ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದ ಬೋಟ್ ಹೌಸ್ ಖಾಲಿ ಖಾಲಿ

By Mahesh
|
Google Oneindia Kannada News

ಶ್ರೀ ನಗರ, ಜು.6: ಜಮ್ಮು ಕಾಶ್ಮೀರದ ಇತ್ತೀಚಿನ ಗಲಭೆಯಿಂದ ರಾಜ್ಯದ ಪ್ರವಾಸೋದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ. ಶ್ರೀ ನಗರದ ಪ್ರಖ್ಯಾತ ದಾಲ್ ಸರೋವರ ದೋಣಿಯಾನಕ್ಕೆ ಹೆಸರುವಾಸಿಯಾಗಿದ್ದು, ಮಧ್ಯಾಹ್ನ 12.30 ಆದರೂ ಒಬ್ಬ ಪ್ರವಾಸಿಯೂ ಕಾಣಿಸುತ್ತಿಲ್ಲ ಎಂದು ವಿಷಾದದಿಂದ ದೋಣಿ ಮಾಲೀಕ ನದೀಮ್ ಹೇಳುತ್ತಾನೆ.

ಮೊದಲು ಮಧ್ಯಾಹ್ನದ ವೇಳೆಗೆ ಕನಿಷ್ಠ 3-4 ದೋಣಿಗಳು ಭರ್ತಿಯಾಗಿರುತಿದ್ದವು ಎಂದು ನದೀಮ್ ದುಃಖ ತೋಡಿಕೊಂಡ. ಈಗ ಇಡೀ ಕಾಶ್ಮೀರ ಪ್ರವಾಸಿಗರ ಬರವನ್ನು ಎದುರಿಸುತ್ತಿದೆ.

ಕಾಶ್ಮೀರ ಕಣಿವೆಯಲ್ಲಿ ಒಟ್ಟು 24,000 ಹೋಟೆಲ್ ಕೊಠಡಿಗಳು ಲಭ್ಯವಿದ್ದು, ಪ್ರಮುಖ ಹೋಟೆಲ್ ಒಂದರಲ್ಲಿ ನಿನ್ನೆ ಕೇವಲ ನಾಲ್ಕು ಕೊಠಡಿಗಳು ಭರ್ತಿಯಾಗಿದ್ದವು. ದಾಲ್ ಸರೋವರದ ಸುತ್ತಲಿನ ಹೋಟೆಲ್ ಗಳಲ್ಲಿ ಕಳೆದ ವರ್ಷ ಈ ವೇಳೆಗೆ ಹೋಟೆಲ್ ಗಳಲ್ಲಿ ಕೊಠಡಿಗಳೇ ದೊರೆಯುತ್ತಿರಲಿಲ್ಲ.

ಈಗ ಪ್ರವಾಸಿಗಳಿಲ್ಲದೆ ಬಿಕೋ ಎನ್ನುತ್ತಿವೆ. ಕಾಶ್ಮೀರದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಜಾವೀದ್ ಭೂರ ಪ್ರಕಾರ ಈ ವರ್ಷ ಬಹುತೇಕ ಬುಕಿಂಗ್ ಗಳನ್ನು ರದ್ದು ಮಾಡಲಾಗಿದ್ದು ಶೇ 20-30 ಕೊಠಡಿಗಳಷ್ಟೇ ಭರ್ತಿಯಾಗಿವೆ.

ಅಲ್ಲದೆ ಅಮರ್ ನಾಥ ಯಾತ್ರೆಯ ಸೀಸನ್ ಆಗಿದ್ದರಿಂದ ಇಷ್ಟಾದರೂ ಕೊಠಡಿ ಭರ್ತಿಯಾಗಿವೆ ಎಂದ ಅವರು ಪತ್ರಿಕೆ ಹಾಗೂ ಟಿವಿ ಚಾನೆಲ್ ಗಳ ಪ್ರಚಾರದಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಹೊಡೆತ ಆಗಿದ್ದು ಪರಿಸ್ಥಿತಿ ಸಾಮಾನ್ಯಕ್ಕೆ ಮರಳುತ್ತಿದೆ ಎಂದು ಅವರು ಹೇಳಿದರು.

ದಾಲ್ ಸರೋವರದಲ್ಲಿ ಸುಮಾರು 1,000 ದೋಣಿ ಮನೆಗಳಿದ್ದು ಪ್ರವಾಸಿಗರಿಲ್ಲದೆ ಸೊರಗಿವೆ. ಈ ದೋಣಿಗಳಲ್ಲಿ ದಿನವೊಂದರ ಬಾಡಿಗೆ ರು.4,500ಕ್ಕೆ ಏರಿದ್ದು, ಪ್ರವಾಸಿಗರು ಆಗಮಿಸಲು ಟ್ಯಾಕ್ಸಿಗಳ ಕೊರತೆಯೂ ಇದೆ ಎಂದು ಅವರು ಹೇಳಿದರು.

ಭಾನುವಾರ ಶ್ರೀನಗರದ ಲಾಲ್ ಚೌಕ್ ನ ಟ್ಯಾಕ್ಸಿ ಸ್ಟಾಂಡಿನಲ್ಲಿ ಕ್ವಾಲಿಸ್, ಟವೇರ, ಮತ್ತು ಸುಮೋಗಳು ಕೆಲಸವಿಲ್ಲದೆ ನಿಂತಿವೆ. ಕೇವಲ ಮೂರು ವಾರಗಳ ಮೊದಲು ಇಲ್ಲಿ ಟ್ಯಾಕ್ಸಿಗಳಿಗೆ ಕೊರತೆ ಆಗಿತ್ತು. ಪ್ರತಿ ನಿತ್ಯ ಇಲ್ಲಿ ಸುಮಾರು 200 ಟ್ಯಾಕ್ಸಿಗಳು ಪ್ರವಾಸಿಗರನ್ನು ಹೊತ್ತು ಹೊರಡುತ್ತವೆ ಆದರೆ ಕಳೆದ 8 ದಿನಗಳಿಂದ ಒಂದೇ ಟ್ಯಾಕ್ಸಿಯೂ ಹೊರ ಹೋಗಿಲ್ಲ.

ಚಾಲಕನೊಬ್ಬನ ಪ್ರಕಾರ ಇಲ್ಲಿಂದ ವಿಮಾನ ನಿಲ್ದಾಣಕ್ಕೆ ಕನಿಷ್ಟ 10 ಟ್ರಿಪ್ ಮಾಡಲಾಗುತ್ತಿದ್ದು ಇಂದು ಒಂದೇ ಟ್ರಿಪ್ ಕೂಡ ಆಗಿಲ್ಲ. ಆದರೆ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಉತ್ತಮಗೊಳ್ಳಲಿದೆ ಎಂಬ ಆಶಾ ಭಾವನೆ ಇಲ್ಲಿ ಪ್ರವಾಸಿಗರನ್ನೇ ನಂಬಿ ಬದುಕುತ್ತಿರುವವರದ್ದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X