ವಿಶ್ವಕಪ್ ನಂತರ ನಿವೃತ್ತಿಯಾಗುವೆ ಎಂದ ಸ್ಟಾರ್ ಆಟಗಾರ

Posted By:
Subscribe to Oneindia Kannada

ಲಂಡನ್, ಆಗಸ್ಟ್ 30 : ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಇಂಗ್ಲೆಂಡ್ ನಾಯಕ ವೇಯ್ನ್ ರೂನಿ ಅವರು ತಮ್ಮ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. 2018ರ ಫೀಫಾ ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಗುಡ್ ಬೈ ಹೇಳುವುದಾಗಿ ಘೋಷಿಸಿದ್ದಾರೆ.

31 ವರ್ಷ ವಯಸ್ಸಿನ ರೂನಿ ಅವರು 115 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 2003 ರಿಂದ ಇಂಗ್ಲೆಂಡ್ ಪರ ಆಡುತ್ತಿದ್ದಾರೆ.ಇಲ್ಲಿ ತನಕ 53 ಗೋಲು ಗಳಿಸಿದ್ದಾರೆ. 2014 ರಲ್ಲಿ ಸ್ಟೀವನ್ ಜಿರಾಡ್ ಅವರು ನಿವೃತ್ತಿ ಹೊಂದಿದ ಬಳಿಕ, ಇಂಗ್ಲೆಂಡ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಾ ಬಂದಿದ್ದಾರೆ. [ಕ್ಲಬಿನಿಂದ ಕ್ಲಬಿಗೆ ಜಿಗಿಯಲು 813 ಕೋಟಿ ರು!]

Wayne Rooney to retire from international football after 2018 World Cup

'ರಷ್ಯಾದಲ್ಲಿ ನಾನು ನನ್ನ ಕೊನೆ ಪಂದ್ಯಗಳನ್ನು ಆಡಲು ಬಯಸಿದ್ದೇನೆ. ಆಂತಾರಾಷ್ಟ್ರೀಯ ಫುಟ್ಬಾಲ್ ಗೆ ಗುಡ್ ಬೈ ಹೇಳುವ ಸಮಯ ಬಂದಿದೆ' ಎಂದಿದ್ದಾರೆ. [ಕೆಂಪು ಜರ್ಸಿ ತೊಟ್ಟ ಬಹುಬೇಡಿಕೆಯ ಕೋಚ್]

'17 ವರ್ಷದವನಾಗಿದ್ದಾಗಿನಿಂದಲೂ ವೃತ್ತಿಪರ ಫುಟ್ಬಾಲರ್ ಆಗಿ ಆಡುತ್ತಿದ್ದೇನೆ. 32ನೇ ವಯಸ್ಸಿಗೆ 15 ವರ್ಷ ಅನುಭವದೊಂದಿಗೆ ತನ್ನ ವೃತ್ತಿ ಬದುಕು ಮುಕ್ತಾಯಗೊಳಿಸುತ್ತೇನೆ' ಎಂದಿದ್ದಾರೆ.

ಇಂಗ್ಲೀಷ್ ಪ್ರಿಮಿಯರ್ ಲೀಗ್ ನ ಪ್ರಮುಖ ತಂಡ ಮ್ಯಾಂಚೆಸ್ಟರ್ ಯುನೈಟೆಡ್ ನ ಸೆಂಟ್ರಲ್ ಮಿಡ್ ಫೀಲ್ದರ್ ಆಗಿ ಆಡುತ್ತಾ ಬಂದಿರುವ ರೂನಿ ಅನೇಕ ಬಾರಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿ, ಮ್ಯಾನೇಜರ್ ಗಳಿಗೆ ಕಿರಿಕಿರಿ ಉಂಟು ಮಾಡಿದ್ದು ಸುಳ್ಳಲ್ಲ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Manchester United and England captain Wayne Rooney has revealed that he will retire from international football after the 2018 FIFA World Cup.
Please Wait while comments are loading...