ದೀಪಾ ಹಾಗೂ ಲಲಿತಾಗೆ ದೊಡ್ಡ ಸನ್ಮಾನ ಸಿಗಬೇಕು: ಸೆಹ್ವಾಗ್

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 16: ರಿಯೋ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲದಿದ್ದರೂ ಕೋಟ್ಯಂತರ ಮಂದಿ ಮನಗೆದ್ದು, ಯುವ ಪ್ರತಿಭೆಗಳಿಗೆ ಸ್ಪೂರ್ತಿಯಾಗಿರುವ ಇಬ್ಬರು ಮಹಿಳಾ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಅವರು ವಿಶೇಷ ಸನ್ಮಾನ ನೀಡಬೇಕು ಎಂದು ಮಾಜಿ ಕ್ರಿಕೆಟರ್ ವೀರೇಂದರ್ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದು, ಸಾರ್ವಜನಿಕರು, ಕ್ರೀಡಾಭಿಮಾನಿಗಳು ಇದಕ್ಕೆ ದನಿಗೂಡಿಸಿದ್ದಾರೆ. [ಕ್ಷಮಿಸಿ, ಮುಂದಿನ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವೆ: ದೀಪಾ]

Impressed with Dipa Karmakar and Lalita Babar, Virender Sehwag requests PM Modi to honour them

ಒಲಿಂಪಿಕ್ಸ್​ನಲ್ಲಿ ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದಲ್ಲದೆ, ಫೈನಲ್ ಮಟ್ಟಕ್ಕೆ ಏರಿ, ನಾಲ್ಕನೆ ಸ್ಥಾನ ಗಳಿಸಿದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಮತ್ತು ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ ಪಿಟಿ ಉಷಾ ನಂತರ ಫೈನಲ್ ಹಂತ ತಲುಪಿದ ಅಥ್ಲೀಟ್ ಲಲಿತಾ ಬಾಬರ್ ಅವರನ್ನು ಹೊಗಳಿ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.[ರಿಯೋ 2016: ಈಕೆಗೆ 41 ವಯಸ್ಸಾದ್ರು ಆಟ ಮಾತ್ರ ಕುಗ್ಗಿಲ್ಲ]

ಈ ಮಹಿಳಾ ಕ್ರೀಡಾಪಟುಗಳು ನಿಜಕ್ಕೂ ನಮ್ಮೆಲ್ಲರ ಮನ ಗೆದ್ದಿದ್ದಾರೆ. ಅವರೇ ನಮ್ಮ ಸ್ಟಾರ್​ಗಳು. ಅತ್ಯುತ್ತಮ ಪ್ರದರ್ಶನ ನೀಡಿ ಕೋಟ್ಯಂತರ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಬ್ಬರ ಹೆಸರು ವಿಮಾನ ಮತ್ತು ರೈಲಿನ ಮೇಲೆ ಎಂದೆಂದೂ ರಾರಾಜಿಸುವಂತಾಗಲಿ ಎಂದು ಸುದೀರ್ಘ ಟ್ವೀಟ್ ನಲ್ಲಿ ಹೇಳಿದ್ದಾರೆ.


ಮಹಾರಾಷ್ಟ್ರದ ಲಲಿತಾ ಶಿವಾಜಿ ಬಾಬರ್ ಅವರು 3000 ಮೀಟರ್ ಓಟದಲ್ಲಿ 10ನೇ ಸ್ಥಾನ ಗಳಿಸಿದರೆ, ತ್ರಿಪುರಾದ ದೀಪಾ ಅವರು ಜಿಮ್ನಾಸ್ಟಿಕ್​ನ ಪ್ರುಡೋನೊವಾ ವಾಲ್ಟ್ ವಿಭಾಗದ ಫೈನಲ್​ನಲ್ಲಿ ಕೇವಲ 0.15 ಅಂಕಗಳ ಅಂತರದಿಂದ ಕಂಚು ಗೆದ್ದುಕೊಳ್ಳುವ ಅವಕಾಶ ಸ್ವಲ್ಪದರಲ್ಲೇ ಮಿಸ್ ಮಾಡಿಕೊಂಡರು. 4ನೇ ಸ್ಥಾನ ಗಳಿಸಿದ ದೀಪಾ ಅವರ ಪ್ರಯತ್ನಕ್ಕೆ ಚಿನ್ನ ಗೆದ್ದ ಯುಎಸ್ ಎ ಜಿಮ್ನಾಸ್ಟ್ ಪಟು ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Their journey at the Rio Olympics 2016 may have ended but the nation is proud of the achievements of athlete Lalita Babar and gymnast Dipa Karmakar for making it to the final of their respective events.
Please Wait while comments are loading...