ಇಂದು ವಿಂಬಲ್ಡನ್ ಫೈನಲ್:11ನೇ ಗ್ರಾಂಡ್ ಸ್ಲಾಂ ನಿರೀಕ್ಷೆಯಲ್ಲಿ ವೀನಸ್

Posted By:
Subscribe to Oneindia Kannada

ಲಂಡನ್, ಜುಲೈ 13: ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್ ತಮ್ಮ ವೃತ್ತಿಜೀವನದ 11ನೇ ಗ್ರ್ಯಾಂಡ್ ಸ್ಲಾಂ ನಿರೀಕ್ಷೆಯಲ್ಲಿದ್ದಾರೆ.

ಜುಲೈ 15ರ ಸಂಜೆ 6:30ರ ಸುಮಾರಿಗೆ (ಭಾರತೀಯ ಕಾಲಮಾನ) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಅವರು, ಸ್ಪಾನಿಶ್-ವೆನೆಜುವೆಲಾದ ಆಟಗಾರ್ತಿಯಾದ ಗಾರ್ಬೈನ್ ಮುಗುರುಜಾ ಬ್ಲಾಂಕೋ ವಿರುದ್ಧ ಸೆಣಸಲಿದ್ದಾರೆ.

ಗುರುವಾರ ರಾತ್ರಿಯೇ ನಡೆದ ಇದೇ ವಿಭಾಗದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ, ಗಾರ್ಬೈನ್ ಮುಗುರುಜಾ ಅವರು, ಸ್ಲೊವಾಕಿಯಾದ ಮಾಗ್ಡಾಲೆನಾ ರಿಬಾರಿಕೊವಾ ವಿರುದ್ಧ 6-1, 6-1 ನೇರ ಸೆಟ್ ಗಳಿಂದ ಜಯ ಗಳಿಸಿದರು.

ಮತ್ತೆ ವೀನಸ್ ವಿಚಾರಕ್ಕೆ ಬರುವುದಾದರೆ, ಈಗಾಗಲೇ 2000, 2001, 2005, 2007 ಹಾಗೂ 2008ನೇ ಆವೃತ್ತಿಗಳಲ್ಲಿ ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದಿರುವ ವೀನಸ್, ಶನಿವಾರ ಮತ್ತೊಮ್ಮೆ ಈ ಪ್ರಶಸ್ತಿ ಗೆದ್ದರೆ ಇದು ಅವರ 6ನೇ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿಯಾಗಲಿದೆ. ವೀನಸ್ ಅವರ ಈ ಬಾರಿಯ ಫೈನಲ್ ನ ವಿಶೇಷವೇನು ಎಂಬುದರ ಮಾಹಿತಿ ಇಲ್ಲಿದೆ.
(ಚಿತ್ರಗಳು: ಪಿಟಿಐ)

9ನೇ ಬಾರಿಗೆ ಫೈನಲ್ ಗೆ ಲಗ್ಗೆ

9ನೇ ಬಾರಿಗೆ ಫೈನಲ್ ಗೆ ಲಗ್ಗೆ

ಗುರುವಾರ ರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ವೀನಸ್, ಬ್ರಿಟನ್ ನ ಜೊಹಾನ್ನಾ ಕೊಂಟಾ ವಿರುದ್ಧ 6-4, 6-4 ನೇರ ಸೆಟ್ ಗಳ ಅಂತರದಲ್ಲಿ ಜಯ ಸಾಧಿಸಿದರು. ಅಂದಹಾಗೆ, 2009ರಿಂದ ವಿಂಬಲ್ಡನ್ ಆಡುತ್ತಿರುವ ವೀನಸ್ ಅವರಿಗಿದು 9ನೆಯ ಫೈನಲ್ ಪ್ರವೇಶ.

ಮಾರ್ಟಿನಾ ನಂತರ ಈಕೆಯೇ ಹಿರಿಯಳು!

ಮಾರ್ಟಿನಾ ನಂತರ ಈಕೆಯೇ ಹಿರಿಯಳು!

ವಿಂಬಲ್ಡನ್ ಫೈನಲ್ ಗೆ ಕಾಲಿಡುವ ಮೂಲಕ, ವಿಂಬಲ್ಡನ್ ಟೆನಿಸ್ ಟೂರ್ನಿಯ ಕಳೆದ 23 ವರ್ಷಗಳಲ್ಲಿ ಫೈನಲ್ ಗೆ ಕಾಲಿಟ್ಟ ಅತ್ಯಂತ ಹಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ವೀನಸ್ ವಿಲಿಯಮ್ಸ್ ಅವರಿಗೀಗ 37 ವರ್ಷ. 1994ರಲ್ಲಿ ಮಾರ್ಟಿನಾ ನರ್ವಾಟಿಲೋವಾ ಅವರು, ತಮ್ಮ 38ನೇ ವಯಸ್ಸಿನಲ್ಲಿ ವಿಂಬಲ್ಡನ್ ಫೈನಲ್ ಗೆ ಕಾಲಿಟ್ಟಿದ್ದರು.

ಚರಿತ್ರಾರ್ಹ ಸಾಧನೆಯಿಂದ ಕೊಂಟಾ ವಂಚಿತೆ

ಚರಿತ್ರಾರ್ಹ ಸಾಧನೆಯಿಂದ ಕೊಂಟಾ ವಂಚಿತೆ

ಗುರುವಾರದ ಸೆಮಿಫೈನಲ್ ಪಂದ್ಯದಲ್ಲಿ ಜಯಗಳಿಸುವ ಮೂಲಕ ಅವರು, ಕೊಂಟಾ ಅವರ ಚರಿತ್ರಾರ್ಹ ಸಾಧನೆಯ ಕನಸನ್ನು ಭಗ್ನಗೊಳಿಸಿದರು. 40 ವರ್ಷಗಳಿಂದ ಈವರೆಗೆ ಯಾವುದೇ ಬ್ರಿಟನ್ ಮಹಿಳಾ ಟೆನಿಸ್ ಆಟಗಾರ್ತಿ ವಿಂಬಲ್ಡನ್ ಫೈನಲ್ ಗೆ ಕಾಲಿಟ್ಟಿಲ್ಲ. ಈ ಬಾರಿ ತಾವು ಫೈನಲ್ ಗೆ ಕಾಲಿಡುವ ಮೂಲಕ ಚರಿತ್ರೆಯಲ್ಲಿ ತಮ್ಮ ಹೆಸರನ್ನು ಬರೆಯುವ ಅವಕಾಶದಿಂದ ಕೊಂಟಾ ಅವರು ವಂಚಿತರಾದರು.

ಈ ಬಾರಿ ಗೆದ್ದರೆ ಇದು ವೀನಸ್ ನ 11ನೇ ಗ್ರ್ಯಾಂಡ್ ಸ್ಲಾಂ

ಈ ಬಾರಿ ಗೆದ್ದರೆ ಇದು ವೀನಸ್ ನ 11ನೇ ಗ್ರ್ಯಾಂಡ್ ಸ್ಲಾಂ

ಈಗಾಗಲೇ 10 ಗ್ರ್ಯಾಂಡ್ ಸ್ಲಾಂಗಳನ್ನು ವೀನಸ್ ವಿಲಿಯಮ್ಸ್ ಗೆದ್ದಿದ್ದಾರೆ. 2003, 2017ರಲ್ಲಿ ಆಸ್ಟ್ರೇಲಿಯಾ ಓಪನ್, 2002ರಲ್ಲಿ ಫ್ರೆಂಚ್ ಓಪನ್, 2000, 2001, 2005, 2007, 2008ರಲ್ಲಿ ವಿಂಬಲ್ಡನ್, 2000, 2001ರಲ್ಲಿ ಯುಎಸ್ ಓಪನ್ ಪ್ರಶಸ್ತಿಗಳನ್ನು ಅವರು ಗೆದ್ದಿದ್ದರು. ಇದೀಗ, ಮತ್ತೆ ಅವರು ವಿಂಬಲ್ಡನ್ ಗೆದ್ದರೆ, ಇದು ಅವರ ವೃತ್ತಿಜೀವನದಲ್ಲಿ ಸಾಧಿಸಿದ 11ನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಯಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Venus Williams became the oldest Wimbledon finalist for 23 years on Thursday as the American star ended Johanna Konta's history bid with a masterful 6-4, 6-2 win.
Please Wait while comments are loading...