ಉಸೇನ್ ಬೋಲ್ಟ್ ರ ಒಲಿಂಪಿಕ್ಸ್ ದಾಖಲೆಗೆ ಕುತ್ತು

Posted By:
Subscribe to Oneindia Kannada

ಲೌಸಾನ್ನೆ, ಜನವರಿ 25: ಸತತವಾಗಿ ಮೂರು ಒಲಿಂಪಿಕ್ಸ್ ಗಳಲ್ಲಿ ಹ್ಯಾಟ್ರಿಕ್ ಚಿನ್ನ ಗೆಲ್ಲುವ ಮೂಲಕ ಟ್ರಿಪಲ್-ಟ್ರಿಪಲ್-ಟ್ರಿಪಲ್ ಎಂಬ ವಿಶ್ವ ಖ್ಯಾತಿ ಗಳಿಸಿದ್ದ ವಿಶ್ವದ ಅತಿವೇಗದ ಓಟಗಾರ, ಜಮೈಕಾದ ಉಸೇನ್ ಬೋಲ್ಟ್ ಅವರ ಸಾಧನೆಗೆ ಚ್ಯುತಿ ಬಂದಿದೆ.

2008ರಲ್ಲಿ ನಡೆದಿದ್ದ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಬೋಲ್ಟ್ ಅವರಿದ್ದ ಜಮೈಕಾದ ತಂಡ 4X100 ಮೀ. ತಂಡಗಳ ರಿಲೇ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿತ್ತು. ಆ ತಂಡದಲ್ಲಿದ್ದ ನೆಸ್ಟಾ ಕಾರ್ಟರ್ ಎಂಬಾತ ಅಂದಿನ ಸ್ಪರ್ಧೆಯಲ್ಲಿ ನಿಷೇಧಿತ ರಾಸಾಯನಿಕ ಸೇವಿಸಿರುವುದು ಇತ್ತೀಚೆಗೆ ನಡೆದ ಉದ್ದೀಪನಾ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹಾಗಾಗಿ, ಆ ತಂಡಕ್ಕೆ ನೀಡಲಾಗಿರುವ ಚಿನ್ನದ ಪದಕವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ) ಹಿಂಪಡೆದಿದೆ.

ಆ ತಂಡದಲ್ಲಿ ಬೋಲ್ಟ್ ಹೊರತಾಗಿ ಜಮೈಕಾದ ಇನ್ನಿತರ ಓಟಗಾರರಾದ ಅಸಾಫಾ ಪೊವೆಲ್, ಮೈಕಲ್ ಫ್ರಾಟರ್ ಕೂಡ ಇದ್ದರು.

Usain Bolt stripped off 2008 Olympic 4x100m gold medal

ಎಲ್ಲಾ ಕ್ರೀಡಾಕೂಟಗಳಲ್ಲಿ ನಡೆಯುವಂತೆ ಆ ಕ್ರೀಡಾಕೂಟದಲ್ಲಿಯೂ ಆಟಗಾರರಿಗೆ ಉದ್ದೀಪನಾ ಮದ್ದು ಪರೀಕ್ಷೆ ನಡೆಸಲಾಗಿತ್ತು. ಆಗ ಉದ್ದೀಪನಾ ಪರೀಕ್ಷೆಗಾಗಿ ಆಟಗಾರರಿಂದ ಪಡೆದುಕೊಳ್ಳಲಾಗಿದ್ದ ರಕ್ತ ಹಾಗೂ ಮೂತ್ರದ ಸ್ಯಾಂಪಲ್ ಗಳನ್ನು ಇತ್ತೀಚೆಗೆ ಪುನಃ ಪರಿಶೀಲನೆಗೆ ಒಳಪಡಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ, 2008ರ ಬೀಜಿಂಗ್ ಒಲಿಂಪಿಕ್ಸ್ ನ ರಿಲೇನಲ್ಲಿ ಚಿನ್ನ ಗೆದ್ದಿದ್ದ ಜಮೈಕಾದ ತಂಡದಲ್ಲಿದ್ದ ನೆಸ್ಟಾ ಕಾರ್ಟರ್ ಅವರು ನೀಡಿದ್ದ ಸ್ಯಾಂಪಲ್ ಗಳನ್ನು ಪರೀಕ್ಷೆಗೊಳಪಡಿಸಲಾಗಿ, ಅವರು ನಿಷೇಧಿತ ಮಿಥೈಲ್ ಹೆಕ್ಸಾಮಿನೈನ್ ಎಂಬ ರಾಸಾಯನಿಕವನ್ನು ಸೇವಿಸಿರುವುದು ದೃಢಪಟ್ಟಿದೆ. ಹಾಗಾಗಿ, ನಿಯಮಗಳಂತೆ ಜಮೈಕಾದ ತಂಡಕ್ಕೆ ನೀಡಲಾಗಿದ್ದ ಚಿನ್ನದ ಪದಕವನ್ನು ಹಿಂಪಡೆಯಲಾಗಿದೆ.

ಇದು ಅವರಿಗೆ ಸತತ ಮೂರು ಒಲಿಂಪಿಕ್ಸ್ ಗಳಲ್ಲಿ ಬೋಲ್ಟ್ ಮಾಡಿದ್ದ ಟ್ರಿಪಲ್-ಟ್ರಿಪಲ್-ಟ್ರಿಪಲ್ ಸಾಧನೆಗೆ ಮುಳುವಾಗಿ ಪರಿಣಮಿಸಿದೆ.

Usain Bolt stripped off 2008 Olympic 4x100m gold medal

ಟ್ರಿಪಲ್-ಟ್ರಿಪಲ್-ಟ್ರಿಪಲ್ ಸಾಧನೆ ಬಂದಿದ್ದು ಹೀಗೆ....

2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್ ನ ರಿಲೇಯಲ್ಲಿ ಅವರಿದ್ದ ಜಮೈಕಾದ ಓಟಗಾರರ ತಂಡ ಗೆದ್ದಿದ್ದರ ಜತೆಗೆ ಅದೇ ಕ್ರೀಡಾಕೂಟದಲ್ಲಿ ಉಸೇನ್ ಬೋಲ್ಟ್ ಅವರು, ವೈಯಕ್ತಿಕ 100 ಮೀ. 200 ಮೀ. ಓಟದ ಸ್ಪರ್ಧೆಗಳಲ್ಲಿ ಸ್ವರ್ಣ ಗೆದ್ದು ಆ ಕ್ರೀಡಾಕೂಟದಲ್ಲಿ ಒಟ್ಟು ಮೂರು ಚಿನ್ನದ ಪದಕ ಗೆದ್ದುಕೊಂಡಿದ್ದರು.

2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಬೋಲ್ಟ್ ಹಾಗೂ ಅವರ ತಂಡ ತೋರಿದ್ದ ಈ ಸಾಧನೆಯು ನಂತರ 2012ರ ಲಂಡನ್ ಒಲಿಂಪಿಕ್ಸ್ ಹಾಗೂ 2016ರ ರಿಯೊ ಒಲಿಂಪಿಕ್ಸ್ ಗಳಲ್ಲಿಯೂ ಪುನರಾವರ್ತಿತವಾಗಿ, ಬೋಲ್ಟ್ ಅವರಿಗೆ ಟ್ರಿಪಲ್-ಟ್ರಿಪಲ್-ಟ್ರಿಪಲ್ ಎಂಬ ವಿಶ್ವದಾಖಲೆಯನ್ನು ತಂದುಕೊಟ್ಟಿತ್ತು.

ಉಸೇನ್ ಬೋಲ್ಟ್ ಒಲಿಂಪಿಕ್ ಚಿನ್ನದ ಸಾಧನೆ:

2008- ಬೀಜಿಂಗ್ ಒಲಿಂಪಿಕ್ಸ್
- 100 ಮೀ.
- 200 ಮೀ.
- 4X100 ಮೀ. (ಈಗ ಈ ಪದಕವನ್ನು ಹಿಂಪಡೆಯಲಾಗಿದೆ)

------
2012- ಲಂಡನ್ ಒಲಿಂಪಿಕ್ಸ್
- 100 ಮೀ.
- 200 ಮೀ.
- 4X100 ಮೀ.
------
2016- ರಿಯೊ ಒಲಿಂಪಿಕ್ಸ್
- 100 ಮೀ.
- 200 ಮೀ.
- 4X100 ಮೀ.
-------

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Usain Bolt and Jamaica have been stripped of their 4x100m gold medal from the 2008 Beijing Olympics after Nesta Carter tested positive on a re-analysis of doping samples.
Please Wait while comments are loading...