keyboard_backspace

'ಸ್ಥಳಾಂತರ ಕಾರ್ಯ ಮುಂದುವರಿಕೆಗೆ ಅವಕಾಶ ನೀಡಲು ತಾಲಿಬಾನ್‌ ಸಮ್ಮತಿ': 100 ರಾಷ್ಟ್ರಗಳ ಗುಂಪು

Google Oneindia Kannada News

ವಾಷಿಂಗ್ಟನ್‌, ಆಗಸ್ಟ್‌ 30: "ವಿದೇಶಿಗಳು ಹಾಗೂ ಸರಿಯಾದ ದಾಖಲೆಗಳನ್ನು ಹೊಂದಿರುವ ಅಫ್ಘಾನಿಸ್ತಾನಿಗಳಿಗೆ ದೇಶವನ್ನು ತೊರೆಯಲು ಸ್ಥಳಾಂತರ ಕಾಲಾವಧಿ ಮುಗಿದ ಬಳಿಕವೂ ಸುರಕ್ಷಿತ ಹಾಗೂ ಕ್ರಮ ಬದ್ಧವಾಗಿ ಅವಕಾಶ ನೀಡುವುದಾಗಿ ನೂರು ದೇಶಗಳಿಗೆ ತಾಲಿಬಾನ್‌ ಭರವಸೆ ನೀಡಿದೆ," ಎಂದು 100 ರಾಷ್ಟ್ರಗಳ ಗುಂಪು ಹೇಳಿದೆ.

ಯುಎಸ್, ಬ್ರಿಟನ್‌, ಫ್ರಾನ್ಸ್‌ ಹಾಗೂ ಜರ್ಮನಿಯನ್ನು ಒಳಗೊಂಡ ನೂರು ದೇಶಗಳ ಗುಂಪು ಈ ಮಾಹಿತಿಯನ್ನು ನೀಡಿದೆ. "ಎಲ್ಲಾ ವಿದೇಶಿ ನಾಗರಿಕರನ್ನು ಹಾಗೂ ಸರಿಯಾದ ದಾಖಲೆಗಳನ್ನು ಹೊಂದಿರುವ ಅಫ್ಘಾನಿಸ್ತಾನಿಗಳಿಗೆ ಸುರಕ್ಷಿತ ಹಾಗೂ ಕ್ರಮ ಬದ್ಧವಾಗಿ ದೇಶವನ್ನು ತೊರೆಯಲು ಅವಕಾ ನೀಡುವುದನ್ನು ಮುಂದುವರಿಸುತ್ತೇವೆ ಎಂದು ನಮಗೆ ಭರವಸೆ ನೀಡಿದೆ," ಎಂದು ಹೇಳಿಕೆಯಲ್ಲಿ 100 ರಾಷ್ಟ್ರಗಳ ಗುಂಪು ತಿಳಿಸಿದೆ.

 'ಆ. 31 ರ ಬಳಿಕವೂ ಅಫ್ಘಾನಿಗಳು ದೇಶ ತೊರೆಯಲು ತಾಲಿಬಾನ್‌ ಸಮ್ಮತಿ': ಜರ್ಮನಿ ರಾಯಭಾರಿ 'ಆ. 31 ರ ಬಳಿಕವೂ ಅಫ್ಘಾನಿಗಳು ದೇಶ ತೊರೆಯಲು ತಾಲಿಬಾನ್‌ ಸಮ್ಮತಿ': ಜರ್ಮನಿ ರಾಯಭಾರಿ

"ನಮ್ಮ ರಾಷ್ಟ್ರದ ಪ್ರಜೆಗಳು, ನಮ್ಮ ರಾಷ್ಟ್ರದ ನಾಗರಿಕರು, ಉದ್ಯೋಗಿಗಳು, ನಮ್ಮೊಂದಿಗೆ ಕಾರ್ಯನಿರ್ವಹಿಸಿದ ಅಫ್ಘಾನಿಸ್ತಾನಿಗಳು ಹಾಗೂ ಯಾರು ಅಪಾಯದಲ್ಲಿ ಇದ್ದೀರಿ ಅವರು, ಅಫ್ಘಾನಿಸ್ತಾನದಿಂದ ತಾವು ಬಯಸಿದ ರಾಷ್ಟ್ರಕ್ಕೆ ಪ್ರಯಾಣ ಮಾಡಬಹುದು ಎಂದು ನಾವು ಭರವಸೆ ನೀಡಲು ಭಯಸುತ್ತೇವೆ," ಎಂದು ಹೇಳಿರುವ ಈ ಹೇಳಿಕೆಗೆ ಯುರೋಪಿಯನ್‌ ಯೂನಿಯನ್‌ ಹಾಗೂ ನ್ಯಾಟೋ ಸಹಿ ಮಾಡಿದೆ.

 ಅಗತ್ಯ ಪ್ರಯಾಣ ದಾಖಲೆ ಒದಗಿಸಲಾಗುವುದು

ಅಗತ್ಯ ಪ್ರಯಾಣ ದಾಖಲೆ ಒದಗಿಸಲಾಗುವುದು

"ಗೊತ್ತು ಪಡಿಸಿದ ಅಫ್ಘಾನಿಸ್ತಾನಿಗಳಿಗೆ ಅಗತ್ಯವಾದ ಪ್ರಯಾಣ ದಾಖಲೆಗಳನ್ನು ನೀಡುವ ಕಾರ್ಯವು ಮುಂದುವರಿಯಲಿದೆ. ತಾಲಿಬಾನ್‌ಗಳು ನಮ್ಮ ದೇಶಗಳಿಗೆ ಪ್ರಯಾಣಿಸಬಹುದೆಂಬ ಸ್ಪಷ್ಟ ನಿರೀಕ್ಷೆ ಮತ್ತು ಬದ್ಧತೆಯನ್ನು ನಾವು ಹೊಂದಿದ್ದೇವೆ," ಎಂದು ಕೂಡಾ ಇದೇ ಸಂದರ್ಭದಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಈ ಒಪ್ಪಂದಕ್ಕೆ ಸಹಿ ಹಾಕಿದ ರಾಷ್ಟ್ರಗಳಲ್ಲಿ ಚೀನಾ ಹಾಗೂ ರಷ್ಯಾ ಇಲ್ಲ. ಚೀನಾ ಹಾಗೂ ರಷ್ಯಾ ಈ ಒಪ್ಪಂದಕ್ಕೆ ಸಹಿ ಮಾಡಿಲ್ಲ ಎಂದು ಹೇಳಲಾಗಿದೆ. ಯುಎಸ್ ಅಧ್ಯಕ್ಷ ಜೋ ಬೈಡನ್‌ರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್, ಇದಕ್ಕೂ ಮುನ್ನ, "ಅಮೆರಿಕನ್ನರು ಯಾರೂ ಕೂಡಾ ಅಫ್ಘಾನಿಸ್ತಾನದಲ್ಲಿ ಬಾಕಿ ಉಳಿಯಲಾರರು," ಎಂದು ಭರವಸೆ ನೀಡಿದ್ದಾರೆ. ಹಾಗೆಯೇ "ತಾಲಿಬಾನ್‌ ನಮ್ಮೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ," ಎಂದು ಯುಎಸ್‌ ಹೇಳಿದೆ.

'ಇನ್ನು ಕೆಲವೇ ಗಂಟೆಯಲ್ಲಿ ಅಫ್ಘಾನ್‌ನಿಂದ ಸ್ಥಳಾಂತರ ನಿಲ್ಲಿಸುತ್ತೇವೆ' ಎಂದ ಬ್ರಿಟನ್‌'ಇನ್ನು ಕೆಲವೇ ಗಂಟೆಯಲ್ಲಿ ಅಫ್ಘಾನ್‌ನಿಂದ ಸ್ಥಳಾಂತರ ನಿಲ್ಲಿಸುತ್ತೇವೆ' ಎಂದ ಬ್ರಿಟನ್‌

 ಅಫ್ಘಾನ್‌ ಬಗ್ಗೆ ವಿಶ್ವಸಂಸ್ಥೆಯ ಖಾಯಂ ಸದಸ್ಯ ದೇಶಗಳ ಸಭೆ

ಅಫ್ಘಾನ್‌ ಬಗ್ಗೆ ವಿಶ್ವಸಂಸ್ಥೆಯ ಖಾಯಂ ಸದಸ್ಯ ದೇಶಗಳ ಸಭೆ

ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್‌ನ ಖಾಯಂ ಸದಸ್ಯ ದೇಶಗಳಾದ ಯುಎಸ್‌, ಬ್ರಿಟನ್‌, ಚೀನಾ, ಫ್ರಾನ್ಸ್‌ ಹಾಗೂ ರಷ್ಯಾ ಸೋಮವಾರ ಅಫ್ಘಾನಿಸ್ತಾನ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಲಿದೆ. ಸುಮಾರು ಎರಡು ದಶಕಗಳ ಬಳಿಕ ಯುಎಸ್‌ ಸೇನಯು ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ವಾಪಾಸ್‌ ಕರೆಸಿಕೊಳ್ಳುವ ಕಾರ್ಯ ಆರಂಭ ಮಾಡಿದ ನಂತರ ತಾಲಿಬಾನ್‌ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದೆ. ರಾಷ್ಟ್ರ ರಾಜಧಾನಿ ಕಾಬೂಲ್‌ನಿಂದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್‌ ಘನಿ ಪಲಾಯನ ಮಾಡುತ್ತಿದ್ದಂತೆ ತಾಲಿಬಾನ್‌ ಕಾಬೂಲ್‌ ಅನ್ನು ಕೂಡಾ ವಶಕ್ಕೆ ಪಡೆಯುವ ಮೂಲಕ ಸಂಪೂರ್ಣ ಅಫ್ಘಾನಿಸ್ತಾನವನ್ನೇ ವಶಕ್ಕೆ ಪಡೆದಿದೆ. ಈ ಬೆನ್ನಲ್ಲೇ ಹಲವಾರು ದೇಶಗಳು ತಮ್ಮ ರಾಷ್ಟ್ರದ ಜನರನ್ನು ಅಫ್ಘಾನಿಸ್ತಾನದಿಂದ ವಾಪಾಸ್‌ ಕರೆಸಿಕೊಳ್ಳುತ್ತಿದೆ. ಹಾಗೆಯೇ ಅಫ್ಘಾನ್‌ ಜನರಿಗೂ ಕೂಡಾ ಆಶ್ರಯ ನೀಡುತ್ತಿದೆ. ಈ ಸ್ಥಳಾಂತರ ಪ್ರಕ್ರಿಯೆಯು ಆಗಸ್ಟ್‌ 31 ರಂದು ಅಂತ್ಯವಾಗಲಿದ್ದು ಈ ಬಳಿಕ ಯಾವುದೇ ರಕ್ಷಣಾ ಕಾರ್ಯ ನಡೆಸಲು ವಿದೇಶಗಳಿಗೆ ಅವಕಾಶ ನೀಡುವುದಿಲ್ಲ ಎಂದು ತಾಲಿಬಾನ್‌ ಹೇಳಿತ್ತು. ಹಾಗೆಯೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಕೂಡಾ ಸ್ಥಳಾಂತರ ಪ್ರಕ್ರಿಯೆ ಆಗಸ್ಟ್‌ 31 ರಂದು ಕೊನೆಯಾಗಲಿದೆ. ಗಡುವು ವಿಸ್ತರಣೆ ಇಲ್ಲ ಎಂದು ಹೇಳಿದ್ದರು. ಆದರೆ ಈಗ ಸ್ಥಳಾಂತರಕ್ಕೆ ತಾಲಿಬಾನ್‌ ಅವಕಾಶ ನೀಡುವುದಾಗಿ ಭರವಸೆ ನೀಡಿದೆ ಎಂದು ದೇಶಗಳು ಹೇಳಿದೆ. ಹಾಗೆಯೇ ಈ ಎಲ್ಲಾ ಬೆಳವಣಿಗೆಯ ಬಗ್ಗೆ ಯುಎಸ್‌, ಬ್ರಿಟನ್‌, ಚೀನಾ, ಫ್ರಾನ್ಸ್‌ ಹಾಗೂ ರಷ್ಯಾ ಸಭೆ ನಡೆಸಲಿದೆ.

 ಗಡುವು ಪೂರ್ಣಕ್ಕೂ ಮುನ್ನ ಸ್ಥಳಾಂತರ ಪ್ರಕ್ರಿಯೆ ಸ್ಥಗಿತಗೊಳಿಸಿದ ರಾಷ್ಟ್ರಗಳು

ಗಡುವು ಪೂರ್ಣಕ್ಕೂ ಮುನ್ನ ಸ್ಥಳಾಂತರ ಪ್ರಕ್ರಿಯೆ ಸ್ಥಗಿತಗೊಳಿಸಿದ ರಾಷ್ಟ್ರಗಳು

ಅಫ್ಘಾನಿಸ್ತಾನದಿಂದ ಸ್ಥಳಾಂತರ ಪ್ರಕ್ರಿಯೆ ಕೊನೆಗೊಳ್ಳುವುದು ಆಗಸ್ಟ್‌ 31 ರಂದು. ಆದರೆ ಈಗಾಗಲೇ ಕೆಲವು ರಾಷ್ಟ್ರಗಳು ಸ್ಥಳಾಂತರ ಪ್ರಕ್ರಿಯೆಯನ್ನು ಅಂತ್ಯಗೊಳಿಸಿದೆ. ಬ್ರಿಟನ್‌ ಶುಕ್ರವಾರ ಸ್ಥಳಾಂತರ ಪ್ರಕ್ರಿಯೆಯನ್ನು ಕೊನೆಗೊಳಿಸಿದೆ. ತನ್ನ ಸ್ಥಳಾಂತರ ಪ್ರಕ್ರಿಯೆ ಕೊನೆಗೊಳ್ಳುವ ಮುನ್ನವೇ ಶುಕ್ರವಾರ, ಇನ್ನು ಕೆಲವೇ ಗಂಟೆಗಳಲ್ಲಿ ನಾವು ಸ್ಥಳಾಂತರ ಪ್ರಕ್ರಿಯೆಯನ್ನು ಕೊನೆಗೊಳಿಲಿದ್ದೇವೆ ಎಂದು ಬ್ರಿಟನ್‌ ಸೂಚನೆ ನೀಡಿದೆ. ಇಸ್ಲಾಮಿಕ್‌ ಸ್ಟೇಟ್‌ನ ಆತ್ಮಾಹುತಿ ಬಾಂಬ್‌ಕೋರ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ 13 ಯುಎಸ್‌ನ ಯೋಧರು ಸೇರಿದಂತೆ ನೂರಾರು ಮಂದಿಯ ಸಾವಿಗೆ ಕಾರಣವಾದ ಬೆನ್ನಲ್ಲೇ ಬ್ರಿಟನ್‌ನಿಂದ ಈ ಹೇಳಿಕೆಯು ಹೊರ ಬಂದಿದ್ದ ಹಿನ್ನೆಲೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಫ್ಘಾನ್‌ನ ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಮ್ಮ ಜನರನ್ನು ಸ್ಥಳಾಂತರ ಮಾಡುವ ಕಾರ್ಯವು ಕೊನೆಯ ಹಂತ ತಲುಪಿದೆ ಎಂದು ಬ್ರಿಟನ್‌ನ ರಕ್ಷಣಾ ಸಚಿವ ಬೆನ್ ವ್ಯಾಲೇಸ್ ಹೇಳಿದ್ದರು. "ಅಫ್ಘಾನಿಸ್ತಾನದಿಂದ ಎಲ್ಲರನ್ನೂ ಈ ರಕ್ಷಣೆ ಕಾರ್ಯಾಚರಣೆ ಸಂದರ್ಭದಲ್ಲಿ ಸ್ಥಳಾಂತರ ಮಾಡಲು ಸಾಧ್ಯವಾಗಿಲ್ಲ ಎಂಬ ಹಿನ್ನೆಲೆ ವಿಷಾದ ವ್ಯಕ್ತಪಡಿಸುತ್ತೇನೆ," ಎಂದು ಕೂಡಾ ಬ್ರಿಟನ್‌ನ ರಕ್ಷಣಾ ಸಚಿವರು ಹೇಳಿದ್ದರು. ಇನ್ನು ಫ್ರಾನ್ಸ್‌ ಕೂಡಾ ಶುಕ್ರವಾರವೇ ಸ್ಥಳಾಂತರ ಕಾರ್ಯ ಕೊನೆಗೊಳಿಸಿದೆ. ಇನ್ನು ಸ್ಪೇನ್‌, "ನಾವು ಅಫ್ಘಾನ್‌ದಿಂದ ಎಲ್ಲರನ್ನು ರಕ್ಷಿಸಲಾಗದು," ಎಂದು ಹೇಳಿದೆ.

ಅಫ್ಘಾನ್‌ದಿಂದ ಎಲ್ಲರನ್ನು ರಕ್ಷಿಸಲಾಗದು ಎಂದ ಸ್ಪೇನ್‌ಅಫ್ಘಾನ್‌ದಿಂದ ಎಲ್ಲರನ್ನು ರಕ್ಷಿಸಲಾಗದು ಎಂದ ಸ್ಪೇನ್‌

 ಆ. 31 ರ ಬಳಿಕವೂ ದೇಶ ತೊರೆಯಲು ತಾಲಿಬಾನ್‌ ಸಮ್ಮತಿಸಿದೆ ಎಂದಿದ್ದ ಜರ್ಮನಿ

ಆ. 31 ರ ಬಳಿಕವೂ ದೇಶ ತೊರೆಯಲು ತಾಲಿಬಾನ್‌ ಸಮ್ಮತಿಸಿದೆ ಎಂದಿದ್ದ ಜರ್ಮನಿ

ಅಮೆರಿಕಕ್ಕೆ ಕಾಬೂಲ್‌ ವಿಮಾನ ನಿಲ್ದಾಣದ ಉಸ್ತುವಾರಿ ಇಲ್ಲದ ಸಂದರ್ಭದಲ್ಲಿಯೂ ಅಂದರೆ ಆಗಸ್ಟ್‌ 31 ರ ಬಳಿಕವೂ ಸರಿಯಾದ ದಾಖಲೆಗಳನ್ನು ಹೊಂದಿರುವ ಅಫ್ಘಾನಿಸ್ತಾನಿಗಳಿಗೆ ದೇಶವನ್ನು ತೊರೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ತಾಲಿಬಾನ್‌ನ ಸಂಧಾನಕಾರರು ಭರವಸೆ ನೀಡಿದ್ದಾರೆ ಎಂದು ಜರ್ಮನಿ ಹೇಳಿತ್ತು. ಈ ಬಗ್ಗೆ ಟ್ಟಿಟ್ಟರ್‌ ಮೂಲಕ ಮಾಹಿತಿ ನೀಡಿರುವ ಜರ್ಮನಿಯ ರಾಯಭಾರಿ ಮಾರ್ಕಸ್ ಪೊಟ್ಜೆಲ್, "ನಾನು ತಾಲಿಬಾನ್‌ನ ಉಪ ಮುಖ್ಯ ಸಂಧಾನಕಾರ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್‌ ಜೊತೆ ಮಾತನಾಡಿದೆ. ಸರಿಯಾದ ದಾಖಲೆಗಳನ್ನು ಹೊಂದಿರುವ ಅಫ್ಘಾನಿಸ್ತಾನಿಗಳಿಗೆ ಆಗಸ್ಟ್‌ 31 ರ ಬಳಿಕವೂ ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್‌ ಭರವಸೆ ನೀಡಿದ್ದಾರೆ," ಎಂದು ತಿಳಿಸಿದ್ದರು. ಮಾನವ ಹಕ್ಕುಗಳ ಹೋರಾಟಗಾರರು ಅಥವಾ ಜರ್ಮನಿಯ ಮಾಜಿ ಸ್ಥಳೀಯ ಉದ್ಯೋಗಿಗಳು ಸೇರಿದಂತೆ ದುರ್ಬಲ ಅಫ್ಘಾನಿಸ್ತಾನಿಗಳು ಆಗಸ್ಟ್‌ 31 ರ ಕೊನೆಯ ದಿನಾಂಕದ ಬಳಿಕವೂ ಅಫ್ಘಾನಿಸ್ತಾನವನ್ನು ತೊರೆಯಬಹುದು ಎಂದು ನಮಗೆ ತಾಲಿಬಾನ್‌ ಭರವಸೆ ನೀಡಿದ ಭಾಗವಾಗಿ ನಾವು ಜನರಿಗೆ ಭರವಸೆ ನೀಡಲು ಬಯಸುತ್ತೇವೆ," ಎಂದು ಜರ್ಮನಿ ಹೇಳಿಕೊಂಡಿತ್ತು.

(ಒನ್‌ ಇಂಡಿಯಾ ಸುದ್ದಿ)

English summary
The Taliban has assured 100 countries that it will continue to allow foreigners and Afghans with foreign travel papers to leave the country.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X