ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಸಿಗರನ್ನು ಸೆಳೆಯುವಲ್ಲಿ ಕೇರಳ ಸೈ

By Mahesh
|
Google Oneindia Kannada News

Kerala to woo tourists with serviced villas
ಕೊಚ್ಚಿನ್, ಮೇ. 19: ಪ್ರವಾಸೀ ರಾಜ್ಯವಾದ ಕೇರಳದಲ್ಲಿ ಕೊಠಡಿಗಳ ಸ್ಥಳಾವಕಾಶಕ್ಕೆ ದಿನೇ ದಿನೇ ಪ್ರವಾಸಿಗರಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೇರಳ ಪ್ರವಾಸೋದ್ಯಮ ಇಲಾಖೆ ನೂತನ ಸರ್ವೀಸ್ ವಿಲ್ಲಾಗಳನ್ನು ಪರಿಚಯಿಸಿದೆ.

ಈ ಸರ್ವೀಸ್ ವಿಲ್ಲಾಗಳು ಸಂಪೂರ್ಣ ಸ್ವತಂತ್ರ ಮನೆಗಳಾಗಿದ್ದು ಇವುಗಳನ್ನು ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ವಿಲ್ಲಾಗಳಲ್ಲಿ ಇಂಗ್ಲಿಷ್ ಮಾತನಾಡುವ ಅಡುಗೆಯವ ಒಬ್ಬನಿರುತ್ತಾನೆ. ಕನಿಷ್ಠ ಒಂದು ಕೊಠಡಿಯಿಂದ 6 ಕೊಠಡಿಗಳಷ್ಟು ವಿಸ್ತಾರವಾಗಿರುತ್ತದೆ. 12 ಜನರು ತಂಗಬಹುದಾದ ಈ ವಿಲ್ಲಾಗಳಲ್ಲಿ ಸುಸಜ್ಜಿತ ಅಡುಗೆ ಮನೆಯೂ ಇರುತ್ತದೆ.

ಈ ನೂತನ ಯೋಜನೆಯಿಂದ ಪ್ರವಾಸಿಗರಿಗೆ ತಂಗಲು ಹೆಚ್ಚಿನ ಆಯ್ಕೆಯ ಅವಕಾಶಗಳು ಲಭ್ಯವಾಗುವುದಲ್ಲದೆ ವಿಸಿಟರ್ಸ್ ಗಳಿಗೆ ಉತ್ತಮ ಗುಣಮಟ್ಟದ ಹೆಚ್ಚಿನ ಸ್ಥಳಾವಕಾಶವೂ ಸಿಗಲಿದೆ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಎಮ್ ಶಿವಶಂಕರ್ ಹೇಳುತ್ತಾರೆ. ವಿಲ್ಲಾಗಳ ಉದ್ದೇಶ ಪ್ರವಾಸಿಗರಿಗೆ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಕೇರಳ ಶೈಲಿಯ ವಸತಿಯನ್ನೂ ತಿಂಡಿ ತಿನಿಸುಗಳನ್ನು ಒದಗಿಸುವದೇ ಅಗಿದೆ ಎಂದು ಅವರು ಹೇಳಿದರು.

ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ತಿರುವನಂತಪುರ, ಕೊಚ್ಚಿನ್, ಪಟ್ಟನಂತಿಟ್ಟ, ವೈನಾಡ್ ಮತ್ತು ಇಡುಕ್ಕಿಯಿಂದ ವಿಚಾರಣೆಗಳು ಬರುತ್ತಿದ್ದು, ಇದು ಹೋ ಸ್ಟೇಗಿಂತ ವಿಭಿನ್ನವಾಗಿದ್ದು ಮನೆಯ ಮಾಲೀಕರು ಇಲ್ಲಿ ಇರಬೇಕಾದ ಅವಶ್ಯಕತೆ ಇರುವುದಿಲ್ಲ. ಈ ಯೋಜನೆಯಲ್ಲಿ ಖಾಸಗಿಯವರು ಪಾಲ್ಗೊಳ್ಳಲು ಪ್ರವಾಸೋದ್ಯಮ ಇಲಾಖೆ ಮಾನದಂಡಕ್ಕೆ ಅನುಸಾರವಾಗಿ ನಡೆದುಕೊಂಡರೆ ಅವಕಾಶವಿರುತ್ತದೆ. ಇಲಾಖೆ ಈಗಾಗಲೇ ಇಂತಹ 11 ವಿಲ್ಲಾಗಳನ್ನು ಆರಂಭಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X