ಮತ್ತೆ ಬಾಲ ಬಿಚ್ಚಿದ ಮಾರ್ಗನ್, ಸರಿಯಾಗಿ ಕೊಟ್ಟ ಸೆಹ್ವಾಗ್

By: ಕ್ರೀಡಾ ಡೆಸ್ಕ್
Subscribe to Oneindia Kannada

ಬೆಂಗಳೂರು, ಆಗಸ್ಟ್ 31: ಮಾಜಿ ಕ್ರಿಕೆಟರ್ ವಿರೇಂದ್ರ ಸೆಹ್ವಾಗ್ ನೀಡಿದ್ದ ಟ್ವೀಟ್ ಪ್ರತಿಕ್ರಿಯೆಗೆ ಬೆವರಿದ್ದ ಬ್ರಿಟಿಷ್ ನ ಹಿರಿಯ ಪತ್ರಕರ್ತ ಮತ್ತೆ ಬಾಲ ಬಿಚ್ಚಿದ್ದಾರೆ. ಇಂಗ್ಲೆಂಡ್ ಪಾಕಿಸ್ತಾನದ ವಿರುದ್ಧ 444 ರನ್ ಗಳನ್ನು ಗಳಿಸಿದ ಬೆನ್ನಲ್ಲೇ ವೀರೇಂದ್ರ ಸೆಹ್ವಾಗ್ ರನ್ನು ಕೆಣಕಿದ್ದಾರೆ. ಆದರೆ, ಈ ಬಾರಿಯೂ ಸೆಹ್ವಾಗ್ ಸರಿಯಾಗಿ ಉತ್ತರ ಕೊಟ್ಟಿದ್ದಾರೆ.

ಟ್ವಿಟ್ಟರ್ ನಲ್ಲಿ ಸೆಹ್ವಾಗ್ ಗೆ ಸವಾಲು ಎಸೆದಿರುವ ಪಿಯರ್ಸ್ ಮಾರ್ಗನ್, ಭಾರತ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವುದಕ್ಕೂ ಮುನ್ನ ಇಂಗ್ಲೆಂಡ್ ಏಕದಿನ ಪಂದ್ಯದಲ್ಲಿ ವಿಶ್ವಕಪ್ ಗೆಲ್ಲಲಿದೆ. ಇದಕ್ಕೆ 1 ಮಿಲಿಯನ್ (10 ಲಕ್ಷ) ಬೆಟ್ಟಿಂಗ್ ಇರಲಿ ಎಂದು ವೀರೂ ಅವರಿಗೆ ಸವಾಲು ಹಾಕಿ ಮತ್ತೆ ಉದ್ದಟತನ ಮೆರೆದಿದ್ದಾರೆ. [ಯೋಗೇಶ್ವರ್ ಗೆ ಬೆಳ್ಳಿ, ಸೆಹ್ವಾಗ್ ಅಪ್ಗ್ರೇಡ್ ಟ್ವೀಟ್ ವಾಹ್!]

Virender Sehwag vs Piers Morgan

ರಿಯೋ ಒಲಂಪಿಕ್ಸ್ ನಲ್ಲಿ ಭಾರತದ ಪ್ರದರ್ಶನದ ಬಗ್ಗೆ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದ ಮಾರ್ಗನ್, ಸಿಕ್ಕಿರುವ ಎರಡು ಪದಕಗಳ ಸಂಭ್ರಮಾಚರಣೆ ಬಗ್ಗೆ ವ್ಯಂಗ್ಯವಾಡಿದ್ದರು.[ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಧೂಳಿಪಟ ಮಾಡಿದ ರೆಕಾರ್ಡ್ಸ್]

ಇದಕ್ಕೆ ಪ್ರತಿಯಾಗಿ ವೀರೇಂದ್ರ ಸೆಹ್ವಾಗ್, ವಿಶ್ವಕ್ಕೆ ಕ್ರಿಕೆಟ್ ನ್ನು ಪರಿಚಯಿಸಿದ ಇಂಗ್ಲೆಂಡ್ ಗೆ ಒಂದೇ ಒಂದು ವಿಶ್ವಕಪ್ ನ್ನು ಗೆಲ್ಲಲು ಸಾಧ್ಯವಾಗಿಲ್ಲ ಎಂದು ಬ್ರಿಟನ್ ಪತ್ರಕರ್ತನಿಗೆ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಕೊಟ್ಟ ಪ್ರತಿಕ್ರಿಯೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿತ್ತು.


ಭಾರತದ ಪಾಲಿಗೆ ಈಗಾಗಲೇ 9 ಚಿನ್ನದ ಪದಕ ಸಿಕ್ಕಿದೆ, ಇಂಗ್ಲೆಂಡ್ ಬಳಿ ಒಂದೇ ಒಂದು ವಿಶ್ವಕಪ್ ಕೂಡಾ ಇಲ್ಲ, ಇನ್ನು ದಾನದ ಬಗ್ಗೆ ಹೇಳುವುದಾದರೆ, ನಮ್ಮ ಕೊಹಿನೂರು ವಜ್ರ ಈಗಲೂ ನಿಮ್ಮ ಬಳಿ ಇದೆ ಎಂದು ಸೆಹ್ವಾಗ್ ಹೆಸರಿನ ಅಕೌಂಟ್(ಅಧಿಕೃತ ಖಾತೆ ಅಲ್ಲ) ನಿಂದ ಟ್ವೀಟ್ ಆಗಿತ್ತು. ಈಗ ಮಾರ್ಗನ್ ಟ್ವೀಟ್ ಡಿಲೀಟ್ ಆಗಿದೆ.

ನಂತರ ಸೆಹ್ವಾಗ್ ಅವರು ಮಾರ್ಗನ್ ಹೆಸರು ಹೇಳದೆ ಅಪ್ಲೇ ಅಪ್ಲೇ ನೋ ರಿಪ್ಲೇ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಮಾರ್ಗನ್ ಕೂಡಾ ಉತ್ತರಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
British Journalist Piers Morgan came back for Round 2 of tweet war against Virender Sehwag after England posted a record-breaking total of 444 runs against Pakistan on Tuesday.
Please Wait while comments are loading...