ರೆಸ್ಲಿಂಗ್ ಅಂಗಳಕ್ಕೆ ಮತ್ತೆ ದಿ ರಾಕ್ ಆಗಮನ!

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 01: ದಿ ರಾಕ್ ಮತ್ತೊಮ್ಮೆ ರೆಸ್ಲಲ್ ಮ್ಯಾನಿಯಾಕ್ಕೆ ಎಂಟ್ರಿ ಕೊಡುವ ಸಾಧ್ಯತೆಗಳು ಕಂಡು ಬಂದಿದೆ. ಕಳೆದ ವರ್ಷ ಕೂಡಾ ರೆಸ್ಲಲ್ ಮ್ಯಾನಿಯಾ 32ರಲ್ಲಿ ರಾಕ್ ವಿಶೇಷವಾದ ಎಂಟ್ರಿ ಪಡೆದುಕೊಂಡಿದ್ದರು.

ಇದಕ್ಕೂ ಮುನ್ನ ಡಬ್ಲ್ಯೂಡಬ್ಲ್ಯೂಇ RAWಗೆ ಅಚ್ಚರಿಯ ಎಂಟ್ರಿ ಕೊಟ್ಟ ಜನರ ಚಾಂಪಿಯನ್ ದಿ ರಾಕ್ ಅವರು ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾದಲ್ಲಿ ಡಿಸ್ನಿ ಅನಿಮೇಟೆಡ್ ಸಿನಿಮಾ ಮೊಹಾನಾ ಪ್ರಚಾರಕ್ಕಾಗಿ ಬಂದಿದ್ದರು.[ಅಂಡರ್ ಟೇಕರ್- ಗೋಲ್ಡ್ ಬರ್ಗ್ ಸೆಣಸಾಡುತ್ತಾರಾ?]

ಈ ಸಂದರ್ಭದಲ್ಲಿ ವರದಿಗಾರ ವಾನ್ ವ್ಲಿಟ್ ಜತೆ ಮಾತನಾಡುತ್ತಾ ಮುಂದಿನ ರೆಸ್ಲಲ್ ಮೇನಿಯಾ 33ಕ್ಕೆ ಎಂಟ್ರಿ ಕೊಡುವ ಸುಳಿವು ನೀಡಿದರು.[WWE ದಿಗ್ಗಜ ಅಮೆರಿಕದ ನೂತನ ಅಧ್ಯಕ್ಷ ಟ್ರಂಪ್]

WWE: The Rock hints about appearance at Wrestlemania 33

ಓರ್ಲೊಂಡೋಗೆ ಬರುತ್ತಿರಾ? ಎಂದಿದ್ದಕ್ಕೆ ಏನಿದೆ ಅಲ್ಲಿ ವಿಶೇಷ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅದಕ್ಕೆ ಉತ್ತರಿಸಿದ ವಾನ್, ರೆಸ್ಲರ್ ಮೇನಿಯಾ ಎಂದಿದ್ದಾರೆ. ರಾಕ್, ಹಾಗಾದರೆ ನಾನು ಅಲ್ಲಿಗೆ ಬರುತ್ತೇನೆ ಎಂದು ಉತ್ತರಿಸಿದ್ದಾರೆ.[ದಿವಾ ಪೇಜ್ ಮತ್ತೆ ರಿಂಗ್ ಗೆ ಬರ್ತಾಳಂತೆ!]

ಮೂಲಗಳ ಪ್ರಕಾರ ರಾಕ್, ವಿನ್ ಡೀಸೆಲ್ ಇಬ್ಬರು ಕಣಕ್ಕಿಳಿದು ಫಾಸ್ಟ್ ಅಂಡ್ ಫ್ಯೂರಿಯಸ್ ಸಿನಿಮಾಕ್ಕೆ ಒಳ್ಳೆ ಪ್ರಚಾರ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಎಲ್ಲವೂ ಸರಿಯಾಗಿ ನಡೆದರೆ ಓರ್ಲಾಂಡೊ, ಫ್ಲೋರಿಡಾದಲ್ಲಿ ಏಪ್ರಿಲ್ 2, 2017ರಲ್ಲಿ ರಾಕ್ ಆಟವನ್ನು ನೋಡಬಹುದು. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Rock is always expected when the Wrestlemania season comes around. Last year too at Wrestlemania 32 he made a special appearance at the grandest stage of them all.
Please Wait while comments are loading...