ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆರಳ ತುದಿಯಲ್ಲಿ ಚಿತ್ತಾಕರ್ಷಕ ನಂದಿಗಿರಿಧಾಮ

By * ರಾಜೇಂದ್ರ ಚಿಂತಾಮಣಿ
|
Google Oneindia Kannada News

Amruth Sarovar at Nandihills
ಹವಾ ಬದಲಾವಣೆಗಾಗಿ ಕರ್ನಾಟಕದ ಊಟಿ ಎಂದೇ ಜನಜನಿತವಾಗಿರುವ ನಂದಿಗಿರಿಧಾಮಕ್ಕೆ ಪ್ರವಾಸ ಹೊರಡಲು ಸಿದ್ಧತೆ ನಡೆಸಿದ್ದೀರಾ?ಕೊಂಚ ತಾಳಿ ನಂದಿಗಿರಿಧಾಮದ ಬಗ್ಗೆ ವಿವರಗಳು ಬೇಕೆ. ಈಗ ನಿಮ್ಮ ಬೆರಳ ತುದಿಯಲ್ಲಿ ನಂದಿಗಿರಿಧಾಮದ ವಿವರಗಳು ಲಭ್ಯ.

ನಂದಿಗಿರಿಧಾಮದ ಜವಾಬ್ದಾರಿಯನ್ನು ಹೊತ್ತಿರುವ ತೋಟಗಾರಿಕೆ ಇಲಾಖೆ ಇದೆಲ್ಲವನ್ನೂ ಸಾಕಾರಗೊಳಿಸಿದೆ. ನಂದಿಗಿರಿಧಾಮದ ಹೊಸ ಅಂತರ್ಜಾಲತಾಣವನ್ನು ಆರಂಭಿಸಲಾಗಿದೆ. ಗ್ರಾಹಕ ಸ್ನೇಹಿ ಅಂತರ್ಜಾಲ ತಾಣ ಇದಾಗಿದ್ದು ನಂದಿಬೆಟ್ಟದಲ್ಲಿ ಲಭ್ಯವಾಗುವ ಸೌಲಭ್ಯಗಳನ್ನು ಈ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ತಿಳಿದುಕೊಳ್ಳಬಹುದು.

ನಂದಿಗಿರಿಧಾಮದಲ್ಲಿ ಟಿಪ್ಪು ಡ್ರಾಪ್, ಟಿಪ್ಪು ಬೇಸಿಗೆ ಅರಮನೆ, ಅಮೃತ ಸರೋವರ, ಶ್ರೀ ಯೋಗಾನಂದೀಶ್ವರ ದೇವಸ್ಥಾನ, ಅರ್ಕಾವತಿ ನದಿ ಮೂಲ ಸೇರಿದಂತೆ ನಂದಿಬೆಟ್ಟದ ಇತಿಹಾಸದ ಮೇಲೆ ಕಣ್ಣಾಡಿಸಬಹುದು. ಅಂತರ್ಜಾಲದಲ್ಲಿನ ವರ್ಣರಂಜಿತ ಚಿತ್ರಗಳು ಹೃನ್ಮನ ತಣಿಸುತ್ತವೆ.

ನೂರಾರು ಬಗೆಯ ಔಷಧಿ ಸಸ್ಯಗಳು, ಕಣ್ಮನ ಸೆಳೆಯುವ ಪುಷ್ಪಗಳು, ಹಣ್ಣು ಹಂಪಲುಗಳು ಅಂತರ್ಜಾಲ ಪುಟಗಳನ್ನು ಮನಮೋಹಕಗೊಳಿಸಿವೆ. ಇಷ್ಟೆಲ್ಲಾ ವೈವಿಧ್ಯ ಸಸ್ಯರಾಶಿ ನಂದಿಬೆಟ್ಟದಲ್ಲಿದೆಯೇ ಎಂದು ಮೂಗಿನ ಮೇಲೆ ಬೆರಳಿಡಬೇಕಾಗುತ್ತದೆ. ಸಮುದ್ರಮಟ್ಟದಿಂದ 4,851 ಅಡಿ ಎತ್ತರದಲ್ಲಿ ನಂದಿಬೆಟ್ಟವಿದೆ.

ಪ್ರವಾಸಿಗಳು ಏನು ಬಯಸುತ್ತಾರೋ ಅವರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅಂತರ್ಜಾಲ ತಾಣವನ್ನು ರೂಪಿಸಿದ್ದೇವೆ ಎನ್ನುತ್ತಾರೆ ನಂದಿಗಿರಿಧಾಮದ ವಿಶೇಷ ಅಧಿಕಾರಿ ಮಹಂತೇಶ್ ಮುರುಗೋಡು. ಬೆಟ್ಟದ ಮೇಲಿನ ಅತಿಥಿ ಗೃಹ ನೆಹರು ಹೌಸ್ ನ ಕೊಠಡಿಗಳನ್ನು ಮುಂಗಡ ಕಾದಿರಿಸಲು ಅಂತರ್ಜಾಲ ತಾಣ ಸಹಕಾರಿಯಾಗಿದೆ.

ನೆಹರು ಹೌಸನ್ನು ಮುಂಚೆ ಕಬ್ಬನ್ ಹೌಸ್ ಎಂದು ಕರೆಯಲಾಗುತ್ತಿತ್ತು. 1984ರಲ್ಲಿ ಮಾರ್ಕ್ ಕಬ್ಬನ್ ಅವರು ಈ ಅತಿಥಿ ಗೃಹವನ್ನು ನಿರ್ಮಿಸಿದ್ದರು. ಮಹತ್ಮಾಗಾಂಧಿ, ಜವಹಾರ್ ಲಾಲ್ ನೆಹರು, ರಾಣಿ ಎಲಿಜೆಬೆತ್, ಸಿ ವಿ ರಾಮನ್ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಅವರಂತಹ ಮಹನಿಯರು ನಂದಿಬೆಟ್ಟಕ್ಕೆ ಭೇಟಿ ನೀಡಿದ್ದರು.

<em>ಚಿಕ್ಕಬಳ್ಳಾಪುರ ಸುತ್ತಮುತ್ತಲ ಪ್ರವಾಸಿ ತಾಣಗಳು</em></a><br><a href=ಕಲವಾರಹಳ್ಳಿ ದುರ್ಗಮ ಬೆಟ್ಟಕ್ಕೆ ಟ್ರೆಕ್ಕಿಂಗ್ ಮಾರ್ಗದರ್ಶಿ" title="ಚಿಕ್ಕಬಳ್ಳಾಪುರ ಸುತ್ತಮುತ್ತಲ ಪ್ರವಾಸಿ ತಾಣಗಳು
ಕಲವಾರಹಳ್ಳಿ ದುರ್ಗಮ ಬೆಟ್ಟಕ್ಕೆ ಟ್ರೆಕ್ಕಿಂಗ್ ಮಾರ್ಗದರ್ಶಿ" />ಚಿಕ್ಕಬಳ್ಳಾಪುರ ಸುತ್ತಮುತ್ತಲ ಪ್ರವಾಸಿ ತಾಣಗಳು
ಕಲವಾರಹಳ್ಳಿ ದುರ್ಗಮ ಬೆಟ್ಟಕ್ಕೆ ಟ್ರೆಕ್ಕಿಂಗ್ ಮಾರ್ಗದರ್ಶಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X