ಆರ್ಥಿಕ ಸಂಕಷ್ಟ, ಕಿಡ್ನಿ ಮಾರಾಟಕ್ಕೆ ಮುಂದಾದ ಆಟಗಾರ

Posted By:
Subscribe to Oneindia Kannada

ಬೆಂಗಳೂರು, ಜ.12: ನಾಲ್ಕೈದು ವರ್ಷಗಳ ಕೆಳಗೆ ಜಗತ್ತೆ ಮೆಚ್ಚುವಂಥ ಸಾಧನೆ ಮಾಡಿದ್ದ ಕ್ರೀಡಾಪಟು ಇಂದು ತನ್ನ ಹುಟ್ಟುಹಬ್ಬಕ್ಕೂ ನಾಲ್ಕು ದಿನ ಮುಂಚೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಭಾರತದ ಪರ ಏಷ್ಯನ್ ಜ್ಯೂನಿಯರ್ ಸ್ಕ್ವಾಶ್ ಪ್ರಶಸ್ತಿ ಗೆದ್ದಿದ್ದ ರವಿ ದೀಕ್ಷಿತ್ ಅವರು ಆರ್ಥಿಕವಾಗಿ ದುಃಸ್ಥಿತಿಯಲ್ಲಿದ್ದು ತಮ್ಮ ಕಿಡ್ನಿ ಮಾರಾಟಕ್ಕೆ ಮುಂದಾಗಿದ್ದಾರೆ.

ಜನವರಿ 16ರಂದು ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳಬೇಕಿರುವ ರವಿ ದೀಕ್ಷಿತ್ ಅವರು 24ನೇ ಹುಟ್ಟುಹಬ್ಬದ ದಿನಕ್ಕೂ ನಾಲ್ಕು ದಿನ ಮುಂಚಿತವಾಗಿ ಫೇಸ್ ಬುಕ್ ನಲ್ಲಿ ಆಘಾತಕಾರಿ ಸುದ್ದಿ ಹಾಕಿದ್ದಾರೆ. ತಮ್ಮ ಕಿಡ್ನಿಯನ್ನು 8 ಲಕ್ಷ ರು ಗೆ ಮಾರಾಟ ಮಾಡಲು ಸಿದ್ಧ ಎಂದು ಹೇಳಿಕೊಂಡಿದ್ದಾರೆ.

ನಾನು ಕಳೆದ 10 ವರ್ಷದಿಂದ ಸ್ಕ್ವಾಶ್ ಕ್ರೀಡೆ ಆಡುತ್ತಿದ್ದೇನೆ. ಅನೇಕ ಟೂರ್ನಿಗಳನ್ನು ಗೆದ್ದಿದ್ದೇನೆ. ರಾಜ್ಯ, ದೇಶ, ವಿಶ್ವಮಟ್ಟದ ಪ್ರಶಸ್ತಿಗಳು ಲಭಿಸಿವೆ. ಆದರೆ, ಯಾವುದೇ ರೀತಿಯ ಆರ್ಥಿಕ ನೆರವು ನನಗೆ ಸಿಕ್ಕಿಲ್ಲ ಎಂದು ದಿ ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ.

India's squash champion 'ready to sell' his kidney for Rs 8 lakh

ಧಮ್ ಪುರ್ ಶುಗರ್ ಮಿಲ್ಸ್ ನೆರವಿನಿಂದ ಜೀವನ ಸಾಗುತ್ತಿದೆ. ಆದರೆ, ಇನ್ನೆಷ್ಟು ದಿನ? ಗುವಾಹಟಿಯಲ್ಲಿ ಮುಂದಿನ ತಿಂಗಳು ಟೂರ್ನಿ ಆರಂಭವಾಗಲಿದೆ. ಭಾರತದ ಪರ ನಾನು ಮತ್ತೊಮ್ಮೆ ಆಡಬೇಕಿದೆ. ನನಗೆ ಸೂಕ್ತ ಪ್ರಾಯೋಜಕತ್ವ ಸಿಗುತ್ತಿಲ್ಲ. ಚೆನ್ನೈನಲ್ಲಿ ನಾನು ತರಬೇತಿ ಪಡೆಯುತ್ತಿದ್ದೇನೆ.

ನನ್ನ ಅಭಿಯಾನ ಮುಂದುವರೆಸಲು ನಾನು ನನ್ನ ಕಿಡ್ನಿ ಮಾರಿಕೊಳ್ಳಲು ಸಿದ್ಧ. ದಯವಿಟ್ಟು ಯಾರಾದರೂ ಕಿಡ್ನಿ ಬೇಕಾಗಿದ್ದರೆ ಕೂಡಲೇ ಸಂಪರ್ಕಿಸಿ. ನನ್ನ ಕಿಡ್ನಿ ಬೆಲೆ 8 ಲಕ್ಷ ರು ಎಂದು ಭಾನುವಾರ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

ವಿಶ್ವದ ನಂಬರ್ 211ನೇ ಶ್ರೇಯಾಂಕಿತ ಆಟಗಾರ ದೀಕ್ಷಿತ್ ಅವರು ದಕ್ಷಿಣ ಏಷ್ಯಾ ಗೇಮ್ಸ್ ಗಾಗಿ ಚೆನ್ನೈನಲ್ಲಿ ಸದ್ಯ ತರಬೇತಿ ಪಡೆಯುತ್ತಿದ್ದಾರೆ. ಮೇಜರ್ ಮಣಿಯಂ ಹಾಗೂ ಸೈರಸ್ ಪೊಂಚಾ ಅವರು ತರಬೇತಿ ನೀಡುತ್ತಿದ್ದಾರೆ. ಅಸ್ಸಾಂ ಹಾಗೂ ಮೇಘಾಲಯದಲ್ಲಿ ಮುಂದಿನ ತಿಂಗಳು ಟೂರ್ನಿ ನಡೆಯಲಿದೆ.

2010ರ ಜುಲೈನಲ್ಲಿ ಕೊಲಂಬೋದಲ್ಲಿ ನಡೆದ 19 ರ ವಯೋಮಿತಿಯೊಳಗಿನ ಏಷ್ಯನ್ ಜ್ಯೂನಿಯರ್ ವೈಯಕ್ತಿಕ ಚಾಂಪಿಯನ್ಸ್ ಪ್ರಶಸ್ತಿಯನ್ನು ದೀಕ್ಷಿತ್ ಗೆದ್ದು ಇತಿಹಾಸ ನಿರ್ಮಿಸಿದ್ದರು. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In 2010, Ravi Dixit created history by becoming the 1st Indian male to win the Asian Junior squash title. But five years later, the champion youngster is forced to "sell" his kidney to fund his training.
Please Wait while comments are loading...