ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಗೆ 'ಸೂಪರ್ ' ಕಿರೀಟ

Posted By:
Subscribe to Oneindia Kannada

ನವದೆಹಲಿ, ಜುಲೈ 17 : ಭಾರತದ ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಸಿಂಗ್ ಅವರು ವೃತ್ತಿಪರ ಬಾಕ್ಸಿಂಗ್​ ನಲ್ಲಿ ಹೊಸ ವಿಕ್ರಮ ಸಾಧಿಸಿದ್ದಾರೆ. ವಿಜೇಂದರ್ ಸಿಂಗ್ ಅವರು ವರ್ಲ್ಡ್ ಬಾಕ್ಸಿಂಗ್ ಅಸೋಸಿಯೇಷನ್​ನ (ಡಬ್ಲ್ಯುಬಿಒ) ಏಷ್ಯಾ ಫೆಸಿಪಿಕ್ ಸೂಪರ್ ಮಿಡಲ್​ವೇಟ್ ಪ್ರಶಸ್ತಿ ಗೆದ್ದಿದ್ದಾರೆ.

ಮಾಜಿ ಡಬ್ಲ್ಯುಬಿಸಿ ಯುರೋಪಿಯನ್ ಚಾಂಪಿಯನ್ ಆಸ್ಟ್ರೇಲಿಯಾದ ಕೆರ್ರಿ ಹೋಪ್​ ರನ್ನು ಶನಿವಾರ ನಡೆದ ಪಂದ್ಯದಲ್ಲಿ ಸೋಲಿಸಿ ವೃತ್ತಿ ಪರ ಬಾಕ್ಸಿಂಗ್​ ನಲ್ಲಿ ವಿಜೇಂದರ್ ಅವರು ತಮ್ಮ ಮೊದಲ ಪ್ರಶಸ್ತಿಗೆ ಮುತ್ತಿಟ್ಟರು. ಸತತ ಏಳನೇ ಗೆಲುವು ಅದರಲ್ಲೂ ನಾಲ್ಕು ನಾಕೌಟ್ ಗೆಲುವಿನ ಸರದಾರ ಎನಿಸಿದ್ದಾರೆ.

'ಇದು ನನ್ನ ಗೆಲವಲ್ಲ, ದೇಶದ ಗೆಲುವು, ಅಭಿಮಾನಿಗಳು, ಪ್ರೇಕ್ಷಕರು, ಇತರೆ ಕ್ರೀಡಾಪಟುಗಳು ನನಗೆ ನೀಡಿದ ಪ್ರೋತ್ಸಾಹದಿಂದಲೇ ಈ ಸಾಧನೆ ಸಾಧ್ಯವಾಗಿದೆ ಎಂದು 30 ವರ್ಷ ವಯಸ್ಸಿನ ವಿಜೇಂದರ್ ಸಿಂಗ್ ಅವರು ಪಂದ್ಯ ನಂತರ ಹೇಳಿದರು.

Vijender Singh beats Kerry Hope to clinch WBO Asia Pacific title

ತ್ಯಾಗರಾಜ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 34 ವರ್ಷ ವಯಸ್ಸಿನ ವೇಲ್ಸ್ ಮೂಲದ ಆಸೀಸ್ ಬಾಕ್ಸರ್ ಕೆರಿ ಹೋಪ್​ರನ್ನು 10 ಸುತ್ತುಗಳ ಹೋರಾಟದಲ್ಲಿ 6 ಅಡಿ ಎತ್ತರದ ಹರಿಯಾಣ ಬಾಕ್ಸರ್ 98-92, 98-92, 100-90 ರಿಂದ ಬಗ್ಗು ಬಡಿದರು.

ಈ ಮೂಲಕ ವಿಜೇಂದರ್ ಅವರು ಭಾರತದ ಪರ ಅಂತಾರಾಷ್ಟ್ರೀಯ ಬಾಕ್ಸಿಂಗ್​ನಲ್ಲಿ ಒಲಿಂಪಿಕ್ ಹಾಗೂ ವಿಶ್ವಚಾಂಪಿಯನ್​ಷಿಪ್ ಪದಕ ಗೆದ್ದ ಏಕೈಕ ಬಾಕ್ಸರ್ ಎನಿಸಿದ್ದಾರೆ.

ಗಣ್ಯರ ಉಪಸ್ಥಿತಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಮೇರಿ ಕೋಮ್, ಕುಸ್ತಿಪಟು ಯೋಗೇಶ್ವರ್ ದತ್, ಕ್ರಿಕೆಟರ್ ಗಳಾದ ಯುವರಾಜ್ ಸಿಂಗ್, ಸುರೇಶ್ ರೈನಾ, ಮಾಜಿ ಬ್ಯಾಟ್ಸ್​ಮನ್ ವೀರೇಂದ್ರ ಸೆಹ್ವಾಗ್, ನಟ ರಣದೀಪ್ ಹೂಡಾ, ನಟಿ ನೇಹಾ ಧೂಪಿಯಾ ಪಂದ್ಯವನ್ನು ವೀಕ್ಷಿಸಿ, ವಿಜೇಂದರ್ ಗೆ ಶುಭ ಹಾರೈಸಿದರು. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian boxing star Vijender Singh scaled a new high in his ever-soaring professional career as he clinched the WBO Asia Pacific Super Middleweight title with a dominating win over former WBC European champion Kerry Hope on Saturday (July 16).
Please Wait while comments are loading...