12 ವರ್ಷಗಳ ನನ್ನ ತಪಸ್ಸಿಗೆ ಈಗ ಫಲ ಸಿಕ್ಕಿದೆ: ಸಾಕ್ಷಿ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 18: ರಿಯೋ ಒಲಿಂಪಿಕ್ಸ್ 2016ರಲ್ಲಿ ಭಾರತದ ಕುಸ್ತಿ ಪಟು ಸಾಕ್ಷಿ ಮಲಿಕ್ ಹೊಸ ಇತಿಹಾಸ ರಚಿಸಿ ಸಂಭ್ರಮದ ವಾತಾವರಣ ಸೃಷ್ಟಿಸಿದ್ದಾರೆ. ಕ್ರೀಡಾಕೂಟದ 13ನೇ ದಿನದಂದು ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಭಾರತಕ್ಕೆ ಕಂಚಿನ ಪದಕ ಗೆದ್ದು ಕೊಟ್ಟಿದ್ದಾರೆ. ಈ ಸಂಭ್ರಮದ ಬಗ್ಗೆ ಸಾಕ್ಷಿ ಹಾಗೂ ಅವರ ಕೋಚ್ ಹೇಳಿದ್ದೇನು ಇಲ್ಲಿದೆ ಓದಿ...

ಆಗಸ್ಟ್ 18ರ ಗುರುವಾರ ಭಾರತೀಯ ಕಾಲಮಾನ ಪ್ರಕಾರ 2.15 AMಗೆ ಸಾಕ್ಷಿಯಿಂದ ಭಾರತದ ಕೋಟ್ಯಂತರ ಅಭಿಮಾನಿಗಳಿಗೆ ಶುಭ ಸುದ್ದಿ ಸಿಕ್ಕಿತು.ರಿಯೋದಲ್ಲಿ ಪದಕ ಸಿಗಲಿಲ್ಲ ಎಂಬ ಕೊರಗು ನೀಗಿತು.[ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ ಮಲಿಕ್ ಯಾರು?]

ಕಂಚಿನ ಪದಕ ಪಡೆದ ಹರ್ಯಾಣದ ರೋಹ್ಟಕ್ ಜಿಲ್ಲೆಯ ಸಾಕ್ಷಿ ಮಲಿಕ್ ಅವರು ತಮ್ಮ ಸಾಧನೆ ಬಗ್ಗೆ ಹೆಮ್ಮೆಯಿಂದ ನಾನು ಪದಕ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ ಎಂದಿದ್ದಾರೆ. [ಭಾರತ ಒಂದು ಪದಕ ಗೆದ್ದುಕೊಂಡಿದೆ, ಹುರ್ರೆ!]

12 ವರ್ಷಗಳ ತಪಸ್ಸು: "Meri 12 saal ki tapasya rang layi (It's the result of my 12 years' fight for day and night) 12 ವರ್ಷಗಳ ತಪಸ್ಸಿನ ಫಲ ಈಗ ಸಿಕ್ಕಿದೆ. ಗೀತಾ(ಫೋಗಟ್) ಅಕ್ಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಲು ಹೆಮ್ಮೆ ಎನಿಸುತ್ತದೆ. ಲಂಡನ್ 2012 ಒಲಿಂಪಿಕ್ಸ್ ನಲ್ಲಿ ಗೀತಾ ಅಕ್ಕ ಮೊದಲ ಬಾರಿಗೆ ಅರ್ಹತೆ ಪಡೆದುಕೊಂಡಿದ್ದು ನನಗೆ ಸ್ಫೂರ್ತಿ ಕೊಟ್ಟಿದು ಎಂದು ಸಾಕ್ಷಿ ಹೇಳಿದರು.

ಪದಕ ಗೆಲ್ಲುತ್ತೇನೆ ಎಂದು ನಿರೀಕ್ಷೆ ಇರಲಿಲ್ಲ

ಪದಕ ಗೆಲ್ಲುತ್ತೇನೆ ಎಂದು ನಿರೀಕ್ಷೆ ಇರಲಿಲ್ಲ

ಒಲಿಂಪಿಕ್ಸ್ ನಲ್ಲಿ ಈ ಮಟ್ಟದ ಗೆಲುವು ಸಾಧಿಸಿ ಪದಕ ಗೆಲ್ಲುತ್ತೇನೆ ಎಂದು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಅದರಲ್ಲೂ ಭಾರತೀಯ ಮಹಿಳಾ ಕುಸ್ತಿಪಟುವಾಗಿ ಪದಕ ಗೆದ್ದಿರುವುದು ಹೆಮ್ಮೆ ತಂದಿದೆ. ಇದು ಇತರೆ ಕುಸ್ತಿಪಟುಗಳಿಗೆ ಸ್ಫೂರ್ತಿ ತುಂಬಲಿ ಎಂದು ಸಾಕ್ಷಿ ಹಾರೈಸಿದ್ದಾರೆ. 58ಕೆಜಿ ವಿಭಾಗದ ಫ್ರೀ ಸ್ತೈಲ್ ಕುಸ್ತಿ : ರಷ್ಯಾದ ವಲೇರಿಯಾ ಕೊಬ್ಲೊವಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದ ಚಿತ್ರ

ಎದುರಾಳಿಯ ಕಾಲು ಹಿಡಿಯಲು ಯತ್ನಿಸುತ್ತಾಳೆ

ಎದುರಾಳಿಯ ಕಾಲು ಹಿಡಿಯಲು ಯತ್ನಿಸುತ್ತಾಳೆ

ಸಾಕ್ಷಿ ಆರಂಭದಲ್ಲೇ ಎದುರಾಳಿಯ ಕಾಲು ಹಿಡಿಯಲು ಯತ್ನಿಸುತ್ತಾಳೆ. ಇದು ಅವರ ತಂತ್ರಗಾರಿಕೆ, ಎದುರಾಳಿ ದಾಳಿ ನಡೆಸುವುದಕ್ಕೂ ಮುನ್ನ ಸಾಕ್ಷಿ ದಾಳಿ ಮಾಡುತ್ತಾಳೆ. ಇನ್ನಷ್ಟು ಉತ್ತಮ ತರಬೇತಿ ಸಿಕ್ಕರೆ ಭಾರತಕ್ಕೆ ಹೆಚ್ಚಿನ ಪದಕ ಗೆಲ್ಲುತ್ತಾಳೆ. ಅವಳು ಗೆದ್ದಿರುವ ಪದಕಗಳೇ ಅವಳ ಸಾಧನೆಗೆ ಸಾಕ್ಷಿ ಎಂದು ಕೋಚ್ ಈಶ್ವರ್ ಪಾಂಡೆ ಪ್ರತಿಕ್ರಿಯಿಸಿದ್ದಾರೆ.

ಕ್ವಾರ್ಟರ್ ಫೈನಲ್ ಪಂದ್ಯದ ದೃಶ್ಯ

ಕ್ವಾರ್ಟರ್ ಫೈನಲ್ ಪಂದ್ಯದ ದೃಶ್ಯ

ಒಲಿಂಪಿಕ್ಸ್ 58ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದ ದೃಶ್ಯ, ರಷ್ಯಾದ ವಲೇರಿಯಾ ವಿರುದ್ಧ ಸಾಕ್ಷಿ ಸೆಣಸು. ಪಿಟಿಐ ಚಿತ್ರ

ಕಂಚಿನ ಪದಕ ಪಂದ್ಯಕ್ಕೂ ಮುನ್ನ

ಕಂಚಿನ ಪದಕ ಪಂದ್ಯಕ್ಕೂ ಮುನ್ನ

ಕಂಚಿನ ಪದಕ ಪಂದ್ಯಕ್ಕೂ ಮುನ್ನ ರೆಪೆಚೇಜ್ ರೌಂಡ್ ನಲ್ಲಿ ನೀಲಿ ದಿರಿಸಿನಲ್ಲಿರುವ ಸಾಕ್ಷಿ ಅವರು ಮಂಗೋಲಿಯಾದ ಓರ್ ಖೊನ್ ಪುರೆವ್ ದೊರ್ಗ್ ವಿರುದ್ಧ 12-3ರಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್ ಹಂತ ಪ್ರವೇಶಿಸಿದರು. ಪಿಟಿಐ ಚಿತ್ರ

ಕ್ವಾರ್ಟರ್ ಫೈನಲ್ ನಲ್ಲಿ ರಷ್ಯಾ ಕುಸ್ತಿಪಟುವಿಗೆ ಗೆಲುವು

ಕ್ವಾರ್ಟರ್ ಫೈನಲ್ ನಲ್ಲಿ ರಷ್ಯಾ ಕುಸ್ತಿಪಟುವಿಗೆ ಗೆಲುವು

58 ಕೆಜಿ ವಿಭಾಗದ ಫ್ರೀ ಸ್ಟೈಲ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಷ್ಯಾ ಕುಸ್ತಿಪಟು ವಲೇರಿಯಾ ಕೊಬ್ಲೊವಾಗೆ ಗೆಲುವು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Rio Olympics 2016 : "Meri 12 saal ki tapasya rang layi (It's the result of my 12 years' fight for day and night). Geeta (Phogat) didi, my senior had qualified for the first time in London (2012).
Please Wait while comments are loading...