ರಿಯಲ್ ಮ್ಯಾಡ್ರಿಡ್ ರಿಯಲ್ ಹೀರೋ ಜಿನೆದಿನ್ ಜಿದಾನೆ!

Posted By:
Subscribe to Oneindia Kannada

ಮಿಲಾನ್, ಮೇ 30: ಸ್ಪೇನಿನ ರಿಯಲ್ ಮ್ಯಾಡ್ರಿಡ್ ತಂಡ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆದ್ದು ಎರಡು ದಿನವಾದರೂ ಇನ್ನೂ ಸಂಭ್ರಮಾಚರಣೆ ಕಡಿಮೆಯಾಗಿಲ್ಲ. ಅಟ್ಲೆಟಿಕೋ ಮ್ಯಾಡ್ರಿಡ್ ವಿರುದ್ಧ ಪೆನಾಲ್ಟಿ ಶೂಟೌಟ್ ನಲ್ಲಿ 5-3 ಅಂತರದಲ್ಲಿ ಜಯ ಗಳಿಸುವ ಮೂಲಕ 11ನೇ ಬಾರಿಗೆ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಗೆಲುವಿಗೆ ಕಾರಣವಾದವರು ಮುಖ್ಯ ಕೋಚ್ ಜಿನೆದೆನ್ ಜಿದಾನೆ ಎಂದರೆ ತಪ್ಪಾಗಲಾರದು.

ಮಿಲಾನ್ ನಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ 90 ನಿಮಿಷಗಳ ಆಟ ಮುಗಿದ ಬಳಿಕ ಎರಡು ತಂಡಗಳು 1-1 ಗೋಲುಗಳನ್ನು ಸಾಧಿಸಿ ಸಮಬಲ ಹೋರಾಟ ಕಂಡಿತ್ತು. ರಿಯಲ್ ಮ್ಯಾಡ್ರಿಡ್‌ನ ನಾಯಕ ಸೆರ್ಗಿಯೊ ರಾಮೊಸ್ 15ನೆ ನಿಮಿಷದಲ್ಲಿ ಗೋಲು ಖಾತೆ ತೆರೆದರು. [ಈತ ಫುಟ್ಬಾಲ್ ನ ಬಹುಬೇಡಿಕೆಯ ಕೋಚ್]

ಅಟ್ಲೆಟಿಕೊ ತಂಡದ ಬದಲಿ ಆಟಗಾರ ಯಾನಿಕ್ ಕರಾಸ್ಕೊ 80ನೇ ನಿಮಿಷದಲ್ಲಿ ಗೋಲು ಬಾರಿಸಿ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು. ಪೆನಾಲ್ಟಿ ಶೂಟೌಟ್‌ನಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್ ತಂಡವನ್ನು 5-3 ಗೋಲುಗಳ ಅಂತರದಿಂದ ಸೋಲಿಸಿದ ರಿಯಲ್ ಮ್ಯಾಡ್ರಿಡ್ ತಂಡ 11ನೆ ಬಾರಿ ಚಾಂಪಿಯನ್ಸ್ ಲೀಗ್ ಕಿರೀಟವನ್ನು ಧರಿಸಿತು.

Zinedine Zidane architect of victory Real Madrid win 11th Champions League title on penalties,

ಕೋಚ್ ಜಿನೆದಿನ್ ಜಿದಾನೆ ಹೀರೋ : ಅವರು ರಿಯಲ್ ಮ್ಯಾಡ್ರಿಡ್‌ನ ಮಿಡ್ ಫೀಲ್ಡ್ ಆಟಗಾರನಾಗಿ ಹಾಗೂ ಮ್ಯಾನೇಜರ್ ಆಗಿ ಯುರೋಪಿಯನ್ ಕಪ್/ಚಾಂಪಿಯನ್ಸ್ ಲೀಗ್‌ನ್ನು ಜಯಿಸಿದ ಎರಡನೇ ವ್ಯಕ್ತಿ ಎನಿಸಿಕೊಂಡಿದ್ದಾರೆ. ಈ ಹಿಂದೆ ಮಿಗುಯೆಲ್ ಮುನೊಝ್ ಈ ಸಾಧನೆ ಮಾಡಿದ್ದರು. ಅದಲ್ಲದೆ ಚಾಂಪಿಯನ್ಸ್ ಲೀಗ್ ಜಯಿಸಿರುವ ಫ್ರೆಂಚ್‌ನ ಮೊದಲ ಮ್ಯಾನೇಜರ್ ಆಗಿದ್ದಾರೆ.

ತಲೆಯಿಂದ ಸಹ ಆಟಗಾರನಿಗೆ ಡಿಚ್ಚಿ ಕೊಟ್ಟು ಅಮಾನತುಗೊಂಡಿದ್ದ ಜಿದಾನೆ ಅವರು ತಮ್ಮ ಕರಾಳ ದಿನಗಳನ್ನು ಮರೆತು ಈಗ ಸಾಧನೆಯ ಹಾದಿಯನ್ನು ಕಂಡುಕೊಂಡಿದ್ದಾರೆ. ಮುಖ್ಯವಾಗಿ ತಂಡದಲ್ಲಿರುವ ಸ್ಟಾರ್ ಆಟಗಾರರಿಗೆ ಶಿಸ್ತಿನ ಪಾಠ ಮಾಡಿದ್ದಾರೆ. ರೋನಾಲ್ಡೋ, ರಮೋಸ್, ಬೆಲ್, ಬೆನ್ಜಿಮಾರಂಥ ಪ್ರತಿಭೆಗಳನ್ನು ನಿಭಾಯಿಸಿದ್ದಲ್ಲದೆ, ಪ್ರಮುಖ ಎದುರಾಳಿ ಬಾರ್ಸಿಲೋನಾಗೆ ಮುಖಭಂಗ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. [ಫೋರ್ಬ್ಸ್: ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ತಂಡಗಳಿವು]

ಕಳೆದ ಮೂರು ವರ್ಷಗಳಲ್ಲಿ ಎರಡನೆ ಬಾರಿ ಚಾಂಪಿಯನ್ಸ್ ಟ್ರೋಫಿ ಜಯಿಸುವ ಸಮೀಪಕ್ಕೆ ಬಂದು ಅಟ್ಲೆಟಿಕೊ ತಂಡ ಎಡವಿದೆ. ಎರಡು ಬಾರಿ ರಿಯಲ್ ಮ್ಯಾಡ್ರಿಡ್ ವಿರುದ್ಧವೇ ಫೈನಲ್‌ನಲ್ಲಿ ಸೋತಿದೆ.

-
ರಿಯಲ್ ಮ್ಯಾಡ್ರಿಡ್ ರಿಯಲ್ ಹೀರೋ ಜಿನೆದಿನ್ ಜಿದಾನೆ!

ರಿಯಲ್ ಮ್ಯಾಡ್ರಿಡ್ ರಿಯಲ್ ಹೀರೋ ಜಿನೆದಿನ್ ಜಿದಾನೆ!

-
-
-
-
-
-

ಸೆರ್ಗಿಯೊ ರಾಮೊಸ್ ಎರಡು ಪ್ರತ್ಯೇಕ ಚಾಂಪಿಯನ್ಸ್ ಲೀಗ್ ಫೈನಲ್ಸ್‌ನಲ್ಲಿ ಸ್ಕೋರ್ ಗಳಿಸಿದ ಸಾಧನೆ ಮಾಡಿದ ಆಟಗಾರರ ಪೈಕಿ ಐದನೆಯವರಾಗಿದ್ದಾರೆ ಹಾಗೂ ಮೊದಲ ಡಿಫೆಂಡರ್ ಎನಿಸಿಕೊಂಡಿದ್ದಾರೆ. ಈ ಮುಂಚೆ ಫೈನಲ್‌ ಗಳಲ್ಲಿ ರಾವುಲ್, ಸ್ಯಾಮುಯೆಲ್ ಎಟೂ, ಲಿಯೊನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಗೋಲು ಗಳಿಸಿದ ಸಾಧನೆ ಮಾಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Real Madrid captured an unprecedented 11th Champions League title with a 5-3 victory on penalties over cross-town rivals Atletico Madrid, which had rallied to tie 1-1 in the regulation 90 minutes of play. Madrid's head coach Zinedine Zidane is the architect of victory.
Please Wait while comments are loading...