ಕ್ಷಮಿಸಿ, ಮುಂದಿನ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವೆ: ದೀಪಾ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 15: ಭಾರತದ ಹೆಮ್ಮೆಯ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಅವರು ಫೈನಲ್ ನಂತರ ಅಭಿಮಾನಿಗಳು ಹಾಗೂ ದೇಶದ ಜನತೆಗೆ ಸ್ವಾತಂತ್ರ್ಯೋತ್ಸವ ಶುಭ ಹಾರೈಸಿದ್ದಾರೆ. ರಿಯೋದಲ್ಲಿ ಪದಕ ಗೆಲ್ಲಲಾಗಲಿಲ್ಲ, ಕ್ಷಮಿಸಿ, 2020ರಲ್ಲಿ ಜಪಾನ್ ನಲ್ಲಿ ಪದಕ ಗೆಲ್ಲುವೆ ಎಂದು ದೀಪಾ ಫೇಸ್ ಬುಕ್ ಮೂಲಕ ಹೇಳಿಕೊಂಡಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಕೋಟ್ಯಂತರ ಜನರ ನಿರೀಕ್ಷೆಗೆ ತಕ್ಕಂತೆ ದೀಪಾ ಅವರು ಪ್ರೂಡೊನೋವಾ ವಾಲ್ಟ್ ಸ್ಪರ್ಧೆಯಲ್ಲಿ ತಮ್ಮ ಜೀವ ಪಣಕ್ಕಿಟ್ಟು ಪ್ರದರ್ಶನ ನೀಡಿ ಎಲ್ಲರ ಮನಗೆದಿದ್ದಾರೆ. ಪದಕ ಸ್ವಲ್ಪದರಲ್ಲೇ ಕೈತಪ್ಪಿ ಹೋಗಿದೆ. ಕಂಚಿನ ಪದಕ ಗೆಲ್ಲುವ ಸನಿಹಕ್ಕೆ ಬಂದು ಮಿಸ್ ಮಾಡಿಕೊಂಡ ದೀಪಾ ಅವರು ತಮ್ಮ ಮುಂದಿನ ಗುರಿ ಚಿನ್ನದ ಪದಕ ಎಂದಿದ್ದಾರೆ.[ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲದಿದ್ದರೂ, ಭಾರತ ಗೆದ್ದ ದೀಪಾ!]

ನಾನು ರಿಯೋ ಒಲಿಂಪಿಕ್​ಗೆ ಯಾವುದೇ ನಿರೀಕ್ಷೆ ಹೊತ್ತು ತೆರಳಿರಲಿಲ್ಲ. ಬಾಕ್ಸಿಂಗ್, ಕುಸ್ತಿಯಲ್ಲಿ ಕಂಚಿನ ಪದಕ ನಿರೀಕ್ಷಿಸಬಹುದು. ಆದರೆ, ಜಿಮ್ನಾಸ್ಟಿಕ್ಸ್ ನಲ್ಲಿ ನಾಲ್ಕನೇ ಸ್ಥಾನಕ್ಕೆ ಬಂದೆ. ಪದಕ ಸ್ವಲ್ಪದರಲ್ಲೇ ಮಿಸ್ ಆಯಿತು. ಮುಂದಿನ ನನ್ನ ಗುರಿ ಟೋಕಿಯೋ ಒಲಿಂಪಿಕ್ಸ್ ಎಂದು ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಗೆ ಎಂಟ್ರಿ

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಗೆ ಎಂಟ್ರಿ

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಗೆ ಆಯ್ಕೆಯಾಗಿ, ಫೈನಲ್ ತಲುಪಿದ ಸಾಧನೆ ಮಾಡಿದ ಮೊಟ್ಟ ಮೊದಲ ಭಾರತದ ಜಿಮ್ನಾಸ್ಟಿಕ್ ದೀಪಾ. 23 ವರ್ಷ ವಯಸ್ಸಿನ ತ್ರಿಪುರಾ ಮೂಲದ ದೀಪಾ ಅವರು ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಎಂಟು ಸ್ಪರ್ಧಿಗಳ ಪೈಕಿ ನಾಲ್ಕನೇ ಸ್ಥಾನ ಪಡೆದರು.

ಸರಾಸರಿ 15.066 ಅಂಕಗಳಿಸಿದರು

ಸರಾಸರಿ 15.066 ಅಂಕಗಳಿಸಿದರು

ಯುಎಸ್ಎ ನ ದಾಖಲೆಗಾರ್ತಿ ಸಿಮೊನ್ ಬೈಲ್ಸ್ (15.966 ) ಮತ್ತೊಮ್ಮೆ ಚಿನ್ನ ಗೆದ್ದರು. ರಷ್ಯಾದ ಪಸೇಕಾ ಎರಡನೇ ಸ್ಥಾನ ಗಳಿಸಿದರು. ದೀಪಾ ಅರ್ಹತಾ ಸುತ್ತಿನಲ್ಲಿ 14.850 ಅಂಕ ಗಳಿಸಿದ್ದರು. ಆದರೆ, ಫೈನಲ್ ನಲ್ಲಿ ಉತ್ತಮ ಸರಾಸರಿ ಹೊಂದಿದ್ದರೂ ಲ್ಯಾಂಡಿಂಗ್ ನಲ್ಲಿ ಸ್ವಲ್ಪ ತಪ್ಪಿದ್ದರಿಂದ ದೀಪಾ ಅವರ ಅಂಕಗಳು ಕಡಿತಗೊಂಡಿತು. ಎರಡು ಪ್ರಯತ್ನಗಳಲ್ಲಿ ಸರಾಸರಿ 15.066 ಅಂಕಗಳಿಸಿದರು

ಇಡೀ ವಿಶ್ವದ ಗಮನ ಸೆಳೆದ ದೀಪಾ

ಇಡೀ ವಿಶ್ವದ ಗಮನ ಸೆಳೆದ ದೀಪಾ

1952 ರಿಂದ ಇಲ್ಲಿ ತನಕ 11 ಜನ ಭಾರತೀಯ ಪುರುಷ ಸ್ಪರ್ಧಿಗಳು ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರೆ, ಮೊಟ್ಟ ಮೊದಲ ಬಾರಿಗೆ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ದೀಪಾ ಅವರು ಮೊದಲ ಪ್ರಯತ್ನದಲ್ಲೇ ಫೈನಲ್ ಗೇರಿ ನಾಲ್ಕನೇ ಸ್ಥಾನ ಗಳಿಸಿ, ಇಡೀ ವಿಶ್ವದ ಗಮನ ಸೆಳೆದರು.

ದೀಪಾ ಬಗ್ಗೆ ಮಾತನಾಡಿದ ಚಿನ್ನದ ಪದಕ ವಿಜೇತೆ

ದೀಪಾ ಬಗ್ಗೆ ಮಾತನಾಡಿದ ಚಿನ್ನದ ಪದಕ ವಿಜೇತೆ

ಇಡೀ ವಿಶ್ವದ ಗಮನ ಸೆಳೆದ ದೀಪಾ ರು ದೀಪಾ ಬಗ್ಗೆ ಮಾತನಾಡಿದ ಚಿನ್ನದ ಪದಕ ವಿಜೇತೆ ಯುಎಸ್ಎ ನ ದಾಖಲೆಗಾರ್ತಿ ಸಿಮೊನ್ ಬೈಲ್ಸ್ (15.966) ದೀಪಾ ಮಾಡಿದ ಪ್ರಯತ್ನ ನಾನು ಅತ್ಯಂತ ರಿಸ್ಕ್ ನಿಂದ ಕೂಡಿದ್ದು, ಉತ್ತಮ ಪ್ರದರ್ಶನ ನೀಡಿದ್ದಾರೆ.

ಉತ್ತಮ ಅಂಕ ಗಳಿಸುವುದು ನನ್ನ ಗುರಿಯಾಗಿತ್ತು

ಉತ್ತಮ ಅಂಕ ಗಳಿಸುವುದು ನನ್ನ ಗುರಿಯಾಗಿತ್ತು

ಉತ್ತಮ ಅಂಕ ಗಳಿಸುವುದು ನನ್ನ ಗುರಿಯಾಗಿತ್ತು. ಈ ಮುಂಚೆ ಪ್ರುಡೊನೊವಾದಲ್ಲಿ 15.1 ಅಂಕ ಗಳಿಸಿದ್ದೆ ನಾನು ನನ್ನ ವಾಲ್ಟ್ ಬಗ್ಗೆ ಖುಷಿಯಿಂದ ಇದ್ದೇನೆ. ಅದೃಷ್ಟ ಕೈಕೊಟ್ಟಿತು. ನಾನು ಕಲಿತ ವಿದ್ಯೆಯನ್ನು ಸರಿಯಾಗಿ ಅಳವಡಿಸಿದ್ದೇನೆ. ನನಗೆ ಸಹಕಾರ ನೀಡಿದ ಕೋಚ್, ದೇಶದ ಜನತೆಗೆ ನಾನು ಆಭಾರಿ ಎಂದು ಅಗರ್ತಲಾದ ಜಿಮ್ನಾಸ್ಟ್ ದೀಪಾ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Trailblazing Indian gymnast Dipa Karmakar last night (Augsut 14) said that she's not disappointed at missing out on a historic bronze in the vault final of the Rio Olympics here and that she's satisfied of her performance.
Please Wait while comments are loading...