ತಲೆ ಎತ್ತಲಿವೆ ನಾಲ್ಕು ಕ್ರೀಡಾ ಅಕಾಡೆಮಿಗಳು: ಕ್ರೀಡೆಗೆ ಸಿಎಂ ನೀಡಿದ್ದೇನು?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 15: ರಾಜ್ಯದ ನಾಲ್ಕು ಜಿಲ್ಲೆಗಳಿಗೆ ಈ ಬಾರಿಯ ಬಜೆಟ್ ನಲ್ಲಿ ಕ್ರೀಡಾ ಅಕಾಡೆಮಿಗಳನ್ನು ಮುಖ್ಯಮಂತ್ರಿಯವರು ತಮ್ಮ ಈ ಬಜೆಟ್ ನಲ್ಲಿ ನೀಡಿದ್ದಾರೆ.

ಅದರಂತೆ, ಬೆಂಗಳೂರಿನ ವಿದ್ಯಾ ನಗರದಲ್ಲಿ ಬಾಸ್ಕೆಟ್ ಬಾಲ್ ಅಕಾಡೆಮಿ, ಉಡುಪಿಯಯಲ್ಲಿ ಈಜು ಅಕಾಡೆಮಿ, ಮೈಸೂರಿನಲ್ಲಿ ಟೆನಿಸ್ ಹಾಗೂ ಚಿತ್ರದುರ್ಗದಲ್ಲಿ ಆರೋಹಣ (ಕ್ಲೈಂಬಿಂಗ್) ಅಕಾಡೆಮಿಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.[ಬೈಂದೂರು ತಾಲೂಕು ಘೋಷಣೆ, ಸಿಹಿ ಹಂಚಿ ಸಂಭ್ರಮಾಚರಣೆ]

ಈ ಪ್ರತಿಯೊಂದು ಅಕಾಡೆಮಿಗೂ ತಲಾ 1 ಕೋಟಿ ರು. ನಿಗದಿಗೊಳಿಸಲಾಗಿದೆ.

ಇವುಗಳ ಜತೆಯಲ್ಲೇ ಬ್ಯಾಡ್ಮಿಂಟನ್ ಅಕಾಡೆಮಿ ಹಾಗೂ ಗಾಲ್ಫ್ ಅಕಾಡೆಮಿಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಇವುಗಳನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲೂ ನಿರ್ಮಿಸಲು ನಿರ್ಧರಿಸಲಾಗಿದೆ.[ಸಾಲ ಮನ್ನಾ ಇಲ್ಲ, ನೀರಾಕ್ಕೆ ಲೈಸನ್ಸ್, ಕೃಷಿಗೆ ಸಿದ್ದು ನೀಡಿದ್ದೇನು?]

What CM Siddaramaiah gave to development of Sports in his budget of 2017

ಇನ್ನು, ಸಾರ್ವಜನಿಕ ಸಹಭಾಗಿತ್ವದಡಿ ಮೈಸೂರಿನ ವರುಣಾ ಕೆರೆಯಲ್ಲಿ ಜಲಕ್ರೀಡಾ ಕೇಂದ್ರದ ಅಭಿವೃದ್ಧಿಗಾಗಿ 5 ಕೋಟಿ ರು.ಗಳನ್ನು ಮೀಸಲಿಡಲಾಗಿದೆ.[ಬರಗಾಲದಲ್ಲೂ ನೀರಸ ಬಜೆಟ್ : ಎಚ್ ಡಿ ಕುಮಾರಸ್ವಾಮಿ]

ಇನ್ನುಳಿದಂತೆ, ಮಹಿಳಾ ಅಥ್ಲೀಟ್ ಗಳಿಗಾಗಿ ಪ್ರತಿ ತರಬೇತಿ ಕೇಂದ್ರಗಳಲ್ಲಿ ಸುಸಜ್ಜಿತ ವಿದ್ಯಾರ್ಥಿ ನಿಲಯಗಳ ಸೌಲಭ್ಯ (ತಲಾ ಒಂದು ಕೋಟಿ ರು. ವೆಚ್ಛದಲ್ಲಿ), ಬೆಳಗಾವಿ ಮತ್ತು ಮೈಸೂರಿನಲ್ಲಿ ಆಧುನಿಕ ಜಿಮ್ನಾಸ್ಟಿಕ್ಸ್ ಸೌಲಭ್ಯ (ಒಟ್ಟು 4 ಕೋಟಿ ರು.) ನೀಡಲಾಗಿದೆ.[ಕರ್ನಾಟಕ ಬಜೆಟ್: ಯಾವ ಯಾವ ಜಿಲ್ಲೆಗೆ ಏನೇನು ಸಿಕ್ತು?]

ಇದರ ಜತೆಯಲ್ಲೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿನ ಕ್ರೀಡಾ ತರಬೇತಿ ಕೇಂದ್ರಗಳಿಗೆ ವ್ಯಾಯಾಮ ಶಾಲೆಯನ್ನು ಮಂಜೂರು ಮಾಡಲಾಗಿದೆ.

ವಿಕಲ ಚೇತನ ಕ್ರೀಡಾಪಟುಗಳಿಗೆ ಕ್ರೀಡಾ ಕಿಟ್ ವಿತರಣೆ (2 ಕೋಟಿ ರು. ಯೋಜನೆ), ವಿಕಲ ಚೇತನ ಸ್ನೇಹಿ ಕ್ರೀಡಾ ಸೌಕರ್ಯಗಳನ್ನು ನೀಡಲು 2 ಕೋಟಿ ರು. ಮೀಸಲಿಡಲಾಗಿದೆ.[ಬಜೆಟ್ 2017:ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಸಿದ್ದರಾಮಯ್ಯ]

ಇನ್ನು, ಒಲಿಂಪಿಕ್ಸ್ ನಲ್ಲಿ ಸ್ವರ್ಣ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ 5 ಕೋಟಿ ರು., ರಜತ ಪದಕ ಗೆಲ್ಲುವವರಿಗೆ 3 ಕೋಟಿ ರು. ಹಾಗೂ ಕಂಚಿನ ಪದಕ ವಿಜೇತರಿಗೆ 2 ಕೋಟಿ ರು. ಬಹುಮಾನ ನೀಡಲು ಉದ್ದೇಶಿಸಲಾಗಿದೆ.

ಅಲ್ಲದೆ ಒಲಿಂಪಿಕ್ಸ್ ಪದಕ ವಿಜೇತರಿಗೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ 'ಎ' ಗುಂಪಿನ ಹುದ್ದೆ ಹಾಗೂ ಏಷ್ಯನ್ ಮತ್ತು ಕಾಮನ್ ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರಿಗೆ 'ಗ್ರೂಪ್ ಬಿ' ಹುದ್ದೆಗಳನ್ನು ನೀಡಲು ಶಿಫಾರಸು ಮಾಡಲಾಗಿದೆ.[ಬಜೆಟ್ 2017: ಅಲ್ಪಸಂಖ್ಯಾತ, ಹಿಂದುಳಿದವರಿಗೆ ಭರ್ಜರಿ ಕೊಡುಗೆ]

ಪ್ರತಿ ವರ್ಷ 10 ಕ್ರೀಡಾ ಪ್ರವರ್ತಕರನ್ನು ಗುರುತಿಸಿ, ಗೌರವಿಸಲು ಪ್ರಸಕ್ತ ವರ್ಷದಿಂದ ತಲಾ 5 ಲಕ್ಷ ರು.ಗಳ 'ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ' ಸ್ಥಾಪಿಸಲು ನಿರ್ಧರಿಸಲಾಗಿದೆ.

ಎಲ್ಲಾ ತಾಲೂಕು ಕ್ರೀಡಾಂಗಣಗಳ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಲು 20 ಕೋಟಿ ರು. ಅನುದಾನ ನೀಡಲಾಗಿದ್ದು, ಯುವ ಚೈತನ್ಯ ಯೋಜನೆಯಡಿ ಗ್ರಾಮೀಣ ಯುವಜನತೆಗೆ ಕ್ರೀಡಾ ಸಾಮಗ್ರಿ ವಿತರಣೆ, ಫಿಟ್ನೆಸ್ ಸಲಕರಣೆ ವಿತರಣೆ, ಯೂತ್ ಕ್ಲಬ್ ಗಳ ಆರ್ಥಿಕ ಕಾರ್ಯಚಟುವಟಿಕೆಗಳಿಗೆ ಆವರ್ತ ನಿಧಿ ಒದಗಿಸಲು 5 ಕೋಟಿ ರು. ಅನುದಾನ ನಿಗದಿಪಡಿಸಲಾಗಿದೆ.[43 ಹೊಸ ತಾಲೂಕುಗಳು, ಅವುಗಳ ಹೆಸರುಗಳು]

ಕ್ರೀಡಾ ಪಟುಗಳ ಸ್ವವಿವರಗಳುಳ್ಳ ಕ್ರೀಡಾ ಕೋಶವನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 1 ಕೋಟಿ ರು. ಮೀಸಲಿಡಲಾಗಿದೆ.

ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಮಾಜಿ ಕುಸ್ತಿ ಪಟುಗಳಿಗೆ ನೀಡುತ್ತಿರುವ ಮಾಸಾಶನವನ್ನು 2500 ರು., 3000 ಸಾವಿರ ರು. ಹಗೂ 4000 ರು.ಗಳಿಗೆ ಹೆಚ್ಚಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sports sector has not been neglected in Karnataka Budget of 2017-18. Chief Minister Siddaramaiah has given importance to this sector and he mulls to establish four sports academies for Tennis, Swimming, Basket Ball in the state.
Please Wait while comments are loading...