ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ ಉತ್ಸವಕ್ಕೆ ಪ್ರವಾಸ ಪ್ಯಾಕೇಜ್

By Mahesh
|
Google Oneindia Kannada News

Bidar fort
ಬೀದರ.ಏ.7: ಬೀದರ ಉತ್ಸವದ ಅಂಗವಾಗಿ ಏಪ್ರಿಲ್ 10ರಿಂದ 12 ರವರೆಗೆ ಬೀದರ ನಗರದಲ್ಲಿರುವ ಪ್ರವಾಸಿ ತಾಣಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಈಶಾನ್ಯ ವಿಭಾಗ) ವಿಶೇಷ ಪ್ರವಾಸ ಪ್ಯಾಕೇಜ್ ಆಯೋಜಿಸಿದೆ.

ಪ್ರವಾಸ ಪ್ಯಾಕೇಜ್ ಇಂತಿವೆ:

ಬೀದರ ಕೇಂದ್ರ ಬಸ್ ನಿಲ್ದಾಣ, ಪಾಪನಾಶ, ಬರಿದಶಾಹಿ ಉದ್ಯಾನ, ಅಬ್ದುಲ ಫೈಜ್ ದರ್ಗಾ, ಭವಾನಿ ಮಂದಿರ, ನರಸಿಂಹ ಝರಣಾ, ಚೌಬಾರ, ಮಹ್ಮದ್ ಗವಾನ್ ಮದರಸಾ, ಅಷ್ಟೂರ ಗುಂಬಜಗಳು, ಕೋಟೆ, ಗುರುದ್ವಾರ, ಕೇಂದ್ರ ಬಸ್ ನಿಲ್ದಾಣ. (ಒಟ್ಟು 28.7ಕಿ.ಮೀ) ಟಿಕೇಟ್ ದರ ರು.20.

ಬೀದರ ಕೇಂದ್ರ ಬಸ್ ನಿಲ್ದಾಣ, ಪಾಪನಾಶ, ಬರಿದಶಾಹಿ ಗಾರ್ಡನ್, ಬಸವೇಶ್ವರ ವೃತ್ತ, ಸಿದ್ದಾರೂಢ ಮಠ, ಅಬುಲ್‌ಫೈಜ್ ದರ್ಗಾ, ಭವಾನಿ ಮಂದಿರ, ನರಸಿಂಹ ಝರಣಾ, ಮಹ್ಮದ್ ಗವಾನ್ ಮದರಸಾ, ಅಷ್ಟೂರ ಗುಂಬಜಗಳು, ಕೋಟೆ, ಗುರುದ್ವಾರ, ಕೇಂದ್ರ ಬಸ್ ನಿಲ್ದಾಣ. (ಒಟ್ಟು ಕಿ.ಮೀ 35.5) ಟಿಕೇಟ್ ದರ ರು.25.

ಬೀದರ ಕೇಂದ್ರ ಬಸ್ ನಿಲ್ದಾಣ, ಪಾಪನಾಶ, ಬರಿದಶಾಹಿ ಗಾರ್ಡನ್,ಹನುಮಾನ ಮಂದಿರ, ದೇವ ದೇವ ವನ, ಅಬ್ದುಲ ಫೈಜ್ ದರ್ಗಾ, ಭವಾನಿ ಮಂದಿರ, ನರಸಿಂಹ ಝರಣಾ, ಚೌಬಾರ, ಮಹ್ಮದ್ ಗವಾನ್ ಮದರಸಾ, ಅಷ್ಟೂರ ಗುಂಬಜಗಳು, ಕೋಟೆ, ಗುರುದ್ವಾರ, ಕೇಂದ್ರ ಬಸ್ ನಿಲ್ದಾಣ. (ಒಟ್ಟು ಕಿ.ಮೀ 38.5) ಟಿಕೇಟ್ ದರ ರು. 30.

ಬೀದರ ಕೇಂದ್ರ ಬಸ್ ನಿಲ್ದಾಣ, ಪಾಪನಾಶ, ಬರಿದಶಾಹಿ ಗಾರ್ಡನ್, ಸಿದ್ದಾರೂಢ ಮಠ, ಹನುಮಾನ ಮಂದಿರ, ದೇವ ದೇವ ವನ, ಅಬ್ದುಲ್ ಫೈಜ್ ದರ್ಗಾ, ಭವಾನಿ ಮಂದಿರ, ನರಸಿಂಹ ಝರಣಾ, ಚೌಬಾರ, ಮಹ್ಮದ್ ಗವಾನ್ ಮದರಸಾ, ಅಷ್ಟೂರ ಟೊಂಬ್, ಬೀದರ ಕೋಟೆ, ಗುರುದ್ವಾರ, ಕೇಂದ್ರ ಬಸ್ ನಿಲ್ದಾಣ. (ಒಟ್ಟು ಕಿ.ಮೀ 45.3) ಟಿಕೇಟ್ ದರ ರು.35.

ಬಸ್ ಸೌಲಭ್ಯ :
ಬೀದರ ಉತ್ಸವಕ್ಕೆ ಬಂದು ಹೋಗಲು 50 ಪ್ರಯಾಣಿಕರಿದ್ದಲ್ಲಿ ಸಂಬಂಧಪಟ್ಟ ಫಟಕ ವ್ಯವಸ್ಥಾಪಕರಲ್ಲಿ ಮುಂಗಡವಾಗಿ ಹೋಗಿ ಬರುವ ಹಣ ಭರಿಸಿದಲ್ಲಿ ಅಥವಾ ಗುತ್ತಿಗೆ ಆಧಾರದ ಮೇಲೆ ಬೇಡಿಕೆ ಬಂದಲ್ಲಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುವುದು.

ಉತ್ಸವಕ್ಕೆ ಬರುವ ಪ್ರಯಾಣಿಕರ ಜನದಟ್ಟಣೆಗನುಗುಣವಾಗಿ ಎಲ್ಲಾ ಘಟಕಗಳಿಂದ ವಾಹನಗಳನ್ನು ಓಡಿಸಲಾಗುವುದು. ಬೀದರ ಘಟಕದಿಂದ ವಸತಿಗೆ ಹೋಗುವ ಸಾರಿಗೆಗಳನ್ನು ದೈನಂದಿನ ಸಮಯದ ಬದಲಾಗಿ ಒಂದು ಗಂಟೆ ತಡಮಾಡಿ, ಬೀದರ ಉತ್ಸವದ ಸಮಾರಂಭದ ಸ್ಥಳದಿಂದ ವಸತಿಗೆ ಕಳುಹಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ ಎಂದು ಈ.ಕ.ರ.ಸಾ,ಸಂಸ್ಥೆ ಬೀದರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X