ಹಾಕಿ ಆಟಗಾರ್ತಿ ನಿಗೂಢ ರೀತಿಯಲ್ಲಿ ಸಾವು

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 04: ಭಾರತೀಯ ಹಾಕಿ ತಂಡದ ಆಟಗಾರ್ತಿ ಜ್ಯೋತಿ ಗುಪ್ತಾ (20) ಅವರ ಶವ ರೆವಾರಿ ರೈಲ್ವೆ ನಿಲ್ದಾಣದ ಬಳಿಯ ಹಳಿಯಲ್ಲಿ ಪತ್ತೆಯಾಗಿದೆ.

ಸೋನಿಪತ್ ಜಿಲ್ಲೆಯ ಜ್ಯೋತಿ ಅವರು ಬುಧವಾರ ರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಈ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಜ್ಯೋತಿ ಅವರ ಕುಟುಂಬಸ್ಥರು ತನಿಖೆಗೆ ಆಗ್ರಹಿಸಿದ್ದಾರೆ.

Woman hockey player Jyoti Gupta found dead in front of train

ರೋಹ್ಟಕ್ ನ ಮಹರ್ಷಿ ದಯಾನಂದ್ ವಿವಿಗೆ ತೆರಳುವುದಾಗಿ ಹೇಳಿ ಜ್ಯೋತಿ ಅವರು ಮತ್ತೆ ಮನೆಗೆ ಮರಳಿರಲಿಲ್ಲ. ಬುಧವಾರ ರಾತ್ರಿಯೇ ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ದೇಶದ ಹಾಕಿ ತಂಡವನ್ನು ಜ್ಯೋತಿ ಪ್ರತಿನಿಧಿಸಿದ್ದರು. ಜೊತೆಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಹಲವು ಟೂರ್ನಿಗಳಲ್ಲಿ ಜ್ಯೋತಿ ಆಡಿದ್ದರು.ಕಳೆದ ವರ್ಷ ವೆಲೆನ್ಸಿಯಾದಲ್ಲಿ ನಡೆದ ಐದು ರಾಷ್ಟ್ರಗಳ ಅಂತಾರಾಷ್ಟ್ರೀಯ ಜ್ಯೂನಿಯರ್ ಹಾಕಿ ಟೂರ್ನಮೆಂಟ್ ನಲ್ಲಿ ಜ್ಯೋತಿ ಭಾಗವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The 20-year-old player who represented India in the South Asian Games in 2016 allegedly committed suicide by jumping in front of a Chandigarh-Jaipur train near the railway flyover at the Rewari-Rohtak section on Wednesday night.
Please Wait while comments are loading...