• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಪ್ಪಟ ಮಲೆನಾಡು ಆತಿಥ್ಯಕ್ಕೆ ಮಧುವನ ಹೋಂಸ್ಟೇ

By Staff
|

* ಐರೀನ್ ರಾಜು, ಬೆಂಗಳೂರು.

ನನಗೆ ಮತ್ತು ನನ್ನ ಗಂಡ ಹಾಗೂ ಇಬ್ಬರು ಗಂಡು ಮಕ್ಕಳಿಗೆ ಊರು ಸುತ್ತುವ ಹುಚ್ಚು. ಅನೇಕರು ಬೇಸಿಗೆ, ಕ್ರಿಸ್ ಮಸ್ ರಜಾಕಾಲದಲ್ಲಿ ಪ್ರವಾಸ ಹೊರಟರೆ ನಾವು ಪ್ರತೀ ಶುಕ್ರವಾರ ಸಾಯಂಕಾಲಾನೇ ಬೆನ್ನಿಗೆ ಚೀಲ ಹಾಕಿಕೊಂಡು ಬೆಂಗಳೂರು ಬಿಟ್ಟು ಎಲ್ಲಿಗಾದರೂ ಓಡಿಹೋಗ್ತೀವಿ. ಮಳೆಗಾಲ, ಬೇಸಿಗೆಕಾಲ, ಚಳಿಗಾಲದ ಆಕರ್ಷಣೆ ಅಥವಾ ಅಂಜಿಕೆ ನಮಗಿಲ್ಲ.

ಕಳೆದ ನಾಲ್ಕು ವರ್ಷದಿಂದ ನಾವು ಸುತ್ತಿರುವಷ್ಟು ಊರುಗಳನ್ನು ಈ ಪ್ರಪಂಚದಲ್ಲಿ ಯಾರೂ ಸುತ್ತಿಲ್ಲ, ಹಹಹಾ! ಭಾರತದ ನಾನಾ ರಾಜ್ಯಗಳ ಪ್ರಮುಖ ಮತ್ತು ಅಷ್ಟೇನೂ ಹೆಸರುವಾಸಿಯಲ್ಲದ ತಾಣಗಳಿಗೂ ನಾವು ಟೂರ್ ಹೋಗಿ ಬಂದಿದೀವಿ. ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಪ್ರಯಾಣ ಮಾಡಿ ಅನೇಕ ಊರು, ಕೇರಿ, ಹಳ್ಳಿ, ಹಳ್ಳ, ದಿಣ್ಣೆಗಳನ್ನು ಹತ್ತಿ ಇಳಿದಿದೀವಿ. ಪ್ರಸಿದ್ಧವಾದ ಜಾಗಗಳನ್ನು ನೋಡುವುದು ಏನು ಮಹಾ. ಯಾರಿಗೂ ಅಷ್ಟಾಗಿ ಗೊತ್ತಿಲ್ಲದ ಚಿಕ್ಕಚಿಕ್ಕ ಊರುಗಳಿಗೆ ಹೋಗಿ ಅಲ್ಲಿರುವ ಪ್ರಕೃತಿ, ಜನ, ಸ್ವಭಾವಗಳನ್ನು ಕಂಡು ಅನುಭವಗಳನ್ನು ಕಟ್ಟಿಕೊಂಡು ಮತ್ತೆ ಬೆಂಗಳೂರಿಗೆ ನಾವು ವಾಪಸ್ಸು ಬರ್ತೀವಿ (:

ಎಷ್ಟೆಲ್ಲ ಪ್ರವಾಸ ಮಾಡಿದ್ದರೂ ಕೂಡ ಕಳೆದ ವಾರ ನಾವು ಹೋಗಿದ್ದ ಊರು ಕೇರಿಯ ಪ್ರವಾಸದ ಅನುಭವಗಳನ್ನು ನಾನು ಮತ್ತು ನನ್ನ ಕುಟುಂಬದವರು ಈ ಜನ್ಮದಲ್ಲಿ ಮರೆಯುವುದಿಲ್ಲ. ನಾವು ಈ ಬಾರಿ ಹೋಗಿದ್ದು ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಗರ್ಭ ಸೊರಬಕ್ಕೆ. .ಸೊರಬಕ್ಕೆ 10 ಕಿಲೋಮೀಟರ್ ದೂರದಲ್ಲಿರುವ ಕಂತನಹಳ್ಳಿಗೆ. ಕಂತನಹಳ್ಳಿಯಲ್ಲಿ ನಾವು ಎಂಜಾಯ್ ಮಾಡಿದ್ದು ಕಂತೆಯಷ್ಟಿದೆ. ಕೆಲವು ವಿಷಯಗಳನ್ನು ಹಾಗೂ ಅಲ್ಲಿನ ಸುತ್ತಮುತ್ತಲಿನ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ತೀನಿ.

ಕಂತನಹಳ್ಳಿಯ ವಿಶೇಷವೆಂದರೆ ಅಲ್ಲಿರುವ ಮಧುವನ ಹೋಂ ಸ್ಟೇ. ಮಡಿಕೇರಿಯಲ್ಲಿ ಹೋಂ ಸ್ಟೇಗಳಿವೆ. ಈಚೀಚೆಗೆ ಅವೂ ಕೃತಕವಾಗುತ್ತಿವೆ. ಹಾಗಾಗಿ ಯಾವ ಊರಿಗೆ ಹೋದರೂನೂವೆ ಹೋಟೆಲುಗಳಲ್ಲಿ ಇಳಿದುಕೊಂಡು ಸಾಕುಸಾಕಿದ್ದ ನಮಗೆ ಮಧುವನ ಸ್ವರ್ಗಸಮಾನವಾಗಿತ್ತು. ಮೊದಲೇ ಸೊರಬ ಹಿಂದುಳಿದ ತಾಲೂಕು. ಅಂಥದರಲ್ಲಿ ಕಂತನಹಳ್ಳಿ ಒಂದು ರಮಣೀಯವಾದ ಕೊಂಪೆ. ಆ ಕೊಂಪೆಯಲ್ಲಿ ಹೋಂ ಸ್ಟೇ ನಿರ್ಮಿಸಿ ಪ್ರವಾಸಿಗರಿಗೆ ಸೌಕರ್ಯಗಳನ್ನು ಕಲ್ಪಿಸಿ ಆತ್ಮೀಯವಾಗಿ ಉಪಚಾರ ಮತ್ತು ಆತಿಥ್ಯ ನೀಡುವುದು ಕಂತನಹಳ್ಳಿಯ ಹೆಚ್ಚುಗಾರಿಕೆ.

ನಿಸರ್ಗ ರಮಣೀಯತೆಗೆ ಹೆಸರಾದ ಮಲೆನಾಡು, ಪ್ರವಾಸಿಗರ ಆತಿಥ್ಯಕ್ಕೂ ಹೆಸರುವಾಸಿ. ಬಹುಪಾಲು ಕೃಷಿಕರನ್ನೇ ಹೊಂದಿರುವ ಸಾಗರ, ಶಿರಸಿ ಕಡೆಯಲ್ಲಿ ವಿಹಾರಕ್ಕೆಂದು, ಟ್ರಿಕ್ಕಿಂಗ್ ಗೆಂದು ಬರುವವರ ಸಂಖ್ಯೆ ಹಿಂದಿಗಿಂತಲೂ ಈಗ ಹೆಚ್ಚಾಗಿದೆ.ಹೀಗೆ ಬರುವವರಿಗೆ ಅವರ ಪ್ಲಾನ್ ಪ್ರಕಾರ ವಸತಿ, ಊಟ ಎಲ್ಲೆಡೆ ದೊರೆಯುವುದು ತುಸು ಕಷ್ಟ. ಇವರು ಸರ್ಕಾರಿ ಬಂಗಲೆಗಳನ್ನು ನೆಚ್ಚಿಕೂರುವಂತಿಲ್ಲ. ಟ್ರಿಕ್ಕಿಂಗ್ ಗೆಂದು ಬರುವ ಯುವ ಜನರಿಗೆ ಕಾಡಲ್ಲೇ ಕ್ಯಾಂಪ್ ಹಾಕುವ ಸುವರ್ಣ ಅವಕಾಶವಂತೂ ಇರುತ್ತದೆ. ಆದರೆ ಪ್ರಕೃತಿಯ ಸವಿ ಉಣಲು ಬರುವ ಸಂಸಾರಸ್ಥರಿಗೆ, ಮನೆ ಮಂದಿಗೆಲ್ಲಾ, ಮಲೆನಾಡಿನಲ್ಲಿ ವಸತಿ, ಊಟ ಸಿಗುವುದು ದುರ್ಲಭವಾಗುತ್ತಿರುವುದನ್ನು ಅರಿತು ಗನು ಮಂಚಾಲೆ ಮತ್ತು ವಿನುತ ದಂಪತಿಗಳು ಪ್ರಾರಂಭಿಸಿದ ವ್ಯವಸ್ಥೆಯೇ ಮಧುವನ ಹೋಂ ಸ್ಟೇ(home Stay).

ಅತಿಥಿಗಳಿಗೆ ಅಕ್ಷರಶಃ ಮನೆ ವಾತಾವರಣ ಸೃಷ್ಟಿಸಿ, ವಿಶೇಷ ಭೋಜನ, ವಿಶ್ರಾಂತಿ, ಸ್ನಾನ, ವಿಹಾರಗಳಿಂದ ನಿಮ್ಮ ಮನ ತಣಿಸುವುದೇ ಮಧುವನದ ಉದ್ದೇಶ. ಮುಖ್ಯವಾಗಿ ಮಿತವ್ಯಯ. ಘಟ್ಟದ ಮೇಲೆ ಒಂದೋ ಎರಡೋ ಖಾಸಗಿ ಹೋಂ ಸ್ಟೇ ಗಳು ಕಾಣಸಿಗುತ್ತವೆ ಅಷ್ಟೇ. ಆದರೆ ಶಿರಸಿ, ಸಾಗರ, ಶಿಕಾರಿಪುರ, ಸೊರಬ, ಹೊಸನಗರ ಪ್ರದೇಶದಲ್ಲಿ ಇದು ಹೊಸದು. ಈ ನಿಟ್ಟಿನಲ್ಲಿ "ಕಂತನಳ್ಳಿ"ಯ ಮಧುವನ ಹೋಂ ಸ್ಟೇ ದಿನೇ ದಿನೇ ಹೆಸರುವಾಸಿಯಾಗುತ್ತಿದೆ.

ಸುತ್ತಲೂ ಕಾಡು, ಜಲಪಾತ, ಐತಿಹಾಸಿಕ ಸ್ಥಳಗಳನ್ನು ಹೊಂದಿರುವ ಮಧುವನ(ಕಂತನಳ್ಳಿ ಹೋಂ ಸ್ಟೇ) ವಿಹಾರಾರ್ಥಿಗಳಿಗೆ, ಟ್ರೆಕ್ಕಿಂಗ್ ಮಾಡುವವರಿಗೆ, ನಿಸರ್ಗ ಪ್ರಿಯರಿಗೆ ಉಳಿದುಕೊಳ್ಳಲು ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿ ಉಳಿದುಕೊಂಡು ಪ್ರತಿದಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ನೋಡಿ ಬರುವುದಕ್ಕೆ ತುಂಬಾ ಅನುಕೂಲ. ಇತಿಹಾಸ ಪ್ರಿಯರಿಗೆ ಪಂಪನ ಊರು ಬನವಾಸಿ,ಕೆಳದಿ, ಇಕ್ಕೇರಿ ಮಹಾಸಂಸ್ಥಾನಗಳು. ಪಕ್ಷಿ ಪ್ರಿಯರಿಗೆ ಗುಡವಿ ಪಕ್ಷಿಧಾಮ,( ಕಂತನಹಳ್ಳಿಯಿಂದ 2 ಕಿ.ಮಿ) ಟ್ರೆಕ್ಕಿಂಗ್ ಗೆ ಚಂದ್ರಗುತ್ತಿ ಬೆಟ್ಟ,( 10 ಕಿ.ಮಿ), ಯಾಣ ( 60 ಕಿ.ಮಿ) ಉಂಚಳ್ಳಿ, ಸಾತೊಡ್ಡಿ, ಜೋಗ ಜಲಪಾತಗಳು (ಸುಮಾರು 40 ರಿಂದ 60 ಕಿ.ಮಿ. ಸುತ್ತಳತೆಯಲ್ಲಿ), ವರದಹಳ್ಳಿ, ಬೆಳ್ಳಿಗಾವಿ ದೇವಸ್ಥಾನಗಳು ಮುಂತಾದ ಸ್ಥಳಗಳಿಗೆ ಕಂತನಹಳ್ಳಿ ಕೇಂದ್ರಸ್ಥಾನ.

ನೀವೂ ಕಂತನಹಳ್ಳಿಗೆ ಹೋಗಿ ಎಂಜಾಯ್ ಮಾಡಿ ಬನ್ನಿ. ಗನು ಮಂಚಾಲೆ, ವಿನುತ ಮತ್ತು ಅವರ ಎಂಟರ್ ಪ್ರೈಸ್ ಎಂಥವರಿಗೂ ಸ್ಫೂರ್ತಿದಾಯಕವಾಗಿದೆ. ಅವರ ಆತ್ಮೀಯ ಆತಿಥ್ಯ ಸ್ವೀಕರಿಸಿ ಬನ್ನಿ. ಮಲಗುವುದಕ್ಕೆ ಬೆಚ್ಚನೆ ಕೋಣೆಗಳು, ಹಂಡೆಯಲ್ಲಿ ಕಾಯಿಸಿದ ಬಿಸಿನೀರು ಜಳಕ, ಮತ್ತು ಬಾಳೆ ಎಲೆಯಲ್ಲಿ ಶಾಖಾಹಾರ ಊಟ. ಊಟಕ್ಕೆ ಜೇನು ತುಪ್ಪ, ಬೆಣ್ಣೆ,ಬಗೆಬಗೆ ಗೊಜ್ಜು ತಂಬುಳಿ ಮೇಲಾರ, ಮಜ್ಜಿಗೆ ಹುಳಿ, ಮಿಡಿ ಉಪ್ಪಿನಕಾಯಿ, ಹಪ್ಪಳ, ಮೆಣಸು, ಕಾಫಿ ಮತ್ತಿನ್ನೇನು.

ಬೆಲೆ : ವಯಸ್ಕರಿಗೆ ಒಂದು ದಿನಕ್ಕೆ 1000 ರೂ.(ಪರಿಷ್ಕೃತ ದರ.) 5 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಉಚಿತ. (ವಸತಿ, ಉಪಾಹಾರ, ಲಂಚ್, ಡಿನ್ನರ್ ಎಲ್ಲಾ ಸೇರಿದೆ)

ಮಧುವನದ ಸಂಪರ್ಕ. 08184 254101 / 98457 34371. ಬೆಂಗಳೂರಿನಲ್ಲಿ ಸಂಪರ್ಕ : ಆರ್. ಆರ್. ರಾಜು 98451 68100. ಮಧುವನದ ಸೆಲ್ ಫೋನು ಸಿಗ್ನಲ್ ವೀಕ್ ಇದ್ದಾಗ ಸಂಪರ್ಕ ಕಷ್ಟ.

ಇ- ಅಂಚೆ : Amshuteja@gmail.com

ಮಧುವನ ವೆಬ್ ಸೈಟ್ ವಿಳಾಸ : www.madhuvana.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more