ವಿಂಬಲ್ಡನ್ ಮಿಶ್ರಡಬಲ್ಸ್: ರೋಹನ್ ಗೆ ಜಯ, ಸಾನಿಯಾಗೆ ಸೋಲು

Posted By:
Subscribe to Oneindia Kannada

ಲಂಡನ್, ಜುಲೈ 13: ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಬುಧವಾರ, ಭಾರತಕ್ಕೆ ಮಿಶ್ರ ಫಲ ಲಭ್ಯವಾಗಿದೆ. ಈ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯವೊಂದರಲ್ಲಿ ರೋಹನ್ ಬೋಪಣ್ಣ ಜೋಡಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಗೆ ಕಾಲಿಟ್ಟರೆ, ಟೆನಿಸ್ ತಾರೆ ಸಾನಿಯಾ ಮಿರ್ಜಾ ಜೋಡಿಯು ಪ್ರೀ ಕ್ವಾರ್ಟರ್ ನಲ್ಲಿ ಮುಗ್ಗರಿಸಿ ನಿರಾಸೆ ಹೊಂದಿತು.

ಬುಧವಾರ ರಾತ್ರಿ ನಡೆದ ಪ್ರೀ ಕ್ವಾರ್ಟರ್ ಫೈನಲ್ ಹಂತದ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಅವರ ಜೋಡಿಯಾದ ಗ್ಯಾಬ್ರಿಯೆಲಾ ಡಾಬ್ರೊವ್ ಸ್ಕಿ (ಕೆನಡಾ) ಜೋಡಿ, ಕ್ರೋವೇಶಿಯಾದ ಜೋಡಿಯಾದ ಆ್ಯನಾ ಕೊನ್ಜುಹ್ ಹಾಗೂ ನಿಕೋಲಾ ಮೆಕ್ಟಿಕ್ ಅವರನ್ನು 7-6 (7-5), 6-2 ಸೆಟ್ ಗಳ ಅಂತರದಲ್ಲಿ ಸೋಲಿಸಿತು.

Wimbledon 2017: Rohan Bopanna to Quarter final, Sania looses in Mixed doubles

ಗುರುವಾರ ರಾತ್ರಿ 8:30ರ ಸುಮಾರಿಗೆ ಆರಂಭವಾಗುವ ಕ್ವಾರ್ಟರ್ ಫೈನಲ್ ಹಂತದ ಪಂದ್ಯದಲ್ಲಿ ಬೋಪಣ್ಣ ಜೋಡಿ, ಹೆನ್ರಿ ಕೊಂಟಿನೆನ್ (ಫಿನ್ಲೆಂಡ್) ಹಾಗೂ ಹಿತರ್ ವ್ಯಾಟ್ಸನ್ (ಬ್ರಿಟನ್) ಅವರನ್ನು ಎದುರಿಸಲಿದೆ.

ವಿಂಬಲ್ಡನ್ ː ಸಾನಿಯಾ, ರೋಹನ್ ಬೋಪಣ್ಣ ಶುಭಾರಂಭǃ

ಬುಧವಾರ ರಾತ್ರಿಯೇ ನಡೆದ ಮತ್ತೊಂದು ಪ್ರೀ ಕ್ವಾರ್ಟರ್ ಫೈನಲ್ ಹಂತದ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಇವಾನ್ ಡೋಡಿಗ್ (ಕೆನಡಾ) ಜೋಡಿ, ಹೆನ್ರಿ ಕೊಂಟಿನೆನ್ (ಫಿನ್ಲೆಂಡ್) ಹಾಗೂ ಹಿತರ್ ವ್ಯಾಟ್ಸನ್ (ಬ್ರಿಟನ್) ಜೋಡಿ ವಿರುದ್ಧ 6-7 (4-7), 4-6 ಸೆಟ್ ಗಳ ಅಂತರದಲ್ಲಿ ಸೋಲು ಕಂಡಿತು.

ಇಲ್ಲಿ, ಸಾನಿಯಾ ಜೋಡಿಯನ್ನು ಮಣಿಸಿದ ಜೋಡಿಯೇ ಗುರುವಾರ ರಾತ್ರಿ ನಡೆಯಲಿರುವ ಈ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಗ್ಯಾಬ್ರಿಯೆಲಾ ಡಾಬ್ರೊವ್ ಸ್ಕಿ ಜೋಡಿಯನ್ನು ಎದುರಿಸಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In Wimbledon 2017, Rohan Bopanna and his partner won their pre-quarter final match in Mixed doubles and went to quarter final. But, India's tennis sensation Sania Mirza and her partner suffered defeat in pre-quarters of mixed doubles and knocked out from the tournament.
Please Wait while comments are loading...