ವಿಂಬಲ್ಡನ್: ಪ್ರಶಸ್ತಿ ಸುತ್ತಿಗೆ ಪ್ರಯಾಸದಿಂದ ಲಗ್ಗೆ ಹಾಕಿದ ರೋಜರ್ ಫೆಡರರ್

Posted By:
Subscribe to Oneindia Kannada

ಲಂಡನ್, ಜುಲೈ 14: ಸ್ವಿಜರ್ಲೆಂಡ್ ನ ಟೆನಿಸ್ ಆಟಗಾರ ರೋಜರ್ ಫೆಡರರ್ ಅವರು, ಇಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ತಡರಾತ್ರಿ ಮುಗಿದ ಟೂರ್ನಿಯ ಪುರುಷರ ಸಿಂಗಲ್ಸ್ ನ ಸೆಮಿಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್, ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಚ್ ವಿರುದ್ಧ 7-6 (7-6), 7-6 (7-4), 6-4 ಸೆಟ್ ಗಳ ಅಂತರದಲ್ಲಿ ಜಯ ಕಂಡು ಫೈನಲ್ ಗೆ ಕಾಲಿಟ್ಟರು.

ವಿಂಬಲ್ಡನ್ ಟೆನಿಸ್ ಟೂರ್ನಿ: ಫೈನಲ್ ಗೆ ಕಾಲಿಟ್ಟ ವೀನಸ್ ವಿಲಿಯಮ್ಸ್

ಜುಲೈ 16ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಅವರು, ಕ್ರೊವೇಶಿಯಾದ ಮರಿನ್ ಸಿಲಿಕ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಶನಿವಾರ ರಾತ್ರಿಯೇ ನಡೆದ ಮತ್ತೊಂದು ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸಿಲಿಕ್, ಅಮೆರಿಕದ ಸ್ಯಾಮ್ ಆಸ್ಟಿನ್ ಕ್ವೆರಿ ವಿರುದ್ಧ 6-7 (6-8), 6-4, 7-6 (7-3), 7-5 ಸೆಟ್ ಗಳ ಅಂತರದಲ್ಲಿ ಜಯಿಸಿ ಫೈನಲ್ ಗೆ ಅಡಿಯಿಟ್ಟರು.

Wimbledon 2017: Federer reaches Men's Singles Final sets title clash with marin cilic

ಫೆಡರರ್ ಗೆ ಪ್ರಯಾಸದ ಗೆಲುವು: ಥಾಮಸ್ ಬೆರ್ಡಿಚ್ ವಿರುದ್ಧದ ಪಂದ್ಯದಲ್ಲಿ ಫೆಡರರ್ ಅವರ ಗೆಲುವು ಸರಾಗವಾಗಿರಲಿಲ್ಲ. ಮೊದಲೆರಡು ಸೆಟ್ ಗಳಲ್ಲಿ ಅವರು ಎದುರಾಳಿಯಿಂದ ತೀವ್ರ ಪ್ರತಿರೋಧ ಎದುರಿಸಬೇಕಾಗಿ ಬಂತು.

ವಿಂಬಲ್ಡನ್ ː ಹಾಲಿ ಚಾಂಪಿಯನ್ ಆಂಡಿ ಮರ್ರೆ ಔಟ್

ಆ ಮೊದಲೆರಡು ಸೆಟ್ ಗಳಲ್ಲಿ ಇಬ್ಬರೂ ಸರಿಸಮಾನ ಹೋರಾಟ ನೀಡಿದ್ದರಿಂದಾಗಿ ಆ ಎರಡೂ ಸೆಟ್ ಗಳು ಟೈ ಬ್ರೇಕರ್ ಗೆ ಜಾರಿದವು. ಆದರೂ, ಶತಪ್ರಯತ್ನದಿಂದಾಗಿ ಆ ಸೆಟ್ ಗಳನ್ನು ಗೆಲ್ಲುವಲ್ಲಿ ಫೆಡರರ್ ಯಶಸ್ವಿಯಾದರು.

ವಿಂಬಲ್ಡನ್ ಮಿಶ್ರಡಬಲ್ಸ್: ರೋಹನ್ ಗೆ ಜಯ, ಸಾನಿಯಾಗೆ ಸೋಲು

ಹೀಗಾಗಿ, ತಮ್ಮೆಲ್ಲಾ ಶಕ್ತಿಯನ್ನು ವ್ಯಯಿಸಿದ ಹೊರತಾಗಿಯೂ ಮೊದಲೆರಡು ಸೆಟ್ ಗಳಲ್ಲಿ ಅನಿವಾರ್ಯ ಸೋಲು ಕಾಣಬೇಕಾದ ಪರಿಸ್ಥಿತಿಗೆ ಸಿಲುಕಿದ ಬೆರ್ಡಿಚ್, ಮೂರನೇ ಸೆಟ್ ನಲ್ಲಿ ಕೊಂಚ ಹತಾಶರಾಗಿ ಆಡಿದಂತೆ ಕಂಡರು. ಇದರ ನೇರ ಲಾಭ ಪಡೆದ ಫೆಡರರ್, ಮೂರನೇ ಸೆಟ್ ನಲ್ಲಿ ಅನಾಯಾಸ ಜಯ ಕಂಡು, ಫೈನಲ್ ಪ್ರವೇಶಕ್ಕೆ ದಾರಿ ಕಂಡುಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Swiss tennis giant Roger Federer reaches Wimbledon 2017 Men's singles final.
Please Wait while comments are loading...