ಒಲಿಂಪಿಕ್ಸ್‌ಗೆ ಸಲ್ಮಾನ್ ರಾಯಭಾರಿ, ಕುಸ್ತಿಪಟು ದತ್ ಆಕ್ಷೇಪ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 24: ಜನಪ್ರಿಯ ಹಿಂದಿ ಚಿತ್ರನಟ ಸಲ್ಮಾನ್ ಖಾನ್ ಅವರನ್ನು ಈ ಬಾರಿಯ ರಿಯೋ ಒಲಿಂಪಿಕ್ಸ್‌ ಗೆ ತೆರಳುವ ಭಾರತ ತಂಡದ ರಾಯಭಾರಿಯಾಗಿ ನೇಮಿಸಲಾಗಿದೆ. ಭಾರತದ ಅಥ್ಲೆಟಿಕ್ಸ್ ತಂಡದ ರಾಯಭಾರಿ ಆಗಿ ನಟ ಸಲ್ಮಾನ್ ಆಯ್ಕೆ ಮಾಡಿರುವುದಕ್ಕೆ ಕುಸ್ತಿಪಟು ಯೋಗೇಶ್ವರ್ ದತ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಲಂಡನ್ ಒಲಿಂಪಿಕ್ಸ್‌(2012)ನಲ್ಲಿ ಕಂಚಿನ ಪದಕ ವಿಜೇತ ಭಾರತದ ಹೆಮ್ಮೆಯ ಕುಸ್ತಿಪಟು ಯೋಗೇಶ್ವರ್ ದತ್ ಅವರು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್(ಐಒಎ) ಶನಿವಾರ ಕೈಗೊಂಡ ನಿರ್ಣಯ ಬೇಸರ ತರಿಸಿದೆ ಎಂದಿದ್ದಾರೆ.[ಒಲಿಂಪಿಕ್ಸ್ ಗೆ ಆಯ್ಕೆಯಾದ ಭಾರತದ ಜಿಮ್ನಾಸ್ಟ್ ದೀಪಾ]

Wrestler Yogeshwar Dutt slams Salman Khan's appointment as Goodwill Ambassador

ಐಒಎ ಮುಖ್ಯ ಕಚೇರಿಯಲ್ಲಿ ಶನಿವಾರ ಸಭೆ ಸೇರಿ ರಾಯಭಾರಿಯನ್ನು ಆಯ್ಕೆ ಮಾಡಲಾಯಿತು. ರಾಯಭಾರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಲ್ಮಾನ್‌ ಖಾನ್ ಗೆ ಶಾರೂಖ್ ಖಾನ್ ಹಾಗೂ ಹಿರಿಯ ನಟ ಅಮಿತಾಬ್ ಬಚ್ಚನ್ ತೀವ್ರ ಪೈಪೋಟಿ ನೀಡಿದ್ದರು.

ಸಲ್ಮಾನ್ ಆಯ್ಕೆಗೆ ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ದತ್ ಆಕ್ರೋಶ ವ್ಯಕ್ತಪಡಿಸಿ, 'ರಾಯಭಾರಿಯ ಕೆಲಸ ಏನು ಎಂಬುದು ನನಗೆ ಯಾರಾದರೂ ವಿವರಿಸಬಲ್ಲಿರಾ? ದೇಶದ ಜನರನ್ನು ಈ ರೀತಿ ಮೂರ್ಖರನ್ನಾಗಿ ಮಾಡುತ್ತಿದ್ದೀರಾ?' ಎಂದು ಪ್ರಶ್ನಿಸಿದ್ದಾರೆ. [ಒಲಿಂಪಿಕ್ಸ್ ಗೆ ಬಾಕ್ಸರ್ ಶಿವ ಆಯ್ಕೆ, ಮೇರಿಗೆ ಸದ್ಯಕ್ಕೆ ನಿರಾಸೆ!]

ಯೋಗೇಶ್ವರ್ ರಿಯೋ ಒಲಿಂಪಿಕ್ಸ್‌ಗೆ ತಯಾರಿ ನಡೆಸಲು ಪ್ರಸ್ತುತ ಜಾರ್ಜಿಯಾದಲ್ಲಿದ್ದಾರೆ.65 ಕೆಜಿ ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದ್ದು, ಪದಕ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Wrestler Yogeshwar Dutt slammed the appointment of Bollywood actor Salman Khan as the Goodwill Ambassador of the Indian contingent for the Rio Olympics to be held later this year.
Please Wait while comments are loading...