ವಿಶ್ವಕಪ್ ಕಬಡ್ಡಿ: ಸೆಮಿಫೈನಲ್ ಗೆ ಭಾರತ

Posted By: Prithviraj
Subscribe to Oneindia Kannada

ಅಹಮದಾಬಾದ್, ಅಕ್ಟೋಬರ್, 19: ಮಂಗಳವಾರ ಇಲ್ಲಿ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಭಾರತ ಸುನಾಯಸವಾಗಿ ಸೆಮಿಫೈನಲ್ ತಲುಪಿತು.

ಸತತ ನಾಲ್ಕನೇ ಜಯ ದಾಖಲಿಸಿದ ಭಾರತ 'ಎ' ಗುಂಪಿನಲ್ಲಿ 21 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಸೆಮೆಫೈನಲ್ ತಲುಪುವುದರಲ್ಲಿ ಯಶಸ್ವಿಯಾಯಿತು.

World Cup Kabaddi: India qualify for semifinal

ಆರು ಮಂದಿ ಭಾರತ ಮೂಲದವರನ್ನೇ ಹೊಂದಿರುವ ಇಂಗ್ಲೆಂಡ್ ತಂಡ 10 ಅಂಕಗಳಿಸಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟು. ಇಂಗ್ಲೆಂಡ್ ಲೀಗ್ ನಿಂದ ಹೊರಬಿದ್ದಿದೆ.

ಮೊದಲಾರ್ಧದಿಂದಲೇ ರೈಡಿಂಗ್ ಮತ್ತು ಡಿಫೆಂಡಿಂಗ್ ವಿಭಾಗದಲ್ಲಿ ಭಾರತೀಯ ಆಟಗಾರರು ಇಂಗ್ಲೆಂಡ್ ವಿರುದ್ಧ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದರು.

ಮೊದಾಲರ್ಧ ಮುಗಿಯುವ ಹೊತ್ತಿಗೆ ಇಂಗ್ಲೆಂಡ್ ತಂಡವನ್ನು ಮೂರು ಬಾರಿ ಆಲೌಟ್ ಮಾಡಿದ ಭಾರತ ಭಾರಿ ಮುನ್ನಡೆ ಕಾಯ್ದುಕೊಂಡು ಗೆಲುವು ಖಚಿತಪಡಿಸಿಕೊಂಡಿತು.

World Cup Kabaddi: India qualify for semifinal

ಭಾರತದ ಪರ ಪರ್ದೀಪ್ ನರ್ವಾಲ್ 13 ಅಂಕ ಕಲೆ ಹಾಕಿದರು. ರೈಡಿಂಗ್ ವಿಭಾಗದಲ್ಲಿ ಅಜಯ್ ಠಾಕೂರ್ ಹಾಗೂ, ಡಿಫೆಂಡಿಂಗ್ ವಿಭಾಗದಲ್ಲಿ ಸಂದೀಪ್ ನರ್ವಾಲ್ ಅವರು ಅತಿಥೇಯರಿಗೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ರಕ್ಷಣಾತ್ಮಕ ಆಟದ ಮೂಲಕ ಮೊದಲಾರ್ಧಕ್ಕೆ 46-6 ಅಂಕಗಳೊಂದಿಗೆ ಭಾರತ ಭಾರಿ ಮುನ್ನಡೆ ಕಾಯ್ದುಕೊಂಡು ಒಟ್ಟು 69-18 ಅಂಕಗಳೊಂದಿಗೆ ದಾಖಲೆ ಜಯ ಗಳಿಸಿತು.


ಅಮೆರಿಕಾ ವಿರುದ್ಧ ಕೀನ್ಯಾ ಆರ್ಭಟ:

ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಅಮೆರಿಕಾ ಕೀನ್ಯಾ ವಿರುದ್ಧ ಭರ್ಜರಿ ಜಯ ದಾಖಲಿಸಿತು. ಆಡಿದ ಐದು ಪಂದ್ಯಗಳಲ್ಲಿ 16 ಅಂಕ ಸಂಪಾದಿಸಿದ ಕೀನ್ಯಾ ಉಪಾಂತ್ಯ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ದುರ್ಬಲ ಅಮೆರಿಕಾವನ್ನು ಆರು ಬಾರಿ ಆಲೌಟ್ ಮಾಡಿದ ಕೀನ್ಯಾ ಒಟ್ಟು 74-19 ಅಂಕಗಳೊಂದಿಗೆ ಅಭೂತಪೂರ್ವ ಜಯ ದಾಖಲಿಸಿ ಉಪಾಂತ್ಯಕ್ಕೆ ಥಾಯ್ಲೆಂಡ್ ಮತ್ತು ಜಪಾನ್ ಗೆ ಸ್ಪರ್ಧೆವೊಡ್ಡಿದೆ.

World Cup Kabaddi: India qualify for semifinal

ಆಡಿದ ಐದೂ ಪಂದ್ಯಗಳಲ್ಲಿ ಸತತ ಸೋಲುಂಡ ಅಮೆರಿಕಾ ಟೂರ್ನಿಗೆ ಸೋಲಿನ ವಿದಾಯ ಹೇಳಿತು. 15 ಅಂಕ ಗಳಿಸಿರುವ ಥಾಯ್ಲೆಂಡ್ ತಂಡ ಬುಧವಾರ ನಡೆಯುವ ಪಂದ್ಯದಲ್ಲಿ ಜಪಾನ್ ಎದುರು ಸೋತರೆ ನಾಲ್ಕರ ಘಟ್ಟಕ್ಕೆ ಕೀನ್ಯಾ ಮತ್ತು ಜಪಾನ್ ನಡುವೆ ತೀವ್ರ ಪೈಪೋಟಿ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India confirmed their place in the semifinal with a thumping 69-18 win over England to end their group campaign on a high in the Kabaddi World Cup
Please Wait while comments are loading...