ರಿಯೋ ಡೋಪಿಂಗ್ ಟೆಸ್ಟ್ : ಕುಸ್ತಿಪಟು ನರಸಿಂಗ್ ಯಾದವ್ ಫೇಲ್

Posted By:
Subscribe to Oneindia Kannada

ನವದೆಹಲಿ, ಜುಲೈ 24: ರಿಯೋ ಒಲಿಂಪಿಕ್ಸ್ 2016ಕ್ಕೆ ಆಯ್ಕೆಯಾಗಿದ್ದ ಭಾರತದ ಕುಸ್ತಿ ಪಟು ನರಸಿಂಗ್ ಯಾದವ್ ಗೆ ಆಘಾತಕಾರಿ ಸುದ್ದಿ ಸಿಕ್ಕಿದೆ. ಒಲಿಂಪಿಕ್ಸ್ ಗೂ ಮುನ್ನ ನಡೆಸಲಾಗುವ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ನರಸಿಂಗ್ ಯಾದವ್ ಅವರು ಫೇಲ್ ಆಗಿದ್ದಾರೆ.

ಎನ್ ಡಿಟಿವಿ ವರದಿಯಂತೆ ಭಾರತದಿಂದ 74 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದ ನರಸಿಂಗ್ ಯಾದವ್ ಅವರು ಡೋಪಿಂಗ್ ಟೆಸ್ಟ್ ನಲ್ಲಿ ಫೇಲ್ ಆಗಿದ್ದಾರೆ. ಸದ್ಯಕ್ಕೆ ಅವರು ಬ್ರೆಜಿಲ್ ವಿಮಾನ ಏರುವಂತಿಲ್ಲ. [ರಿಯೋ ಒಲಿಂಪಿಕ್ಸ್ 2016 ವಿಶೇಷ ಪುಟ]

Narsingh Yadav

ರಾಷ್ಟ್ರೀಯ ಉದ್ದೀಪನ ನಿಷೇಧ ಏಜೆನ್ಸಿ(NADA) ಜುಲೈ 5ರಂದು ಯಾದವ್ ಅವರ ಮೇಲೆ ಡೋಪ್ ಟೆಸ್ಟ್ ನಡೆಸಿತ್ತು. ಸೋನೆಪೆಟ್ ನ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ ಎಐ) ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗಿತ್ತು. [ರಿಯೋ ಒಲಿಂಪಿಕ್ಸ್ ಗೆ ನೂರಾರು ಅಥ್ಲೀಟ್ ಗಳು]

ಪರೀಕ್ಷೆ ಫಲಿತಾಂಶ ಭಾನುವಾರ (ಜುಲೈ 24) ರಂದು ಬಂದಿದ್ದು, ಯಾದವ್ ಅವರ ಎ ಸ್ಯಾಂಪಲ್ ಟೆಸ್ಟ್ 'ಪಾಸಿಟಿವ್' ಆಗಿದೆ. ನಂತರ ಬಿ ಸ್ಯಾಂಪಲ್ ಟೆಸ್ಟ್ ನಡೆಸಲಾಗಿ ಅದು ಕೂಡಾ 'ಪಾಸಿಟಿವ್' ಎಂದು ವರದಿ ಬಂದಿದೆ.[ಶಾಟ್‌ಪುಟ್‌ ಪಟು ಇಂದ್ರಜಿತ್‌ ಡೋಪಿಂಗ್ ಟೆಸ್ಟ್ ನಲ್ಲಿ ಫೇಲ್]

2015ರ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ 74ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದ ನರಸಿಂಗ್ ಯಾದವ್ ಹಾಗೂ ಅವರ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಸದ್ಯ ಭಾರತದ ಕ್ರೀಡಾಪಟುಗಳು ಜಾರ್ಜಿಯಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆಗಸ್ಟ್ 5ರಿಂದ ಒಲಿಂಪಿಕ್ಸ್ 2016 ಆರಂಭಗೊಳ್ಳಲಿದೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In what could be major setback to India's hope for an Olympic medal, Indian wrestler Narsingh Yadav's dream of contesting in Rio Olympics 2016 has reportedly hit a roadblock.
Please Wait while comments are loading...