ಸೆಹ್ವಾಗ್ ಶಾಲೆಗೆ ಭೇಟಿ ನೀಡಿದ ಕ್ಯಾಪ್ಟನ್ ಕೂಲ್ ಧೋನಿ

Posted By:
Subscribe to Oneindia Kannada

ಝಜ್ಜರ್ (ಹರ್ಯಾಣ), ಫೆಬ್ರವರಿ 4: ಭಾರತದ ಖ್ಯಾತ ಕ್ರಿಕೆಟ್ ತಾರೆ ಮಹೇಂದ್ರ ಸಿಂಗ್ ಧೋನಿ ಶುಕ್ರವಾರ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನಡೆಸುತ್ತಿರುವ ಶಾಲೆಗೆ ಭೇಟಿ ನೀಡಿದ್ದರು. ಆ ಫೋಟೋಗಳನ್ನು ಸೆಹ್ವಾಗ್ ಅವರು, ಟ್ವಿಟರ್ ನಲ್ಲಿ ಹಾಕಿದ್ದು ವೈರಲ್ ಆಗಿವೆ.

ಝಜ್ಜರ್ ನಲ್ಲಿ ಸೆಹ್ವಾಗ್ ಅವರು ಸೆಹ್ವಾಗ್ ಇಂಟರ್ ನ್ಯಾಷನಲ್ ಸ್ಕೂಲ್ ಎಂಬ ಪಾಠಶಾಲೆಯನ್ನು ನಡೆಸುತ್ತಿದ್ದಾರೆ. ಈ ಶಾಲೆಗೆ ಭೇಟಿ ನೀಡಿದ್ದ ಧೋನಿ, ಅಲ್ಲಿನ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತರು.

When Dhoni paid visit to Sehwag school

ಸೆಹ್ವಾಗ್ ಜತೆಗೆ ಬೆಂಚ್ ಮೇಲೆ ಕೂತು ಹರಟೆ ಹೊಡೆದರು, ಫೋಟೋಗಳಿಗೆ ಪೋಸು ನೀಡಿದರು. ಶಾಲೆಯ ವಿನ್ಯಾಸ, ಬೋಧನಾ ಗುಣಮಟ್ಟವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಇದೇ ವೇಳೆ, ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಮಕ್ಕಳು ಕ್ರಿಕೆಟ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟರು. ಅಲ್ಲದೆ, ಕೆಲವಾರು ಪ್ರಮುುಖ ಟೂರ್ನಿಗಳಲ್ಲಿ ತಂಡವನ್ನು ಪ್ರಶಸ್ತಿ ಗೆಲ್ಲುವ ಮಟ್ಟಿಗೆ ಮುನ್ನಡೆಸಿಕೊಂಡು ಹೋಗಿದ್ದರ ಹಿಂದಿನ ಶ್ರಮ, ತಂತ್ರಗಾರಿಕೆಯನ್ನು ಹಂಚಿಕೊಂಡರು. ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಗೆ ಸಂಬಂಧಪಟ್ಟಂತೆ ಕೆಲವಾರು ಟಿಪ್ಸ್ ಗಳನ್ನೂ ನೀಡಿದರು.

ಆನಂತರ, ಮಾತನಾಡಿದ ಸೆಹ್ವಾಗ್, ಧೋನಿಯಂಥ ದೊಡ್ಡ ವ್ಯಕ್ತಿಯು ತಮ್ಮ ಶಾಲೆಗೆ ಭೇಟಿ ನೀಡಿದ್ದು ಖುಷಿ ಕೊಟ್ಟಿದೆ. ಹಾಗಾಗಿ, ಧೋನಿಯವರಿಗೆ ನನ್ನ ಅನಂತ ಧನ್ಯವಾದ ಎಂದರು.

ಚಿತ್ರ ಕೃಪೆ: ಟ್ವೀಟರ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dhoni paid his former teammate Virender Sehwag a visit 'Sehwag International School which is run by Sehwag in Jhajjar, Haryana on Friday.
Please Wait while comments are loading...