ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಸಾಕ್ಷಿ ರಾಯಭಾರಿ

By: ಕ್ರೀಡಾ ಡೆಸ್ಕ್
Subscribe to Oneindia Kannada

ಚಂಡೀಗಢ, ಆಗಸ್ಟ್, 24: ರಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದ ಸಾಕ್ಷಿ ಮಲಿಕ್ ಅವರನ್ನು ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ರಾಯಭಾರಿಯನ್ನಾಗಿ ಹರಿಯಾಣ ಸರ್ಕಾರ ಘೋಷಿಸಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಸಾಕ್ಷಿ ಮಲಿಕ್ ಅವರನ್ನು ತವರಾದ ಹರಿಯಾಣದ ರೊಹ್ಟಕ್ ಜಿಲ್ಲೆಯ ಬಹದ್ದೂರ್ ಗಡದಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಅದ್ದೂರಿಯಿಂದ ಬರಮಾಡಿಕೊಂಡರು. [ಕುಸ್ತಿ: ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ ಮಲಿಕ್ ಯಾರು?]

Wrestler Sakshi Malik presented Rs 2.5 crore cheque by Haryana Govt

ಸಾಕ್ಷಿ ತವರು ಬಹದ್ದೂರ್ ಗಡನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸಾಕ್ಷಿಗೆ ಹಾಗು ಅವರ ಕೋಚ್ ಗೂ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಮುಖ್ಯಂತ್ರಿ ಮನೋಹರ್ ಲಾಲ್ ಖಟ್ಟರ್ ಸಾಕ್ಷಿ ಅವರಿಗೆ 2.5 ಕೋಟಿ ರು ಚೆಕ್ ನೀಡಿದರು. ಹಾಗು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೆಣ್ಣನ್ನು ಉಳಿಸಿ ಮತ್ತು ಓದಿಸಿ (ಬೇಟಿ ಬಚಾವೋ ಬೇಟಿ ಪಡಾವೋ) ಯೋಜನೆಗೆ ಸಾಕ್ಷಿ ಅವರನ್ನು ರಾಯಭಾರಿಯನ್ನಾಗಿ ಮಾಡಲಾಗಿದೆ ಎಂದು ಘೋಷಿಸಿದರು. [ಸಾಕ್ಷಿ, ಸಿಂಧು, ದೀಪಾಗೆ ವಜ್ರದ ನೆಕ್ಲೇಸ್ ಉಡುಗೊರೆ]

ಈ ವೇಳೆ ಮಾತನಾಡಿದ ಸಾಕ್ಷಿ ರಿಯೋ ಒಲಿಂಪಿಕ್ಸ್ ನಲ್ಲಿ ದೇಶಕ್ಕಾಗಿ ಪದಕ ಗೆಲ್ಲುವುದು ನನ್ನ ಬಹುದಿನಗಳ ಕನಸಾಗಿತ್ತು. ಅದಕ್ಕಾಗಿ ಕಳೆದ ಹನ್ನೆರಡು ವರ್ಷಗಳಿಂದ ಕಠಿಣ ಪರಿಶ್ರಮಪಟ್ಟಿದೆ. ನನ್ನ ತಪಸ್ಸಿಗೆ ಫಲ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿ ಸಮಸ್ತ ಭಾರತೀಯರಿಗೆ ಧನ್ಯವಾದ ಹೇಳಿದ್ದಾರೆ.

ಈ ಸನ್ಮಾನ ಕಾರ್ಯಕ್ರಮಕ್ಕೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು, ಅಭಿಮಾನಿಗಳು ಹಾಗೂ ಗಣ್ಯರು ಸೇರಿದಂತೆ ಕ್ಯಾಬಿನೆಟ್ ಸಚಿವರು ಭಾಗವಹಿಸಿ ಸಾಕ್ಷಿ ಅವರಿಗೆ ಶುಭ ಹಾರೈಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A rousing state reception was accorded by the Haryana government to the Olympic bronze medallist Sakshi Malik after she arrived this morning from Rio de Janeiro.
Please Wait while comments are loading...