• search
  • Live TV
keyboard_backspace

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಜಗತ್ತಿನಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 2 ಕೋಟಿ ಗಡಿ ದಾಟಿದ್ದು, ದಿನದಿಂದ ದಿನಕ್ಕೆ ಆತಂಕವೂ ಹೆಚ್ಚಾಗುತ್ತಿದೆ. ಹೇಗಾದರೂ ಕೊರೊನಾ ಅನ್ನೋ ಹೆಮ್ಮಾರಿಗೆ ಭೂಮಿಯಿಂದಲೇ ಗೇಟ್ ಪಾಸ್ ನೀಡಲು ಇಡೀ ಜಗತ್ತು ಒದ್ದಾಡುತ್ತಿದೆ. ಸದ್ಯದ ಮಟ್ಟಿಗೆ ಆ ಕೆಲಸವನ್ನು ಮಾಡಬಹುದಾದ ಏಕೈಕ ಅಸ್ತ್ರ ವ್ಯಾಕ್ಸಿನ್ ಮಾತ್ರ.

ಹೀಗಾಗಿ ಜಗತ್ತಿನಲ್ಲೀಗ ವ್ಯಾಕ್ಸಿನ್ ವಾರ್ ಶುರುವಾಗಿದ್ದು, ಭಾರತ ಈ ವ್ಯಾಕ್ಸಿನ್ ಯುದ್ಧದ ಕೇಂದ್ರ ಸ್ಥಾನವಾಗಿದೆ. ಏಕೆಂದರೆ ಔಷಧ ರಫ್ತು ಮಾಡುವ ವಿಶ್ವದ ಟಾಪ್ 10 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸೇರಿದ್ದು, ಒಂದು ವೇಳೆ ಲಸಿಕೆ ಸಿದ್ಧವಾದರೆ ಅದನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ಭಾರತದ ಸಹಕಾರ ಬೇಕೆ ಬೇಕು. ಈ ಕಾರಣಕ್ಕೆ ಜಗತ್ತಿನ ಬಲಾಢ್ಯ ರಾಷ್ಟ್ರಗಳು ಭಾರತದ ಮನವೊಲಿಕೆಗೆ ಪ್ರಯತ್ನ ನಡೆಸುತ್ತಿವೆ.

ಅತ್ತ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದ ಬೆನ್ನುಬಿದ್ದಿದ್ದರೆ, ಇತ್ತ ರಷ್ಯಾ ಕೂಡ ಭಾರತವನ್ನು ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಿದೆ. ಆಕ್ಸ್ಫರ್ಡ್ ಲಸಿಕೆ ಭಾರತದಲ್ಲಿ ಪ್ರಯೋಗಾತ್ಮಕ ಹಂತಕ್ಕೆ ಬಂದ ಸಂದರ್ಭದಲ್ಲೇ ರಷ್ಯಾ ಜೊತೆಗಿನ ಲಸಿಕೆ ಒಪ್ಪಂದದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಈ ಬಗ್ಗೆ ಖುದ್ದು ಕೇಂದ್ರ ಆರೋಗ್ಯ ಇಲಾಖೆಯೇ ಮಾಹಿತಿ ನೀಡಿದ್ದು, ಲಸಿಕೆ ಸಂಬಂಧ ರಷ್ಯಾದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಅಂತಾ ತಿಳಿಸಿದೆ. ಇದು ಭಾರತದ ಔಷಧೋತ್ಪನ್ನ ಕ್ಷೇತ್ರವನ್ನು ಮತ್ತಷ್ಟು ಉನ್ನತಿಗೆ ಕೊಂಡೊಯ್ಯುವ ಜೊತೆಗೆ, ಕೊರೊನಾ ನಿವಾರಿಸುವ ಮಹತ್ತರ ಜವಾಬ್ದಾರಿಯನ್ನೂ ಹೊರಿಸಿದೆ.

ಎಲ್ಲೇ ಲಸಿಕೆ ಸಂಶೋಧಿಸಲಿ, ನಮಗೆ ಸಿಕ್ಕೇ ಸಿಗುತ್ತೆ..!

ಎಲ್ಲೇ ಲಸಿಕೆ ಸಂಶೋಧಿಸಲಿ, ನಮಗೆ ಸಿಕ್ಕೇ ಸಿಗುತ್ತೆ..!

ಈ ಮಾತು ಅಕ್ಷರಶಃ ಸತ್ಯ. ಈಗಿನ ಪರಿಸ್ಥಿತಿಯಲ್ಲಿ ಭಾರತ ಲಸಿಕೆ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೆ ಲಸಿಕೆ ಉತ್ಪಾದನೆಯ ಜವಾಬ್ದಾರಿ ಭಾರತೀಯ ಕಾರ್ಖಾನೆಗಳಿಗೆ ಸಿಕ್ಕರೆ ಸಹಜವಾಗಿಯೇ ಇಲ್ಲಿ ಕೂಡ ವ್ಯಾಕ್ಸಿನ್ ಸುಲಭವಾಗಿ ಸಿಗಲಿದೆ. ಈಗಾಗಲೇ ಭಾರತದಲ್ಲಿ 3 ಪ್ರತ್ಯೇಕ ಕೊರೊನಾ ಲಸಿಕೆಗಳ ಪ್ರಯೋಗ ನಡೆಯುತ್ತಿದ್ದು, 1750 ಮಂದಿ ಸ್ವಯಂ ಸೇವಕರು ಈ ಪ್ರಯೋಗದಲ್ಲಿ ಭಾಗಿಯಾಗಿದ್ದಾರೆ.

ರಷ್ಯಾ ಜೊತೆಗೆ ವ್ಯಾಕ್ಸಿನ್ ಒಪ್ಪಂದ?

ರಷ್ಯಾ ಜೊತೆಗೆ ವ್ಯಾಕ್ಸಿನ್ ಒಪ್ಪಂದ?

ಈ ಪೈಕಿ ಸೀರಮ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸುತ್ತಿರುವ ಆಕ್ಸ್‌ಫರ್ಡ್ ಲಸಿಕೆ ಸೇರಿದಂತೆ ಭಾರತ್ ಬಯೋಎನ್‌ಟೆಕ್‌ನ ಕೋವ್ಯಾಕ್ಸಿನ್ ಹಾಗೂ ಜೈಡಸ್ ಕ್ಯಾಡಿಲ್ಲಾದ ಝೈಕೋವ್ ವಿ ಲಸಿಕೆಯ ಪ್ರಯೋಗ ನಡೆಯುತ್ತಿದೆ. ಈ ಹೊತ್ತಲ್ಲೇ ರಷ್ಯಾ ಜೊತೆಗೆ ವ್ಯಾಕ್ಸಿನ್ ಒಪ್ಪಂದದ ಬಗ್ಗೆ ಭಾರತ ಸುಳಿವು ಕೊಟ್ಟಿದ್ದು, ಈ ಒಪ್ಪಂದ ನಡೆದರೆ ‘ಸ್ಪುಟ್ನಿಕ್-V' ಕೂಡ ಭಾರತದಲ್ಲಿ ಪ್ರಯೋಗಕ್ಕೆ ಬರಲಿದೆ. ಆ ಮೂಲಕ ಭಾರತದಲ್ಲಿ ಒಟ್ಟು 4 ವ್ಯಾಕ್ಸಿನ್ಗಳ ಪ್ರಯೋಗಕ್ಕೆ ದಾರಿಮಾಡಿದಂತೆ ಆಗಲಿದೆ.

‘ವ್ಯಾಕ್ಸಿನ್ ವಾರ್’ ಕೇಂದ್ರ ಭಾರತ..!

‘ವ್ಯಾಕ್ಸಿನ್ ವಾರ್’ ಕೇಂದ್ರ ಭಾರತ..!

ಅತ್ತ ಪಾಶ್ಚಿಮಾತ್ಯ ಕಂಪನಿಗಳು ವ್ಯಾಕ್ಸಿನ್ ಉತ್ಪಾದನೆಗೆ ಭಾರತದ ಕಂಪನಿಗಳ ಬಾಗಿಲು ಬಡಿಯುತ್ತಿರುವಾಗಲೇ, ರಷ್ಯಾ ಕೂಡ ಭಾರತದ ಜೊತೆ ತನ್ನ ‘ಸ್ಪುಟ್ನಿಕ್-V' ಲಸಿಕೆ ಉತ್ಪಾದನೆಗೆ ತುದಿಗಾಲಲ್ಲಿ ನಿಂತಿದೆ. ರಷ್ಯಾದ ಗಮೆಲಿ ರಿಸರ್ಚ್‌ ಇನ್ಸ್‌ಟಿಟ್ಯೂಟ್‌ ಆಫ್‌ ಎಪಿಡೆಮಿಯಾಲಜಿ ಆ್ಯಂಡ್‌ ಮೈಕ್ರೊಬಯಾಲಜಿ ಹಾಗೂ ಆರ್‌ಡಿಐಎಫ್‌ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲು ಪ್ಲಾನ್ ನಡೆಯುತ್ತಿದೆ.

ಪೈಪೋಟಿ ಆರ್ಥಿಕತೆಗೂ ಟಾನಿಕ್ ನೀಡಲಿದೆ

ಪೈಪೋಟಿ ಆರ್ಥಿಕತೆಗೂ ಟಾನಿಕ್ ನೀಡಲಿದೆ

ಮಾಸ್ಕೋದ ಭಾರತೀಯ ರಾಯಭಾರ ಕಚೇರಿ ಲಸಿಕೆ ತಯಾರಿಸಿದ ರಷ್ಯಾ ವೈದ್ಯಕೀಯ ಸಂಶೋಧನಾ ಸಂಸ್ಥೆ ಜೊತೆ ಸಂಪರ್ಕದಲ್ಲಿದೆ. ಇದನ್ನೆಲ್ಲಾ ಗಮನಿಸುತ್ತಿದ್ದರೆ ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ಜೊತೆಗೆ ಲಸಿಕೆ ತಯಾರಿಕೆಯ ಒಪ್ಪಂದಕ್ಕೆ ರಷ್ಯಾ ಸಹಿ ಹಾಕುವ ಸಂಭವ ಹೆಚ್ಚಾಗಿದೆ. ಇದು ನಡೆದರೆ ಭಾರತ ಜಗತ್ತಿನ ‘ವ್ಯಾಕ್ಸಿನ್ ವಾರ್'ನ ಕೇಂದ್ರವಾಗುವುದರಲ್ಲಿ ಅನುಮಾನವೇ ಇಲ್ಲ. ಈ ಪೈಪೋಟಿ ಭಾರತೀಯ ಔಷಧೋತ್ಪನ್ನ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಜೊತೆಗೆ, ಆರ್ಥಿಕತೆಗೂ ಟಾನಿಕ್ ನೀಡಲಿದೆ.

English summary
The war of the vaccine has begun between the wealthiest countries. And the wealthiest countries are convincing India for the manufacturing of there corona vaccine.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X