ವಿಂಬಲ್ಡನ್ : ಆಟಗಾರರಿಗೆ ಮೇಡ್ ಇನ್ ಇಂಡಿಯಾ ಉತ್ಪನ್ನ ಬೇಕೇ ಬೇಕು!

Posted By:
Subscribe to Oneindia Kannada

ವಿಂಬಲ್ಡನ್, ಜೂನ್ 30: ವಿಶ್ವದ ನಂಬರ್ ಒನ್ ಆಟಗಾರ ಸೆರ್ಬಿಯಾ ನೋವಾಕ್ ಜೋಕೊವಿಕ್ ಇರಲಿ, ರೋಜರ್ ಫೆಡರರ್ ಇರಲಿ, ನಡಾಲ್, ಸೆರೆನಾ ಹೀಗೆ ಟೆನಿಸ್ ತಾರೆಯರು ವಿಂಬಲ್ಡನ್ ಹಸಿರು ಅಂಗಳಕ್ಕೆ ಇಳಿದಾಗ ಅವರಿಗೆ ಮೇಡ್ ಇನ್ ಇಂಡಿಯಾ ಉತ್ಪನ್ನವೇ ಬೇಕು. 100 ಮಿಲಿಯನ್ ಡಾಲರ್ ಪ್ರಶಸ್ತಿ ಮೊತ್ತದ ಗುರಿ ಬೆನ್ನು ಹತ್ತಿರುವ ನೋವಾಕ್ ಅವರ ಯಶಸ್ಸಿಗೆ 35 ಡಾಲರ್ ಬೆಲೆ ಬಾಳುವ ಟವೆಲ್ ಕೂಡಾ ಕಾರಣ ಎನ್ನಬಹುದು.

2011,2014 ಹಾಗೂ 2015ರಲ್ಲಿ ವಿಂಬಲ್ಡನ್ ಚಾಂಪಿಯನ್ ಆಗಿರುವ ನೊವಾಕ್ ಅವರು ಇತರೆ ಆಟಗಾರರಿಗೆ ಹೋಲಿಸಿದರೆ ಪಂದ್ಯದ ವೇಳೆ ಬೆವರು ಒರೆಸಿಕೊಳ್ಳಲು ಹೆಚ್ಚು ಬಾರಿ ಟವೆಲ್ ಬಳಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಟವೆಲ್ ಅಸಲಿಗೆ ಉತ್ಪಾದನೆಯಾಗುವುದು ಭಾರತದ ಗುಜರಾತಿನ ವಪಿ ಎಂಬ ನಗರದಲ್ಲಿ ಎಂಬುದು ವಿಶೇಷ. [ಆಹಾ ಎಂಥಾ ಆ ಕ್ಷಣ ನೆನೆದರೆ ತಲ್ಲಣ]

ನಾನು ಅಧಿಕ ಸೆಕೆ ಅಥವಾ ಬೆವರಿನ ಕಾರಣ ಹೇಳಿ ಆಗೊಮ್ಮೆ ಈಗೊಮ್ಮೆ ಹೆಚ್ಚುವರಿ ಟವೆಲ್ ಪಡೆಯಲು ಪ್ರಯತ್ನಿಸುತ್ತೇನೆ ಎಂದು ಮೂರು ಬಾರಿಯ ವಿಂಬಲ್ಡನ್ ಚಾಂಪಿಯನ್ ಹೇಳುತ್ತಾರೆ. ಆಲ್ ಇಂಗ್ಲೆಂಡ್ ಕ್ಲಬ್ ನನ್ನನ್ನು ಈ ಕಾರಣಕ್ಕೆ ಕ್ಷಮಿಸುತ್ತದೆ ಎಂದು ಭಾವಿಸುತ್ತೇನೆ ಎಂದು ಜೊಕೊವಿಕ್ ಹೇಳುತ್ತಾರೆ. [ವಿಂಬಲ್ಡನ್ ಚಿತ್ರಗಳು: ರಾಜ,ರಾಣಿ, ರೋಜರ್, ರಾಕೆಟ್]

Wimbledon: Made in India towels for players

ಈ ಟವೆಲ್ ಉತ್ಪಾದಿಸುವ ಕ್ರಿಸ್ಟಿ ಕಂಪೆನಿ ರಾಣಿ ವಿಕ್ಟೋರಿಯಾ ಅವರಿಗೂ ಈ ಟವೆಲ್ ಪೂರೈಸಿದೆ. ಭಾರತದ ಗುಜರಾತ್‌ನ ವಪಿ ನಗರದಲ್ಲಿ ಈ ಟವೆಲ್ ಉತ್ಪಾದಿಸಲಾಗುತ್ತದೆ. ವೆಲ್ ಸ್ಪನ್ ಬ್ರ್ಯಾಂಡ್ ನೊಂದಿಗೆ ವಿಶ್ವಕ್ಕೆ ಪರಿಚಯಿಸಲಾಗುತ್ತಿದೆ.

2013ರಲ್ಲಿ ಕಂಪೆನಿ 99 ಸಾವಿರ ಟವೆಲ್ ಪೂರೈಸಿತ್ತು. ಸಾಮಾನ್ಯವಾಗಿ ಟೂರ್ನಿಯ ಕೊನೆಗೆ ಉಳಿದ ಟವೆಲ್‌ಗಳನ್ನು ಟೂರ್ನಿಯ ಸಿಬ್ಬಂದಿ ಹಾಗೂ ಸ್ವಯಂಸೇವಕರಿಗೆ ನೀಡಲಾಗುತ್ತದೆ. ಸ್ಟಾರ್ ಆಟಗಾರರು ತಮ್ಮ ಅಭಿಮಾನಿಗಳತ್ತ ಟವೆಲ್ ಎಸೆಯುವುದರೆ ಸಾಕು ನಿಧಿ ಸಿಕ್ಕಂತೆ ಫ್ಯಾನ್ಸ್ ಸಂಭ್ರಮಿಸುವುದನ್ನು ಕಾಣಬಹುದು. ರಗ್ಬಿ 2015 ವಿಶ್ವಕಪ್, ಐಸಿಸಿ ವಿಶ್ವ ಟಿ20 ಟೂರ್ನಮೆಂಟ್ ಗೂ ಈ ಕಂಪನಿಯಿಂದ ಮೆತ್ತನೆಯ ಟವೆಲ್ ಪೂರೈಕೆಯಾಗಿದೆ.

ಆಲ್ ಇಂಗ್ಲೆಂಡ್ ಕ್ಲಬಿನ ಹಸಿರು ಹುಲ್ಲು ಹಾಸಿನ ಮೇಲೆ ಅಚ್ಚ ಬಿಳಿಪು, ಸ್ವಚ್ಛ ಬಿಳಿಪಿನ ಉಡುಗೆ ತೊಟ್ಟ ಟೆನಿಸ್ ಪಟುಗಳ ಆರ್ಭಟ ಆರಂಭವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Novak Djokovic may have been the first man to break the $100 million prize money barrier, but those staggering riches have not cured his habit of spiriting away coveted Wimbledon towels.The company which produces the towels, Christy, once supplied Queen Victoria. Now most of their production is carried out in Gujarat in India.
Please Wait while comments are loading...