ಕುಸ್ತಿ ಪಟು ನರಸಿಂಗ್ ಯಾದವ್ ಗೆ ನಾಲ್ಕು ವರ್ಷ ನಿಷೇಧ

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ ಆಗಸ್ಟ್, 19: ವಿವಾದಗಳ ಮೂಲಕವೇ 2016ರ ರಿಯೋ ಒಲಿಂಪಿಕ್ಸ್ ಅರ್ಹತೆ ಪಡೆದುಕೊಂಡಿದ್ದ ನರಸಿಂಗ್ ಯಾದವ್ ಪದಕದ ಕನಸು ನುಚ್ಚು ನೂರಾಗಿದೆ. ರಷ್ಯನ್ ಆಟಗಾರರಿಗೆ ಕಾಡಿದ್ದ ಡೋಪಿಂಗ್ ಈಗ ಭಾರತದ ಕುಸ್ತಿ ಪಟು ನರಸಿಂಗ್ ಯಾದವ್ ಗೆ ಅಂಟಿಕೊಂಡಿದೆ.[ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ ಮಲಿಕ್ ಯಾರು?]

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ರಾಷ್ಟ್ರೀಯ ಉದ್ದೀಪನ ನಿಗ್ರಹ ದಳ ನಡೆಸಿದ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ವಿವಾದ ಸೃಷ್ಟಿಸಿದ್ದ ಭಾರತದ ಕುಸ್ತಿ ಪಟು ನರಸಿಂಗ್ ಯಾದವ್ ಅವರನ್ನು ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್ ಸಂಸ್ಥೆ (ಸಿಎಎಸ್) ನಾಲ್ಕು ವರ್ಷ ಕ್ರೀಡೆಯಿಂದ ನಿಷೇಧ ಹೇರಿದೆ.[ನರಸಿಂಗ್ ತಿನ್ನುವ ಆಹಾರದಲ್ಲಿ ಔಷಧ ಸೇರಿಸಿದವ ಸಿಕ್ಕಿ ಬಿದ್ದ]

ಇದಕ್ಕೂ ಮುನ್ನ ಯಾದವ್​ ವಿಚಾರಣೆ ನಡೆಸಿ ನಾಡಾ ಅವರಿಗೆ ಕ್ಲೀನ್​ಚೀಟ್​ ನೀಡಿತ್ತು. ಆದರೆ ಅಂತಾರಾಷ್ಟ್ರೀಯ ಉದ್ದೀಪನ ನಿಗ್ರಹ ದಳ(WADA) ನರಸಿಂಗ್​ ಯಾದವ್​ ಅವರ ವಿಚಾರಣೆ ನಡೆಸುವಂತೆ ಮೇಲ್ಮನವಿ ಸಲ್ಲಿಸಿತ್ತು.

Wrestler Narsingh Yadav banned for 4 years, Olympics dream over

ಮೇಲ್ಮನವಿಯನ್ನು ಸುಮಾರು ನಾಲ್ಕು ಗಂಟೆ ವಿಚಾರಣೆ ನಡೆಸಿದ ಸಿಎಎಸ್ ವಿಚಾರಣೆ ಈ ವೇಳೆ ನರಸಿಂಗ್ ಯಾದವ್ ಅವರು ನೀಡಿರುವ ಸಮರ್ಥನೆ ತೀರ್ಪುಗಾರರಿಗೆ ಸರಿ ಕಾಣಿಸಲಿಲ್ಲ. ಇದರಿಂದ ಬ್ರೇಜಿಲ್​ನ ಕೋರ್ಟ್​ ಆಫ್ ಆರ್ಬಿಟ್ರೇಷನ್ ಯಾದವ್ ​ ಅವರಿಗೆ ನಾಲ್ಕು ವರ್ಷ ನಿಷೇಧ ಹೇರಿದೆ.[ನರಸಿಂಗ್ ಬದಲಿಗೆ ಪ್ರವೀಣ್ ರಾಣಾಗೆ ಅವಕಾಶ]

ಇದರಿಂದ ಯಾದವ್ 4 ವರ್ಷಗಳ ಕಾಲ ಕುಸ್ತಿ ಕ್ರೀಡೆಯಿಂದ ದೂರ ಉಳಿಯಬೇಕಿದೆ. 74 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿರುವ ಭಾರತದ ಏಕೈಕ ಕುಸ್ತಿಪಟು ನರಸಿಂಗ್ ಯಾದವ್ ಇಂದು (ಆ.19 ರಂದು) ಒಲಿಂಪಿಕ್ಸ್​ ನಲ್ಲಿ ಮೊದಲ ಕುಸ್ತಿ ಪಂದ್ಯವನ್ನ ಅಡಬೇಕಿತ್ತು. ಕೋರ್ಟ್​ ಆದೇಶದಿಂದಾಗಿ ಯಾದವ್​ ಒಲಿಂಪಿಕ್ಸ್​ನಿಂದ ಹೊರಬೀಳಲಿದ್ದಾರೆ.

ಕಳೆದ ಜೂನ್ 25ರಂದು ನಾಡಾ ನಡೆಸಿದ ಉದ್ದೀಪನ ಮದ್ದು ತಡೆಯಲ್ಲಿ ನರಸಿಂಗ್ ಯಾದವ್ ರಕ್ತದ ಮಾದರಿಯಲ್ಲಿ ನಿಷೇಧಿತ ಉದ್ದೀಪನ ಮದ್ದಿನ ಅಂಶ ಕಂಡುಬಂದಿತ್ತು. ಈ ಹಿನ್ನಲೆಯಲ್ಲಿ ಅವರನ್ನು ರಿಯೋ ಒಲಿಂಪಿಕ್ಸ್ ನಿಂದ ಕೈ ಬಿಡಲಾಗಿತ್ತು. ಭಾರತದ ಮತ್ತೋರ್ವ ಕುಸ್ತಿ ಸುಶೀಲ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿತ್ತು.

ಬಳಿಕ ನ್ಯಾಯಾಲಯದ ಮೊರೆ ಹೋಗಿದ್ದ ನರಸಿಂಗ್ ಯಾದವ್ ಪರವಾಗಿ ನ್ಯಾಯಾಲಯ ತೀರ್ಪು ನೀಡಿತ್ತು. ಅಲ್ಲದೆ ನಾಡಾ ಕೂಡ ನರಸಿಂಗ್ ಯಾದವ್ ಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ, ಯಾರೋ ಮಾಡಿದ ತಪ್ಪಿಗೆ ನರಸಿಂಗ್ ಈಗ ಬಲಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a stunning reversal of fortunes, Indian wrestler Narsingh Yadav was ousted from the Olympics and slapped with a 4-year ban for flunking a dope test after Court of Arbitration for Sports overturned the clean chit given to him by the National Anti-Doping Agency
Please Wait while comments are loading...