Petrol, Diesel Price Hike: ಇಂಧನ ಬೆಲೆಯಲ್ಲಿ ಮತ್ತೆ ಹೆಚ್ಚಳ, ಈವರೆಗೆ 5 ರೂ ಏರಿಕೆ, ನಿಮ್ಮೂರಲ್ಲಿ ಎಷ್ಟಿದೆ?
Petrol-Diesel Price Updates: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹೆಚ್ಚುತ್ತಲೇ ಇದ್ದು, ಇಂದು ಶನಿವಾರ ಮತ್ತೆ ಏರಿಕೆ ಕಂಡಿವೆ. ಒಂದು ಲೀಟರ್ ಪೆಟ್ರೋಲ್‌ಗೆ 87 ಪೈಸೆ, ಡೀಸೆಲ್‌ಗೆ 91 ಪೈಸೆ ಹೆಚ್ಚಳವಾಗಿದೆ. ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ಆಗುತ್ತಿದೆ. ಸರ್ಕಾರಿ ತೈಲ ಕಂಪನಿಗಳು ಈ ತಿಂಗಳು ಮೂರನೇ ಬಾರಿಗೆ ಇಂಧನ ಬೆಲೆ ಪರಿಷ್ಕರಣೆ ಮಾಡಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ಬೆಲೆ 98.64 ರೂ.ನಿಂದ 99.51 ರೂ (87 ಪೈಸೆ ಏರಿಕೆ) ಹೆಚ್ಚಾಗಿದೆ. ಡೀಸೆಲ್ ದರ 91.58 ರಿಂದ 92.49 ರೂ (91 ಪೈಸೆ ಏರಿಕೆ) ಹೆಚ್ಚಳವಾಗಿದೆ. ನಿರಂತರ ಇಂಧನ ಬೆಲೆ ಏರಿಕೆಯು ಪ್ರಯಾಣಿಕರು, ವಾಹನ ಸವಾರರ ಮೇಲಿನ ಆರ್ಥಿಕ ಒತ್ತಡ ಹೆಚ್ಚಿಸುತ್ತಿದೆ. ಇಂಧನ ಕೊರತೆ ಇದೆ ಎನ್ನಲಾಗಿತ್ತು. ಅಷ್ಟರಲ್ಲಾಗಲೇ ಭಾರತದಲ್ಲಿ ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಭರವಸೆ ನೀಡಿದೆ. ಸಾರ್ವಜನಿಕರು ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಇಂಧನ ಖರೀದಿಸುಂತೆ ಸಲಹೆ ನೀಡಲಾಗಿದೆ. ಕರ್ನಾಟಕದಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ನಿಯಮ ಜಾರಿಗೊಳಿಸಿದ್ದು, ದಾಸ್ತಾನು, ಹೇರಳ ಪ್ರಮಾಣದ ಇಂಧನ ಖರೀದಿಗೆ ಬ್ರೇಕ್ ಹಾಕಲಾಗಿದೆ. ನಿಯಮ ಪಾಲಿಸುವಂತೆ ಕಟ್ಟುನಿಟ್ಟಿನ ತಾಕೀತು ಮಾಡಲಾಗಿದೆ.

ಇಂಧನ ದರ ಒಟ್ಟಾರೆ 5 ರೂ.ಹೆಚ್ಚಳ
ಪಿಟಿಐ ವರದಿ ಪ್ರಕಾರ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಗಳು ದೇಶಾದ್ಯಂತ ಸ್ಥಿರವಾಗಿವೆ. ನಾಗರಿಕರು ಆತಂಕಪಡಬೇಕಿಲ್ಲ. ಕೆಲವು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿನ ಇಂಧನ ಪೂರೈಕೆ ಒತ್ತಡ, ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಸಮನ್ವಯದೊಂದಿಗೆ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಸಚಿವಾಲಯ ಹೇಳಿದೆ. ಮೇ 16ರಂದು ಸರ್ಕಾರಿ ತೈಲ ಕಂಪನಿಗಳ ಪರಿಷ್ಕರಣೆ ನಂತರ ಹಲವು ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸುಮಾರು 3 ರೂ.ನಷ್ಟು ಏರಿಕೆ ಆದವು. ಮೇ 19ರಂದು ಎಲ್ಲಾ ಮಹಾನಗರಗಳಲ್ಲಿ ಬೆಲೆಗಳು ಮತ್ತೆ 90 ಪೈಸೆ ಹೆಚ್ಚಾದವು. ಈವರೆಗೆ ಇಂಧನ ಬೆಲೆಗಳು ಪ್ರತಿ ಲೀಟರ್‌ಗೆ ಸುಮಾರು 5 ರೂ.ನಷ್ಟು ಏರಿವೆ.
ಪರಿಷ್ಕೃತ ದರ ಮಾಹಿತಿ (ಇಂದಿನ ಏರಿಕೆ +)
ದೆಹಲಿ: ಪೆಟ್ರೋಲ್ 99.51 ರೂ. (+0.87) ಮತ್ತು ಡೀಸೆಲ್ 92.49 ರೂ. (+0.91)
ಕೋಲ್ಕತ್ತಾ: ಪೆಟ್ರೋಲ್ 110.64 ರೂ. (+0.87) ಮತ್ತು ಡೀಸೆಲ್ 97.02 ರೂ. (+0.91) ಮುಂಬೈ: ಪೆಟ್ರೋಲ್ 108.49 ರೂ. (+0.87) ಮತ್ತು ಡೀಸೆಲ್ 95.02 ರೂ. (+0.91)
ಚೆನ್ನೈ: ಪೆಟ್ರೋಲ್ 105.31 ರೂ. (+0.87) ಮತ್ತು ಡೀಸೆಲ್ 96.98 ರೂ. (+0.91) ಗುರುಗ್ರಾಮ್: ಪೆಟ್ರೋಲ್ 100.38 ರೂ.(+0.87), ಡೀಸೆಲ್ 92.92 ರೂ. (+0.91) ನೋಯ್ಡಾ: ಪೆಟ್ರೋಲ್ 98.78 ರೂ. (+0.87), ಡೀಸೆಲ್ 93.12 ರೂ. (+0.91)
ಸಾರಿಗೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಕಳವಳ
ಇಂಧನಗಳ ಬೆಲೆ ಏರಿಕೆ ಆಗುತ್ತಿದ್ದಂತೆ ಸಾರಿಗೆ ವೆಚ್ಚ, ಪ್ರಯಾಣ ದರ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಅದರೊಂದಿಗೆ ಲಾಜಿಸ್ಟಿಕ್ಸ್ ವೆಚ್ಚ, ಅಗತ್ಯ ಸರಕು, ಆಹಾರ ಪದಾರ್ಥಗಳ ಬೆಲೆಗಳು ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಆದರೆ, ಏರುತ್ತಿರುವ ಆಮದು ವೆಚ್ಚ ಸರಿದೂಗಿಸಲು ಮತ್ತು ಜಾಗತಿಕ ಅನಿಶ್ಚಿತತೆಯ ನಡುವೆ ಪೂರೈಕೆ ಸ್ಥಿರತೆ ಖಚಿತಪಡಿಸಲು ಈ ಪರಿಷ್ಕರಣೆಗಳು ಅವಶ್ಯಕವಾಗಿದೆ.
ಭಾರತಕ್ಕೆ ಒಟ್ಟು ಶೇ. 85 ಶತದಷ್ಟು ಕಚ್ಚ ತೈಲ ಬೇರೆ ದೇಶಗಳಿಂದ ಆಮದಾಗುತ್ತದೆ. ಅಲ್ಲಿ ನಡೆಯುವ ಬದಲಾವಣೆಗಳು ಭಾರತದ ಇಂಧನೆ ಬೆಲೆಯನ್ನು ನಿರ್ಧರಿಸುತ್ತವೆ. ಅಂತೆಯೇ ಕೊಲ್ಲಿ ರಾಷ್ಟ್ರಗಳಲ್ಲಿ ನಡೆದ ಯುದ್ಧಗಳು, ಹಾರ್ಮುಜ್ ಜಲಸಂಧಿ ಬಂದ್ ಪರಿಣಾಮ ಇಂಧನ ಪೂರೈಕೆ ಸರಪಳಿ ಮೇಲೆ ಸಾಕಷ್ಟು ಪರಿಣಾಮ ಉಂಟಾಗಿತ್ತು. ಜನರು ಆತಂಕಗೊಂಡಿದ್ದರು. ಸದ್ಯ ಪೂರೈಕೆ, ಆಮದು ಎಲ್ಲ ಪ್ರಕ್ರಿಯೆಗಳು ಸಹಜ ಸ್ಥಿತಿಗೆ ಮರಳಿವೆ.













Click it and Unblock the Notifications