ವಿಂಬಲ್ಡನ್ ಟೂರ್ನಿ ಫೈನಲ್ ನಲ್ಲಿ ಸೋತ ವೀನಸ್ ವಿಲಿಯಮ್ಸ್

Posted By:
Subscribe to Oneindia Kannada

ಲಂಡನ್, ಜುಲೈ 15: ತಮ್ಮ ವೃತ್ತಿಜೀವನದ 11ನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಯನ್ನು ನಿರೀಕ್ಷಿಸುತ್ತಿದ್ದ ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್ ಅವರು ಈ ಅವಕಾಶದಿಂದ ವಂಚಿತರಾಗಿದ್ದಾರೆ.

ಶನಿವಾರ ರಾತ್ರಿ ಮುಕ್ತಾಯಗೊಂಡ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅವರು, ಸ್ಪೇನ್-ವೆನೆಜುವೆಲಾದ ಆಟಗಾರ್ತಿ ಗಾರ್ಬೈನ್ ಮುಗುರುಜಾ ಅವರ ವಿರುದ್ಧ 5-7, 0-6 ಸೆಟ್ ಗಳ ಅಂತರದಲ್ಲಿ ಸೋಲು ಕಂಡರು.

Wimbledon 2017: Venus Williams defeated by Garbine Muguruja at Women's Singles Final

ಈ ಪಂದ್ಯದಲ್ಲಿನ ಗೆಲುವಿನ ಮೂಲಕ ಗಾರ್ಬೈನ್ ಮುಗುರುಜಾ 18 ಕೋಟಿ, 51 ಲಕ್ಷ ರು.ಗಳನ್ನು ಬಹುಮಾನವಾಗಿ ಪಡೆದರೆ, ರನ್ನರ್ ಅಪ್ ಪ್ರಶಸ್ತಿಗೆ ಪಾತ್ರರಾದ ವೀನಸ್ ವಿಲಿಯಮ್ಸ್ 9 ಕೋಟಿ, 25 ಲಕ್ಷ ರು. ಗಳಿಸಿದರು.

ಆರಂಭಿಕ ಸೆಟ್ ನಿಂದಲೇ ತೀವ್ರ ಒತ್ತಡಕ್ಕೆ ಒಳಗಾದಂತೆ ಕಂಡುಬಂದ ಟೂರ್ನಿಯ 10ನೇ ಶ್ರೇಯಾಂಕಿತೆಯಾದ ವೀನಸ್, 14ನೇ ಶ್ರೇಯಾಂಕಿತೆ ಮುಗುರುಜಾ ಅವರ ವಿರುದ್ಧ ಅಂಕಗಳಿಸಲು ತೊಳಲಾಡಿದರು.

ಆದರೂ, ತೀವ್ರ ತೆರನಾದ ಹೋರಾಟ ಮಾಡಿದ ಅವರ ಆಟದಿಂದಾಗಿ, ಈ ಸೆಟ್ ದೀರ್ಘಾವಧಿವರೆಗೆ ವಿಸ್ತರಿಸಿತು. ಆದರೂ, ಈ ಸೆಟ್ ನಲ್ಲಿ ವೀರೋಚಿತ ಹೋರಾಟ ನೀಡಿದ ಮುಗುರುಜಾ 7-5 ಅಂಕಗಳ ಅಂತರದಲ್ಲಿ ಜಯ ಸಾಧಿಸಿದರು.

ಆನಂತರದ ಸೆಟ್ ನಲ್ಲಿ ವೀನಸ್ ಅವರ ಸಪ್ಪೆಯಾಟ ಅವರಿಗೇ ಮುಳುವಾಯಿತು. ಅತ್ತ, ಗಾರ್ಬೈನ್ ಮುಗುರುಜಾ ಅವರು, ತೀವ್ರ ಆಕ್ರಮಣಕಾರಿ ಆಟವಾಡಿದರೆ, ಇತ್ತ ವೀನಸ್ ಅವರು ಪ್ರತಿರೋಧ ತೋರಲೇ ಇಲ್ಲ.

ಹಾಗಾಗಿ, ಈ ಸೆಟ್ ನಲ್ಲಿ ಮುಗುರುಜಾ ಅವರು, 6-0 ಅಂತರದಲ್ಲಿ ಜಯ ಸಾಧಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
America's tennis star Venus Williams suffer defeat to Garbine Muguruja of Spain-Venezuela by 5-7, 0-6 sets.
Please Wait while comments are loading...