ರೆಸಲ್ ಮೇನಿಯಾಲಿ ಅಂಡರ್ ಟೇಕರ್- ಗೋಲ್ಡ್ ಬರ್ಗ್ ಸೆಣಸಾಡುತ್ತಾರಾ?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್, 18: ಇತ್ತೀಚೆಗೆ ಕ್ಲೀವ್ ಲ್ಯಾಂಡ್ ನಲ್ಲಿ ನಲ್ಲಿ ನಡೆದ ಕವಾಲಿಯರ್ಸ್ ಸಮಾರಂಭದಲ್ಲಿ WWE (ವರ್ಲ್ಡ್ ವೆಸ್ಟ್ರ್ಲಿಂಗ್ ಎಂಟರ್ ಟೈನ್ ಮೆಂಟ್) ದಿಗ್ಗಜ ಅಂಡರ್ ಟೇಕರ್ ಇದ್ದಕ್ಕಿದ್ದಂತೆ ಕಾಣಿಸಿಕೊಂಡು ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿ ಮಾಡಿದ್ದರು.

ಅಷ್ಟೇ ಅಲ್ಲದೆ ಓಹಿಯೋದಲ್ಲಿ ನಡೆದ ಎನ್ ಬಿ ಎ ಚಾಂಪಿಯನ್ಸ್ ಪಂದ್ಯದಲ್ಲೂ ಅವರು ಮತ್ತೊಮ್ಮೆ ಕಾಣಿಸಿಕೊಂಡು ಶಾಕ್ ನೀಡಿದ್ದರು.

ಸ್ಮ್ಯಾಕ್ ಡೌನ್ ನಲ್ಲೂ ಕಾಣಿಸಿಕೊಂಡ ಅವರು ಮತ್ತೆ ಪೂರ್ಣ ಪ್ರಮಾಣದಲ್ಲಿ ಅಖಾಡಕ್ಕೆ ಹಿಂತಿರುಗುವ ಸೂಚನೆಯನ್ನು ಅಭಿಮಾನಿಗಳಿಗೆ ನೀಡಿದ್ದರು.

WWE Rumour: Goldberg Vs Undertaker match to take place at Wrestlemania

ಈ ಎಲ್ಲಾ ಬೆಳವಣಿಗೆಗಳು ಮುಂಬರುವ ರೆಸಲ್ ಮೇನಿಯಾ ಪಂದ್ಯದಲ್ಲಿ ಅಂಡರ್ ಟೇಕರ್ ಅಖಾಡಕ್ಕೆ ಇಳಿಯುತ್ತಾರೆ ಎಂಬ ಸೂಚನೆಗಳನ್ನುದಟ್ಟವಾಗಿ ತೋರಿಸಿವೆ.

ಇತ್ತೀಚೆಗಷ್ಟೇ ಅಂಡರ್ ಟೇಕರ್ ಊರೂಗೋಲು ಸಹಾಯದೊಂದಿಗೆ ನಿಂತುಕೊಂಡಿದ್ದ ಫೋಟೊವೊಂದು ಅಂತರ್ಜಾಲದಲ್ಲಿ ಹರಿದಾಡಿತ್ತು. ಈ ಫೋಟೊ ಅಂಡರ್ ಟೇಕರ್ ಇನ್ನು ಆಟವಾಡಲು ಅಶಕ್ತರೇ? ಎಂಬ ಅನುಮಾನಗಳನ್ನು ಮೂಡಿಸಿತ್ತು.

ಸ್ಮ್ಯಾಕ್ ಡೌನ್ 900ನೇ ಎಪಿಸೋಡ್ ನಲ್ಲಿ ಮತ್ತೆ ಕಾಣಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯದ ಕುರಿತು ಅಭಿಮಾನಿಗಳಲ್ಲಿ ಮೂಡಿದ್ದ ಎಲ್ಲ ಉಹಾಪೋಹಗಳಿಗೆ ಅವರು ತೆರೆ ಎಳೆದಿದ್ದರು.

ಅಖಾಡದಲ್ಲಿ ಘರ್ಜಿಸಲು ಇಳಿದಿರುವ ಅಂಡರ್ ಟೇಕರ್ ಅಭಿಮಾನಿಗಳಲ್ಲಿ ಈಗ ಬೇರೆ ಆಲೋಚನೆಯಲ್ಲಿ ಇದ್ದರೆ. ನಮ್ಮ ನೆಚ್ಚಿನ ಪಟು ಮುಂದಿನ ರೆಸಲ್ ಮೇನಿಯಾದಲ್ಲಿ ಯಾರೊಂದಿಗೆ ಸೆಣಸಾಡಬಹುದು ಎಂದು ಅವರು ಯೋಚಿಸುತ್ತಿದ್ದಾರೆ.

ವೈದ್ಯಕೀಯ ವರದಿಗಳ ಪ್ರಕಾರ ಅಂಡರ್ ಟೇಕರ್ ಅವರು ಅಖಾಡಕ್ಕೆ ಇಳಿಯಲು ಸಂಪೂರ್ಣ ಫಿಟ್ ಆಗಿದ್ದಾರೆ. ಈ ಬಾರಿ ಅವರ ಸ್ವಂತ ನೆಲದಲ್ಲೇ ಆಯೋಜಿಸಲಾಗುತ್ತಿರುವ 33ನೇ ರೆಸಲ್ ಮೇನಿಯಾದಲ್ಲಿ ಅವರು ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ.

ಹಲವು ದಿನಗಳ ನಂತರ ಅಂಡರ್ ಟೇಕರ್ ಅಖಾಡಕ್ಕೆ ಇಳಿಯುತ್ತಿರುವುದರಿಂದ ಅವರಿಗೆ ವಿರುದ್ಧ ಸೆಣಸಾಡಲು ಸೂಕ್ತ ಪ್ರತಿಸ್ಪರ್ಧಿಯನ್ನೇ WWE ಹುಡುಕುತ್ತಿದೆ.

ಹಲವರ ಅಭಿಪ್ರಾಯದಂತೆ ಭಯಂಕರ ಗೋಲ್ಡ್ ಬರ್ಗ್ ಅಂಡರ್ ಟೇಕರ್ ಅವರನ್ನು ಎದುರಿಸಲು ಸಿದ್ದರಾಗಿದ್ದಾರೆ ಎಂಬ ಗಾಳಿಮಾತುಗಳೂ ಸಹ ಕೇಳಿಬರುತ್ತಿವೆ.

ಈ ಬಾರಿಯ ರೆಸಲ್ ಮೇನಿಯಾ ಪಂದ್ಯಗಳನ್ನು ಫ್ಲೋರಿಡಾದ ಓರ್ನಾಲ್ಡೋದಲ್ಲಿ ಆಯೋಜಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Furthermore, he appeared on Smackdown Live assuring the fans that he might be back as a full-time performer. We are now assured that the Undertaker will be back for his match at Wrestlemania.
Please Wait while comments are loading...