ಎಫ್ 1 ಭೀಕರ ಅಪಘಾತ: ಅದೃಷ್ಟವಶಾತ್ ಅಲಾನ್ಸೋ ಬಚಾವ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 20: ಸ್ಪೇನಿನ ಫಾರ್ಮುಲಾ ಒನ್ ಕಾರು ಚಾಲಕ ಫರ್ನಾಂಡೋ ಅಲಾನ್ಸೋ ಅವರು ಸಾವಿನ ಮನೆ ಕದ ತಟ್ಟಿ ಬಂದಿದ್ದಾರೆ. ಭಾನುವಾರದಂದು ಆಸ್ಟ್ರೇಲಿಯನ್ ಗ್ರ್ಯಾನ್ ಪ್ರೀ ಎಫ್ 1 ರೇಸಿನಲ್ಲಿ ದುರಂತದಿಂದ ಪಾರಾಗಿದ್ದಾರೆ. ರೇಸ್ ವೇಳೆಯಲ್ಲಿ ಅಲಾನ್ಸೋ ಅವರ ಕಾರು ಭೀಕರ ಅಪಘಾತಕ್ಕೀಡಾಯಿತು, ಆಶ್ಚರ್ಯಕರ ರೀತಿಯಲ್ಲಿ ಅಲಾನ್ಸೋ ಜೀವಂತವಾಗಿ ಹೊರ ಬಂದಿದ್ದಾರೆ.[ರುಹಾನ್ ಆಳ್ವಾ ಭವಿಷ್ಯದ ಎಫ್ 1 ಚಾಲಕ]

ಎಫ್ 1 ರೇಸಿನ ದಂತಕತೆ ಬ್ರೆಜಿಲ್ಲಿನ ಚಾಲಕ ಆಯರ್ಟನ್ ಸೆನ್ನಾ ಡಾ ಸಿಲ್ವಾ ಅವರು 1994ರಲ್ಲಿ ಸ್ಯಾನ್ ಮರಿನೋ ಗ್ರಾ ಪ್ರೀನಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಮೈಕಲ್ ಹಾಗೂ ರಾಫ್ ಶೂಮಾಕರ್ ಇಬ್ಬರು ಭಯಾನಕ ಅಪಘಾತಗಳನ್ನು ಎದುರಿಸಿದ್ದನ್ನು ಅಭಿಮಾನಿಗಳು ಮರೆಯುವುದಿಲ್ಲ.

ಅಲಾನ್ಸೋ ಅದೃಷ್ಟವಂತ: ಆಸ್ಟ್ರೇಲಿಯನ್ ಗ್ರಾನ್ ಪ್ರೀಯ 19ನೇ ಸುತ್ತಿನಲ್ಲಿ ಮೆಕ್ಸಿಕನ್ ಚಾಲಕ ಎಸ್ಟೆಬಾನ್ ಗುಟೆರೆಜ್ ಜೊತೆ ಗುದ್ದಿದ ಅಲಾನ್ಸೋ ಅವರಿದ್ದ ಕಾರು ತನ್ನ ಚಕ್ರ ಕಳೆದುಕೊಂಡು ಗಾಳಿಯಲ್ಲಿ ತೇಲಿಕೊಂಡು ಟ್ರ್ಯಾಕ್ ಬಿಟ್ಟು ಸುರಕ್ಷತಾ ಗೋಡೆಗೆ ಬಡಿಯಿತು.[ಸಾವನ್ನು ಗೆದ್ದ ಎಫ್ 1 ವೀರ ಮೈಕಲ್ ಶೂಮಾಕರ್]

'ಈ ರೇಸನ್ನು ನನ್ನ ತಾಯಿ ವೀಕ್ಷಿಸುತ್ತಿರುತ್ತಾರೆ. ನಾನು ಸುರಕ್ಷಿತನಾಗಿದ್ದೇನೆ ಎಂಬ ಸುದ್ದಿಯನ್ನು ಆಕೆಗೆ ತಿಳಿಸಿ' ಎಂದು ಘಟನೆ ನಂತರ ಚೇತರಿಸಿಕೊಂಡ ಅಲಾನ್ಸೋ ಮೊದಲಿಗೆ ಪ್ರತಿಕ್ರಿಯಿಸಿದರು. ವಿಶ್ವದೆಲ್ಲೆಡೆಯಿಂದ ಈ ಭೀಕರ ಅಪಘಾತ ದೃಶ್ಯಕ್ಕೆ ಪ್ರತಿಕ್ರಿಯೆ ಗಳು ಹರಿದು ಬರುತ್ತಿದೆ.

ಮೆಕ್ಲೇರನ್ ಹೋಂಡಾದ ಚಾಲಕ ಅಲಾನ್ಸೋ

ಮೆಕ್ಲೇರನ್ ಹೋಂಡಾದ ಚಾಲಕ ಅಲಾನ್ಸೋ

34ವರ್ಷ ವಯಸ್ಸಿನ ಸ್ಪೇನ್ ಮೂಲದ ಮೆಕ್ಲೇರನ್ ಹೋಂಡಾದ ಚಾಲಕ ಅಲಾನ್ಸೋ ಎರಡು ಬಾರಿ ಎಫ್ 1 ಚಾಂಪಿಯನ್ ಆಗಿದ್ದಾರೆ. 2001ರಿಂದ ಈ ರೇಸಿನಲ್ಲಿದ್ದಾರೆ.

ಆಸ್ಟ್ರೇಲಿಯನ್ ಜಿಪಿಯಲ್ಲಿನ ಅಪಘಾತದ ವಿಡಿಯೋ

ಆಸ್ಟ್ರೇಲಿಯನ್ ಜಿಪಿಯಲ್ಲಿನ ಅಪಘಾತದ ವಿಡಿಯೋ ನೋಡಿ

ಎಫ್ 1 ಕ್ರೀಡಾಭಿಮಾನಿಗಳನ್ನು ಬೆಚ್ಚಿ ಬೀಳಿಸಿದ ದೃಶ್ಯ

ಎಫ್ 1 ಕ್ರೀಡಾಭಿಮಾನಿಗಳನ್ನು ಬೆಚ್ಚಿ ಬೀಳಿಸಿ, ಅತಂಕ ತಂದ ದೃಶ್ಯಗಳು

ನಾನು ಕಾರಿನಿಂದ ಮೊದಲು ಹೊರ ಬರಲು ಯತ್ನಿಸಿದೆ

'ನಾನು ಕಾರಿನಿಂದ ಮೊದಲು ಹೊರ ಬರಲು ಯತ್ನಿಸಿದೆ, ನನ್ನ ತಾಯಿ ಈ ರೇಸ್ ನೋಡುತ್ತಿರುತ್ತಾರೆ ಎಂಬುದು ನನ್ನ ಮನದಲ್ಲಿ ಓಡುತ್ತಿತ್ತು' ಎಂದು ಅಲಾನ್ಸೋ ಹೇಳಿದ್ದಾರೆ.

ಎಪಿ ಪತ್ರಕರ್ತ ನೇರ ವರದಿ ಟ್ವೀಟ್

ಅಸೋಸಿಯೇಟೆಡ್ ಪ್ರೆಸ್ ನ ಪ್ರರ್ತಕರ್ತ ಅಪಘಾತದ ಬಗ್ಗೆ ನೇರವರದಿ ಮಾಡಿದ ಅನುಭವ.

ಅಲಾನ್ಸೋ ಬಚಾವಾಗಿದ್ದು ಹೇಗೆ?

ಅಲಾನ್ಸೋ ಬಚಾವಾಗಿದ್ದು ಹೇಗೆ? ಅಬ್ಬಾ ಮೈನವಿರೇಳಿಸುವ ದೃಶ್ಯ

ಆಸ್ಟ್ರೇಲಿಯನ್ ಜಿಪಿ ಅಪಘಾತದ ಚಿತ್ರಗಳು

ಭಾನುವಾರದ ಆಸ್ಟ್ರೇಲಿಯನ್ ಗ್ರ್ಯಾನ್ ಪ್ರೀಯ ಅಪಘಾತದ ಚಿತ್ರಗಳು

ಅಲಾನ್ಸೋ ಲಕ್ಕಿ ಬಾಯ್

ಅಲಾನ್ಸೋ ಲಕ್ಕಿ ಬಾಯ್ ಎಂದು ಎಫ್ 1 ಅಭಿಮಾನಿಗಳಿಂದ ಟ್ವೀಟ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Watch : Spanish F1 racer Fernando Alonso Alonso survived a horror crash today in Australian F1 GP. The race was red flagged at the 19th lap due to the collision between Mexican Esteban Gutierrez and Alonso.
Please Wait while comments are loading...