ವಿಂಬಲ್ಡನ್ : ಹಾಲಿ ಚಾಂಪಿಯನ್ ಸಾನಿಯಾ -ಮಾರ್ಟಿನಾರಿಂದ ಶುಭಾರಂಭ

Posted By:
Subscribe to Oneindia Kannada

ಲಂಡನ್, ಜುಲೈ 03: ವಿಂಬಲ್ಡನ್ ಮಹಿಳೆಯರ ಡಬಲ್ಸ್ ಚಾಂಪಿಯನ್ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಅವರು 2016ರ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಟ್ಜರ್ಲೆಂಡ್ ನ ಮಾರ್ಟಿನಾ ಹಿಂಗೀಸ್ ಅವರು 2016 ರ ವಿಂಬಲ್ಡನ್ ಡಬಲ್ಸ್ ವಿಭಾಗದಲ್ಲಿ ಶನಿವಾರ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿದ್ದಾರೆ. [ವಿಂಬಲ್ಡನ್ : ಆಟಗಾರರಿಗೆ ಮೇಡ್ ಇನ್ ಇಂಡಿಯಾ ಉತ್ಪನ್ನ ಬೇಕೇ ಬೇಕು!]

Wimbledon title defence : Sania Mirza-Martina Hingis pair starts with win

ಜರ್ಮನಿಯ ಅನಾ ಪ್ರೀಡ್​ಸಾಮ್ ಮತ್ತು ಲೌರಾ ಸಿಗ್ಮಂಡ್ ಜೋಡಿಯನ್ನು ಇಂಡೋ-ಸ್ವಿಸ್ ಜೋಡಿ ಸೋಲಿಸಿದೆ. ಸುಮಾರು ಒಂದು ಗಂಟೆ 24 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಾನಿಯಾ ಹಾಗೂ ಮಾರ್ಟಿನಾ ಅವರು 6-2, 7-5 ನೇರ ಸೆಟ್​ಗಳಲ್ಲಿ ಆಲ್ ಇಂಗ್ಲೆಂಡ್ ಕ್ಲಬ್ ಮೈದಾನದಲ್ಲಿ ಸೋಲಿಸಿದರು. [ನಡಾಲ್ ಅವರು ವಿಂಬಲ್ಡನ್ ಆಡುತ್ತಿಲ್ಲ]

ಟಾಪ್ ಸೀಡ್ ನಲ್ಲಿರುವ ಸಾನಿಯಾ-ಮಾರ್ಟಿನಾ ಜೋಡಿ ತಮ್ಮ ಮುಂದಿನ ಪಂದ್ಯವನ್ನು ಜಪಾನಿನ ಎರಿ ಹೊಜುಮಿ ಮತ್ತು ಮಿಯು ಕಾಟೊ ವಿರುದ್ಧ ಆಡಲಿದೆ.

ಜುಲೈ 3ರಂತೆ ಮೂರನೇ ಸುತ್ತಿನ ನಂತರ ಮಹಿಳಾ ಸಿಂಗಲ್ಸ್ ಟಾಪ್ 10ರೊಳಗಿನ ಶ್ರೇಯಾಂಕಿತರ ಫಲಿತಾಂಶ

* 8ನೇ ಶ್ರೇಯಾಂಕಿತೆ ವೀನಸ್ ವಿಲಿಯಮ್ಸ್ ಗೆ 7-5,4-6,10-8 ರಲ್ಲಿ ಕಸಟ್ಕಿನಾ ವಿರುದ್ಧ ಜಯ
* (9) ಎಂ ಕೀಸ್ ಗೆ 6-4,5-7,6-2ರಲ್ಲಿ ಕಾರ್ನೆಟ್ ವಿರುದ್ಧ ಜಯ
* (5) ಹಲೆಪ್ ಗೆ 6-4,6-3ರಲ್ಲಿ ಬರ್ಟೆನ್ಸ್ ವಿರುದ್ಧ ಜಯ
* (3) ರಾಂಡ್ವಸ್ಕಗೆ 6-3, 6-1ರಲ್ಲಿ ಸಿನಿಯಾಕೊವಾ ವಿರುದ್ಧ ಜಯ.

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sania Mirza-Martina Hingis pair starts Wimbledon title defence with comfortable win over Germany's A. Friedsam / L. Siegemund with 6-2,7-5 straight sets in All England club on Saturday (July 02)
Please Wait while comments are loading...