ಕಂಚು ಗೆದಿದ್ದ ಯೋಗೇಶ್ವರ್ ದತ್‌ಗೆ ಈಗ ಚಿನ್ನದ ಮೆರುಗು!

By: ಕ್ರೀಡಾ ಡೆಸ್ಕ್
Subscribe to Oneindia Kannada

ನವದೆಹಲಿ ಸೆಪ್ಟೆಂಬರ್, 03 : 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತದ ಯೋಗೇಶ್ವರ್ ದತ್ ಗೆದ್ದಿದ್ದ ಕಂಚಿಗೆ ಈಗ ಚಿನ್ನದ ಮೆರುಗು ಬಂದಂತಿದೆ. ಚಿನ್ನದ ಪದಕ ಗಳಿಸಿದ್ದ ಅಜರ್ ಬೈಜಾನ್‌ನ ಪೈಲ್ವಾನ್ ತೊಗರುಲ್ ಅಸ್ಗರೊವ್ ಅವರು ನಿಷೇಧಿತ ಉದ್ದೀಪನಾ ಮದ್ದು ಸೇವಿಸಿದ್ದಾರೆಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

4 ವರ್ಷಗಳ ಹಿಂದೆ ನಡೆದಿದ್ದ ಕೂಟದ ಪುರುಷರ 60 ಕೆಜಿ ಫ್ರೀಸ್ಟೈಲ್‌ನಲ್ಲಿ ಯೋಗೇಶ್ವರ್ ದತ್ ಕಂಚಿನ ಪದಕ ಗೆದ್ದಿದ್ದರು. ಇದೇ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಜಯಿಸಿದ್ದ ರಷ್ಯಾದ ಜಟ್ಟಿ ಬೆಸಿಕ್ ಕುದುಕೊವ್ ಕೂಡ ಉದ್ದೀಪನಾ ಮದ್ದು ಸೇವಿಸಿದ್ದು ಇತ್ತೀಚೆಗೆ ಸಾಬೀತಾಗಿತ್ತು. ಹೀಗಾಗಿ ಭಾರತದ ಕುಸ್ತಿಪಟುಗೆ ಬೆಳ್ಳಿಯ ಅದೃಷ್ಟ ಒಲಿದಿತ್ತು.[ಯೋಗೇಶ್ವರ್ ಗೆ ಬೆಳ್ಳಿ]

Yogeshwar Dutt

ಈಗ ಯೋಗೇಶ್ವರ್ ಅವರಿಗೆ ಚಿನ್ನದ ಪದಕ ಸಿಗುವ ನಿರೀಕ್ಷೆ ಇದೆ. ಡೋಪಿಂಗ್ ಟೆಸ್ಟ್ ನಲ್ಲಿ ಹಲವು ಆಟಗಾರರು ಸಿಕ್ಕಿ ಬೀಳುತ್ತಿರುವುದರಿಂದ 2008ರ ಬೀಜಿಂಗ್ ಒಲಿಂಪಿಕ್ಸ್ ಹಾಗೂ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಆಟಗಾರರನ್ನು ಮರು ಪರೀಕ್ಷೆಗೆ ಒಳಪಡಿಸಲು ವಿಶ್ವ ಡೋಪಿಂಗ್ ಏಜೆನ್ಸಿ ತೀರ್ಮಾನಿಸಿದೆ.[ಕುಸ್ತಿಪಟು ದತ್ ಗೆ ಸಿಕ್ಕ ಕಂಚು -ಬೆಳ್ಳಿ ಪದಕವಾಗಲಿದೆ!]

ಒಂದು ವೇಳೆ ಲಂಡನ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಗೆದ್ದಿರುವ ತೊಗರುಲ್ ಅಸ್ಗರೊವ್ ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾದರೆ ಭಾರತದ ದತ್‌ಗೆ ಚಿನ್ನದ ಪದಕ ಒಲಿದು ಬರಲಿದೆ. ಹಾಗೇನಾದರೂ ಆದರೆ ಭಾರತಕ್ಕೆ ಕುಸ್ತಿ ವಿಭಾಗದಲ್ಲಿ ಮೊಟ್ಟಮೊದಲ ಚಿನ್ನದ ಪದಕ ಸಿಕ್ಕಿದಂತಾಗುತ್ತದೆ.

ಉದ್ದೀಪನಾ ಮದ್ದು ಸೇವನೆ ಪ್ರಕರಣವನ್ನು ವಿಶ್ವ ಉದ್ದೀಪನಾ ತಡೆ ಘಟಕ (ವಾಡಾ) ಇನ್ನಷ್ಟೇ ಅಧಿಕೃತವಾಗಿ ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್ (ಯೂಡಬ್ಲ್ಯೂಡಬ್ಲ್ಯೂ)ಗೆ ತಿಳಿಸಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In what could be another good news for star India wrestler Yogeshwar Dutt, the grappler's London Olympic bronze medal might finally get upgraded to gold as the medal winner in his category failed the dope test too.
Please Wait while comments are loading...