ಬೆಂಗಳೂರಲ್ಲಿ ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ಕ್ರಿಕೆಟ್ ಆಡಿದಾಗ

Posted By:
Subscribe to Oneindia Kannada

ಬೆಂಗಳೂರು, ಜುಲೈ 10: 4 ಸಲ ಡಬ್ಲ್ಯುಡಬ್ಲುಇ ವರ್ಲ್ಡ್ ಹೆವಿವೇಟ್ ಚಾಂಪಿಯನ್ ಆಗಿರುವ ಅಲ್ಬರ್ಟ್ ಡೆಲ್ ರಿಯೊ ಅವರು 3 ದಿನಗಳ ವಿಶೇಷ ಭಾರತ ಭೇಟಿಯ ಅಂಗವಾಗಿ ಬೆಂಗಳೂರಿಗೆ ಆಗಮಿಸಿದ್ದರು. ನಗರದಲ್ಲಿ ಸ್ಥಳೀಯ ಅಭಿಮಾನಿಗಳ ಜೊತೆ ಸಮಯ ಕಳೆದು ಮಾತುಕತೆ ನಡೆಸಿದ್ದಲ್ಲದೆ, ಕ್ರಿಕೆಟ್ ಆಡಿದ್ದು ವಿಶೇಷವಾಗಿತ್ತು.

ನಗರದ ಗರುಡ ಮಾಲ್ ನಲ್ಲಿ ಅಲ್ಬರ್ಟ್ ಅವರು ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದರು. ಜೊತೆಗೆ ಡಬ್ಲ್ಯುಡಬ್ಲ್ಯುಇ 2ಕೆ17 ಆಟವನ್ನು ಬಿಡುಗಡೆಗೊಳಿಸಿದರು. ಡಬ್ಲ್ಯುಡಬ್ಲ್ಯುಇ ಅಭಿಮಾನಿಗಳೊಂದಿಗೆ ಗರುಡ ಮಾಲ್ ತುಂಬಿ ತುಳುಕುತ್ತಿತ್ತು.

ಇದಕ್ಕು ಮೊದಲು ಡಬ್ಲ್ಯುಡಬ್ಲ್ಯುಇ ಸೂಪರ್ ಸ್ಟಾರ್ ಭಾರತದ ವಿಶೇಷ ಒಲಿಂಪಿಕ್ ತಂಡವನ್ನು ಭೇಟಿ ಮಾಡಿದರು. ಇವರ ಜೊತೆ ಕ್ರಿಕೆಟ್ ಆಡಿದರು. ಈ ಸಂದರ್ಭದಲ್ಲಿ ವಿಶೇಷ ಒಲಿಂಪಿಕ್ ತಂಡದ ಸ್ಥಳೀಯ ನಿರ್ದೇಶಕ ವಸಂತ್ ಕುಮಾರ್ ಶೆಟ್ಟಿ ಹಾಜರಿದ್ದರು.

ಫುಟ್ಬಾಲ್ ನಲ್ಲಿ ಶಿಸ್ತುಬದ್ಧ ತಂಡ ಸ್ಪೇನ್ ಎಂದರೆ ತುಂಬಾ ಇಷ್ಟ. ಆದರೆ, ಈ ಬಾರಿ ಸ್ಪೇನ್ ಉತ್ತಮ ಸಾಧನೆ ತೋರಲಿಲ್ಲ. ಫೈನಲ್ ನಲ್ಲಿ ಪೋರ್ಚುಗಲ್ ಗೆಲ್ಲಲಿ ಎಂದು ಆಶಿಸಿದರು. ಒನ್ ಇಂಡಿಯಾಕ್ಕೆ ರೆಸ್ಲಿಂಗ್ ಹಾಗೂ ಇನ್ನಿತರ ಪ್ರಶ್ನೆಗಳಿಗೆ ರಿಯೋ ಉತ್ತರಿಸಿದ ವಿಡಿಯೋ ನೋಡಿ[ಚಿತ್ರ ಕೃಪೆ: ಸುಹಾಸ್ ]

ಭಾರತ ಒಂದು ಶ್ರೇಷ್ಠ ರಾಷ್ಟ್ರ : ಅಲ್ಬರ್ಟ್ ರಿಯೊ

ಭಾರತ ಒಂದು ಶ್ರೇಷ್ಠ ರಾಷ್ಟ್ರ : ಅಲ್ಬರ್ಟ್ ರಿಯೊ

ಭಾರತ ಒಂದು ಶ್ರೇಷ್ಠ ರಾಷ್ಟ್ರ. ಇಲ್ಲಿನ ಅಭಿಮಾನಿಗಳ ಪ್ರೀತಿಯಿಂದ ಮನಸು ತುಂಬಿ ಬಂದಿದೆ. ಬೆಂಗಳೂರಿನಲ್ಲಿ ನಿಜಕ್ಕು ಉತ್ತಮ ಸಮಯ ಕಳೆದಿರುವೆ : ಅಲ್ಬರ್ಟ್ ರಿಯೊ

ಸ್ಪೆಷಲ್ ಒಲಿಂಪಿಕ್ಸ್ ಮಕ್ಕಳನ್ನು ಭೇಟಿ ಮಾಡಿದ ರಿಯೋ

ಸ್ಪೆಷಲ್ ಒಲಿಂಪಿಕ್ಸ್ ಮಕ್ಕಳನ್ನು ಭೇಟಿ ಮಾಡಿದ ರಿಯೋ

ಸ್ಪೆಷಲ್ ಒಲಿಂಪಿಕ್ಸ್ ಮಕ್ಕಳನ್ನು ಭೇಟಿಮಾಡಿರುವುದು ಒಂದು ವಿಶೇಷ ಹಾಗೂ ಸ್ಫೂರ್ತಿದಾಯಕ ಅನುಭವ ಎಂದರು.

ಮೆಕ್ಸಿಕೋ ಮೂಲದ ರಿಯೋ

ಮೆಕ್ಸಿಕೋ ಮೂಲದ ರಿಯೋ

ಮೆಕ್ಸಿಕೋ ಮೂಲದ ರಿಯೋ ಅವರು ಕೂಡಾ ಫುಟ್ಬಾಲ್ ಪ್ರೇಮಿ, ಆದರೆ, ವಿಶೇಷ ಮಕ್ಕಳಿಗಾಗಿ ಕ್ರಿಕೆಟ್ ಪಾಠ ಕಲಿತು ಆಡಿದರು. ಬ್ಯಾಟಿಂಗ್, ಬೌಲಿಂಗ್ ಮಾಡಿ ಮಕ್ಕಳೊಂದಿಗೆ ನಕ್ಕು ನಲಿದಾಟಿದರು.

ಕೋಲ್ಕತ್ತಾಕ್ಕೆ ಭೇಟಿ ನೀಡಿದ್ದ ರಿಯೋ

ಕೋಲ್ಕತ್ತಾಕ್ಕೆ ಭೇಟಿ ನೀಡಿದ್ದ ರಿಯೋ

ಬೆಂಗಳೂರಿಗೆ ಬರುವುದಕ್ಕೂ ಮುನ್ನ ಕೋಲ್ಕತ್ತಾಕ್ಕೆ ಭೇಟಿ ನೀಡಿದ್ದ ರಿಯೋ ಅವರು ಈ ಬಾರಿಯ ಯುರೋ 2016 ರಲ್ಲಿ ಪೋರ್ಚುಗಲ್ ಗೆದ್ದರೆ ಚೆನ್ನಾಗಿರುತ್ತದೆ ಎಂದರು.

ಕ್ರಿಸ್ಟಿಯಾನೊ ರೊನಾಲ್ಡೊ ಅದ್ಭುತ ಆಟಗಾರ

ಕ್ರಿಸ್ಟಿಯಾನೊ ರೊನಾಲ್ಡೊ ಅದ್ಭುತ ಆಟಗಾರ

ಕ್ರಿಸ್ಟಿಯಾನೊ ರೊನಾಲ್ಡೊ ಅದ್ಭುತ ಆಟಗಾರ, ಜುಲೈ 11 (12.30 AM IST) ರಂದು ತಪ್ಪದೇ ಪೋರ್ಚುಗಲ್ ಹಾಗೂ ಫ್ರಾನ್ಸ್ ಆಟವನ್ನು ನೋಡುತ್ತೇನೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Four-time WWE World Heavyweight Champion Alberto Del Rio today (July 9) wielded the willow and bowled in a friendly cricket game.
Please Wait while comments are loading...