ವಿಂಬಲ್ಡನ್ ː ಹಾಲಿ ಚಾಂಪಿಯನ್ ಆಂಡಿ ಮರ್ರೆ ಔಟ್

Posted By:
Subscribe to Oneindia Kannada

ವಿಂಬಲ್ಡನ್, ಜುಲೈ 13:ಅಗ್ರ ಶ್ರೇಯಾಂಕಿತ ಆಟಗಾರ, ಹಾಲಿ ಚಾಂಪಿಯನ್ ಆಂಡಿ ಮರ್ರೆ ಅವರು ವಿಂಬಲ್ಡನ್‌ ಟೆನಿಸ್ ಟೂರ್ನಿಯಿಂದ ಔಟಾಗಿದ್ದಾರೆ. ಬುಧವಾರ ನಡೆದಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮರ್ರೆ ಅವರನ್ನು ಸೋಲಿಸಿದ ಅಮೆರಿಕದ ಸ್ಯಾಮ್ ಕ್ವೆರಿ, ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದರು.

2015ರ ಚಾಂಪಿಯನ್‌ ನೊವಾಕ್ ಜೊಕೊವಿಚ್ ಅವರನ್ನು ಕಳೆದ ವರ್ಷ ಮೂರನೇ ಸುತ್ತಿನಲ್ಲಿ ಕ್ವೆರಿ ಅವರು ಮಣಿಸಿದ್ದರು.ವಿಶ್ವದ 28ನೇ ಶ್ರೇಯಾಂಕಿತ ಆಟಗಾರ ಕ್ವೆರಿ ಅವರು ಅಗ್ರ ಶ್ರೇಯಾಂಕಿತ ಮರ್ರೆ ಅವರನ್ನು 3-6, 6-4, 6-7 (4), 6-1 ಹಾಗೂ 6-1ರಲ್ಲಿ ಸೋಲಿಸಿದರು.

Wimbledon 2017, Sam Querrey stuns Andy Murray to reach semis

ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾದ ಸಿಲಿಕ್ ಅವರು ಲಕ್ಸಂಬರ್ಗ್ ನನ ಗಿಲಿಸ್ ಮುಲ್ಲರ್‌ ವಿರುದ್ಧ 3-6, 7-6 (6), 7-5, 5-7, 6-1ರಲ್ಲಿ ಜಯ ಗಳಿಸಿದರು. ಸೆಮಿಫೈನಲ್ ನಲ್ಲಿ ಕ್ವೆರಿ ಹಾಗೂ ಸಿಲಿಕ್ ಸೆಣೆಸಲಿದ್ದಾರೆ. ರಫೆಲ್ ನಡಾಲ್ ರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಹಂತ ತಲುಪಿದ್ದ ಮುಲ್ಲರ್ ಅವರು ಪ್ರಯಾಸದ ಸೋಲು ಕಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Another giant crashed out of Wimbledon as world number 1 Andy Murray suffers a shock defeat against world number 27 Sam Querrey at the centre.
Please Wait while comments are loading...