keyboard_backspace

ಪ್ರಧಾನಿ ಭೇಟಿ ಮಾಡಿದ ನಿಮು ಪ್ರದೇಶದ ಬಗ್ಗೆ ನಿಮಗೆಷ್ಟು ಗೊತ್ತು?

Google Oneindia Kannada News

ನವದೆಹಲಿ, ಜುಲೈ.04: ಭಾರತ-ಚೀನಾದ ಲಡಾಖ್ ಪೂರ್ವಭಾಗದಲ್ಲಿರುವ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ಬೆನ್ನಲ್ಲೇ ಲಡಾಖ್ ಸಮೀಪದಲ್ಲಿಯೇ ಇರುವ ನಿಮು ಪ್ರದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ.

ದೇಶದಲ್ಲೇ ಅತ್ಯಂತ ಎತ್ತರದ ಪ್ರದೇಶಕ್ಕೆ ತೆರಳಿದ ಪ್ರಧಾನಿ ಮೋದಿ, ಭಾರತೀಯ ಯೋಧರಲ್ಲಿ ಆತ್ಮಸ್ಥೈರ್ಯ ತುಂಬಿದರು. ಚೀನಾ ಸೈನಿಕರ ಜೊತೆಗಿನ ಸಂಘರ್ಷದಲ್ಲಿ ಗಾಯಗೊಂಡ ಯೋಧರ ಆರೋಗ್ಯ ವಿಚಾರಿಸಿದರು.

ಶತ್ರುಗಳಿಗೆ ಶೌರ್ಯದ ಪರಿಚಯ ಮಾಡಿಸಿದ್ದೀರಿ ಎಂದ ಮೋದಿಶತ್ರುಗಳಿಗೆ ಶೌರ್ಯದ ಪರಿಚಯ ಮಾಡಿಸಿದ್ದೀರಿ ಎಂದ ಮೋದಿ

ಲಡಾಖ್ ಸಮೀಪದ ನೇಹ್ ಜಿಲ್ಲೆಯ ನಿಮು ಪ್ರದೇಶವು ಸಿಂಧೂ ನದಿಯ ಸಮುದ್ರ ಮಟ್ಟಕ್ಕಿಂತ 11000 ಅಡಿ ಎತ್ತರದಲ್ಲಿದೆ. ಲೇಹ್ ಜಿಲ್ಲೆಯಿಂದ 35 ಕಿಲೋ ಮೀಟರ್ ದೂರದಲ್ಲಿರುವ ನಿಮು ಪ್ರದೇಶ ಪ್ರವಾಸಿಗರ ನೆಚ್ಚಿನ ತಾಣವಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಯಿಂದ ಈ ಪ್ರದೇಶಕ್ಕೊಂದು ಹೊಸ ಐಡೆಂಟಿಟಿ ಸಿಕ್ಕಂತೆ ಆಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ ಈ ನಿಮು ಪ್ರದೇಶದ ವಿಶಿಷ್ಟತೆ ಮತ್ತು ವಿಭಿನ್ನತೆಯ ಕುರಿತು ಒಂದು ವಿಶೇಷ ವರದಿ ನಿಮಗಾಗಿ.

ನಿಮು ಪ್ರದೇಶವು ಪ್ರವಾಸಿಗರ ಸ್ವರ್ಗ

ನಿಮು ಪ್ರದೇಶವು ಪ್ರವಾಸಿಗರ ಸ್ವರ್ಗ

ಲಡಾಖ್ ನ ಲೇಹ್ ಜಿಲ್ಲೆಯ ನಿಮು ಪ್ರವಾಸಿಗರ ಪಾಲಿನ ಸ್ವರ್ಗದಂತಿದೆ. ಸಿಂಧೂನದಿ ಮತ್ತು ಜಂಸ್ಕಾರ್ ನದಿಗಳು ಈ ಗ್ರಾಮವನ್ನು ಸುತ್ತುವರಿದಿವೆ. 2011ರ ಜನಗಣತಿ ಪ್ರಕಾರ ಇದೊಂದು ಪುಟ್ಟ ಪ್ರದೇಶದಲ್ಲಿ 1,100 ಜನವಸತಿಯಿದೆ. ಜಲವಿದ್ಯುತ್ ಸ್ಥಾವರವಿರುವ ಪ್ರದೇಶದಲ್ಲೇ ನಿಮು-ಬಜ್ಗೋ ಜಲಾಶಯವೂ ಇದೆ. ಈ ಜಲಾಶಯವನ್ನು ಪ್ರವಾಸಿಗರ ರಾಫ್ಟಿಂಗ್ ಗೆ ಕೂಡಾ ಬಳಸಿಕೊಳ್ಳಲಾಗುತ್ತದೆ.

ನೈಸರ್ಗಿಕ ಸೌಂದರ್ಯದ ಜತೆ ಕಾರ್ಯತಂತ್ರದ ಮೌಲ್ಯ

ನೈಸರ್ಗಿಕ ಸೌಂದರ್ಯದ ಜತೆ ಕಾರ್ಯತಂತ್ರದ ಮೌಲ್ಯ

ನೈಸರ್ಗಿಕ ಸೌಂದರ್ಯವು ಒಂದು ಕಡೆಯಾದರೆ ಕಾರ್ಯತಂತ್ರದ ಮೌಲ್ಯಗಳನ್ನು ಕೂಡಾ ನಿಮು ಪ್ರದೇಶವು ಹೊಂದಿದೆ. 11 ಸಾವಿರ ಅಡಿ ಎತ್ತರದಲ್ಲಿರುವ ನಿಮು 1999ರಲ್ಲಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ತನ್ನ ಮೌಲ್ಯವನ್ನು ಸಾಬೀತುಪಡಿಸಿತ್ತು. ಪಾಕಿಸ್ತಾನವು ಕಾರ್ಗಿಲ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಈ ಪ್ರದೇಶವು ಸೇನೆಗೆ ಹೆಚ್ಚು ಉಪಯುಕ್ತ ಎನಿಸಿತ್ತು. ಅತಿ ಎತ್ತರದಲ್ಲಿರುವ ನಿಮು ಪ್ರದೇಶಕ್ಕೆ ಸಂಪನ್ಮೂಲಗಳನ್ನು ಕ್ಷಿಪ್ರಗತಿಯಲ್ಲಿ ರವಾನಿಸುವುದು ಸಾಧ್ಯವಾಗಿತ್ತು. ಈ ಅನುಭವದ ಆಧಾರದ ಮೇಲೆಯೇ 14ನೇ ಸೇನಾ ಬ್ರಿಗೇಡ್ ನ ಪ್ರಧಾನ ಕಚೇರಿಯನ್ನು ಇಲ್ಲಿ ತೆರೆಯಲು ಸೂಚನೆ ನೀಡಲಾಗಿತ್ತು.

ನಿಮುವಿನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಸೌಲಭ್ಯ

ನಿಮುವಿನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಸೌಲಭ್ಯ

ದೇಶದ ಎತ್ತರದ ಪ್ರದೇಶದಲ್ಲಿರುವ ನಿಮುವಿನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಸೌಲಭ್ಯವಿದೆ. ನಾಲ್ಕು ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡುವುದಕ್ಕೆ ಇಲ್ಲಿ ಅವಕಾಶವಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಯಂತಾ ಕಾರ್ಯಕ್ರಮಗಳಿಗೆ ನಿಮು ಹೇಳಿ ಮಾಡಿಸಿದ ಪ್ರದೇಶವಾಗಿದೆ. ಇದನ್ನು ಮನಗಂಡು ಇಂಡೋ-ಟಿಬೆಟ್ ಬೆಟಾಲಿಯನ್ ಅಧಿಕಾರಿಗಳು ಪ್ರಧಾನಿ ಭೇಟಿಗೆ ಈ ಪ್ರದೇಶವನ್ನು ಗುರುತು ಪಡಿಸಿದ್ದರು. ಲಡಾಖ್ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಧಾನಮಂತ್ರಿ ಮಾಧ್ಯಮಗೋಷ್ಠಿಗೆ ನಿಮು ಸುರಕ್ಷಿತ ಎಂದು ಉತ್ತರದ ನಿವೃತ್ತ ಸೇನಾ ಕಮಾಂಡರ್ ಜನರಲ್ ಡಿ.ಎಸ್.ಹೂಡಾ ತಿಳಿಸಿದ್ದಾರೆ. ಅಲ್ಲದೇ ಬೌಗೋಳಿಕವಾಗಿಯೂ ನಿಮು ಕಾರ್ಯತಂತ್ರಗಳಿಗೆ ಹೇಳಿ ಮಾಡಿಸಿದ ಸ್ಥಳ ಎಂದು ತಿಳಿಸಿದ್ದಾರೆ.

ಚೀನಾಗೆ ಎಚ್ಚರಿಕೆ ನೀಡಲು ನಿಮು ಆಯ್ಕೆ ಮಾಡಿದ್ದೇಕೆ ಮೋದಿ

ಚೀನಾಗೆ ಎಚ್ಚರಿಕೆ ನೀಡಲು ನಿಮು ಆಯ್ಕೆ ಮಾಡಿದ್ದೇಕೆ ಮೋದಿ

ಲಡಾಖ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಗೆ ನಿಮು ಪ್ರದೇಶವನ್ನೇ ಗುರುತಿಸಿಕೊಳ್ಳುವುದಕ್ಕೂ ಇನ್ನೂ ಒಂದು ಪ್ರಮುಖ ಕಾರಣವಿದೆ. ಲೇಹ್ ಜಿಲ್ಲೆಯ ನಿಮು, ವಿವಾದಿತ ಪ್ರದೇಶದಿಂದ ಕೇವಲ 250 ಕಿಲೋ ಮೀಟರ್ ದೂರದಲ್ಲಿದೆ. ವಿಐಪಿ ಭೇಟಿಯಿಂದ ನಿತ್ಯದ ಕಾರ್ಯಾಚರಣೆಗೆ ಯಾವುದೇ ಅಡ್ಡಿ ಉಂಟಾಗಬಾರದು ಎಂದು ಈ ಪ್ರದೇಶ ಗುರುತಿಸಲಾಗಿದೆ.

ರಸ್ತೆ ನಿರ್ಮಾಣ ಕಾಮಗಾರಿಗೆ ಸಾಕ್ಷಿಯಾದ ಲಡಾಖ್

ರಸ್ತೆ ನಿರ್ಮಾಣ ಕಾಮಗಾರಿಗೆ ಸಾಕ್ಷಿಯಾದ ಲಡಾಖ್

ನಿಮು ಭಾರತೀಯ ಸೇನೆಯ ಮೀಸಲು ಬ್ರಿಗೇಡ್ ಪ್ರಧಾನ ಕಚೇರಿಯಾಗಿದೆ. ಬಾರ್ಡರ್ ರೋಡ್ ಆರ್ಗನೈಸೇಶನ್ (ಬಿಆರ್ಒ) ಜಂಸ್ಕರ್ ಕಣಿವೆಯ ಪಡುಮ್ನಿಂದ ನಿಮುವರೆಗೆ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಇದಾದ ನಂತರ ಲಡಾಖ್ ನಿಂದ ಮನಾಲಿಗೆ ತಲುಪಲು ಲಹೌಲ್ ಕಣಿವೆ ಮೂಲಕ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತದೆ. ಇದರಿಂದ ಲಡಾಖ್ ಗೆ ಸಂಪರ್ಕಿಸುವ 251 ಕಿಲೋ ಮೀಟರ್ ಉದ್ದದ ರಸ್ತೆಗೆ ಉತ್ತೇಜನ ಸಿಗಲಿದೆ.

English summary
Prime Minister Narendra Modi Visits 11000 Altitude Nimu Check Post In Leh Ladakh Region. Here Are The Interesting Things To Know About Nimu Region.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X