗಳ ಬಗೆಗೆ ಕಿರು ಪರಿಚಯ. ಒಂದು ದಿನದ ಪಿಕ್ನಿಕ್ಕಿಗೆ ದಟ್ಸ್ ಕನ್ನಡ ದಾರಿದೀಪ.

ಬನ್ನೇರುಘಟ್ಟ : ಬೆಂಗಳೂರಿನಿಂದ ದಕ್ಷಿಣಕ್ಕೆ ಸುಮಾರು 22 ಕಿಮೀ. 25,000 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಹಸುರು ಆಚ್ಛಾದಿತ ಪ್ರಾಣಿ ಸಂಗ್ರಹಾಲಯ. ಚಿಟ್ಟೆಗಳ ಪಾರ್ಕ್ ಇತ್ತೀಚಿನ ಆಕರ್ಷಣೆ. ದಟ್ಟ ಕಾಡು, ವನ್ಯಜೀವಿಗಳ ವಿಹಾರಧಾಮ. ಕಾಡುಕೋಣ, ಚಿರತೆ, ಮುಳ್ಳುಹಂದಿ ಮುಂತಾದ ಪ್ರಾಣಿಗಳಿಗೆ ಆಶ್ರಯಧಾಮ. ಪೂರ್ವ ಮತ್ತು ಪಶ್ಚಿಮ ಘಟ್ಟದ ನಡುವೆ ಓಡಾಡುವ ಆನೆಗಳ ಕಾರಿಡಾರ್. ಬೆಂಗಳೂರು ಕೇಂದ್ರ ಬಸ್ ನಿಲ್ಧಾಣದಿಂದ ವೋಲ್ವೋ ಬಸ್ಸಿದೆ.
ಮಾರ್ಗದರ್ಶನ

ಭೀಮೇಶ್ವರಿ : ಶಿವನಸಮುದ್ರ ಮತ್ತು ಮೇಕೆದಾಟು ಜಲಧಾರೆ ನಡುವೆ ಇರುವ ಸಣ್ಣ ಊರು ಭೀಮೇಶ್ವರಿ. ಮಂಡ್ಯ ಜಿಲ್ಲೆಯಲ್ಲಿ ಬರುವ ಭೀಮೇಶ್ವರಿ ಕಾವೇರಿ ನದಿಯ ರಮಣೀಯ ಬಿಂದು. ಸುಂದರ ಪ್ರಕೃತಿ ಪರಿಸರದ ನಡುವೆ ಹವ್ಯಾಸಿ ಮೀನುಗಾರಿಕೆಗೆ ಹೇಳಿ ಮಾಡಿಸಿದ ಸ್ಥಳ. ಪರಿಸರ ಪ್ರವಾಸಕ್ಕೆ ಹೆಸರುವಾಸಿ. ಮಹಸೀರ್ ಮೀನುಗಳ ಆಡುಂಬೊಲ.
ಮಾರ್ಗದರ್ಶನ.

ಚೆನ್ನಕೇಶವ ದೇವಸ್ಥಾನ, ಕೈದಾಳ : ಜಕಣಾಚಾರಿಯ ಶಿಲ್ಪ ವೈಭವದಿಂದ ಕಂಗೊಳಿಸುವ ದೇವಾಲಯ ತುಮಕೂರಿನಿಂದ ಕೇವಲ 9 ಕಿಮೀ ದೂರ. ಕುಣಿಗಲ್ ರಸ್ತೆಯಲ್ಲಿರುವ ಗೂಳೂರು ಗ್ರಾಮದ ಒಳದಾರಿಯಲ್ಲಿ ನುಸುಳಿದರೆ ಸಿಗುತ್ತದೆ. ಸಣ್ಣ ದ್ರಾವಿಡ ಶೈಲಿಯ ಮೋಹಕ ಕೆತ್ತನೆಗಳು ಇಲ್ಲಿನ ವಿಶೇಷ. 1150ರಲ್ಲಿ ನಿರ್ಮಿಸಿದ ಕೈದಾಳ ಚೆನ್ನಕೇಶವನ ತಾಣವೇ ಜಕಣಾಚಾರಿಯ ಊರು. ಅವನು ಹುಟ್ಟಿ ಬೆಳೆದದ್ದು ಇಲ್ಲೇ.

ದೇವರಾಯನ ದುರ್ಗ ರಾಶಿರಾಶಿ ಶಿಲೆಗಳ ನಡುವೆ ಮೈವೆತ್ತ ಗಿರಿಧಾಮ. ಸಮುದ್ರ ಮಟ್ಟದಿಂದ 3940 ಅಡಿ ಎತ್ತರದಲ್ಲಿರುವ ರಮಣೀಯ ಪ್ರದೇಶ. ಬೆಂಗಳೂರಿನಿಂದ 65 ಕಿಮೀ, ತುಮಕೂರಿನಿಂದ 9 ಕಿಮೀ ದೂರದಲ್ಲಿದೆ. ಬೆಟ್ಟ ಹತ್ತುವವರಿಗೆ, ಚಾರಣಿಗರಿಗೆ, ಪ್ರಕೃತಿ ಆರಾಧಕರಿಗೆ, ದೈವಭಕ್ತರಿಗೆ ಹಾಗೆ ಸುಮ್ಮನೆ ಹೊರ ಸಂಚಾರ ತೆರಳುವವರಿಗೆ, ಒತ್ತಡ ಜೀವನ ಶೈಲಿಯಿಂದ ಒಂದು ದಿನದ ಬಿಡುಗಡೆ ಪಡೆಯಬಯಸುವವರಿಗೆ ದೇವರಾಯನದುರ್ಗ ಹೇಳಿ ಮಾಡಿಸಿದ ತಾಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X