ಮಿಂಚಿನ ಓಟಗಾರ ಬೋಲ್ಟ್ ಗೆ 100 ಮೀಟರ್ ಓಟದಲ್ಲಿ ಚಿನ್ನ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 15: ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಜಮೈಕಾದ ದಿಗ್ಗಜ ಉಸೇನ್ ಬೋಲ್ಟ್ ಅವರು ರಿಯೋ ಒಲಿಂಪಿಕ್ಸ್ ನ 100 ಮೀಟರ್ ಓಟದ ಫೈನಲ್ ನಲ್ಲಿ ಚಿನ್ನ ಗೆದ್ದಿದ್ದಾರೆ. ಸತತ ಮೂರು ಬಾರಿ ಚಿನ್ನದ ಪದಕ ಗೆದ್ದಿರುವ ಏಕೈಕ ಅಥ್ಲೀಟ್ ಎನಿಸಿಕೊಂಡಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

2008ರಲ್ಲಿ ಬೀಜಿಂಗ್, 2012ರಲ್ಲಿ ಲಂಡನ್ ಹಾಗೂ ಈ ಬಾರಿಯ ರಿಯೋ ಒಲಿಂಪಿಕ್ಸ್ ನಲ್ಲಿ 100 ಮೀಟರ್ ದೂರವನ್ನು ಮಿಂಚಿನ ವೇಗದಲ್ಲಿ ಕ್ರಮಿಸಿದ ಸಾಧನೆ ಮಾಡಿದ್ದಾರೆ.[ಉಸೇನ್ ಬೋಲ್ಟ್ ಶರವೇಗದ ರಹಸ್ಯ ಕುತೂಹಲಕಾರಿ]

Rio 2016: Usain Bolt roars into Olympic history with hat-trick of 100m golds

ಸೋಮವಾರ ಮುಂಜಾನೆ ನಡೆದ ಸ್ಪರ್ಧೆಯಲ್ಲಿ ಬೋಲ್ಟ್ 9.81 ಸೆಕೆಂಡ್​ ತೆಗೆದುಕೊಂಡು ಗುರಿ ತಲುಪಿದ್ದರು. ಯುಎಸ್ಎಯ ಜಸ್ಟಿನ್ ಗಾಟ್ಲಿನ್ 9.84 ಸೆಕೆಂಡ್​ ನೊಂದಿಗೆ ಬೆಳ್ಳಿ ಪದಕ, ಕೆನಡಾದ ಆಂಡ್ರೆ ಡೆ ಗ್ರಾಸೆ 9.91 ಸೆಕೆಂಡ್​ ನೊಂದಿಗೆ ಕಂಚು ಪದಕ ಗಳಿಸಿದರು.[9.88 ಸೆಕೆಂಡ್‌ಗಳಲ್ಲಿ 100 ಮೀಟರ್]

ಜಮೈಕಾದಲ್ಲಿ ಜನವರಿ ತಿಂಗಳಿನಲ್ಲಿ ನಡೆದ ಗ್ರ್ಯಾನ್ ಪ್ರೀ ಸ್ಪರ್ಧೆಯಲ್ಲಿ 9.88 ಸೆಕೆಂಡ್‌ಗಳಲ್ಲಿ 100 ಮೀ ಕ್ರಮಿಸಿ ದಾಖಲೆ ಓಟದೊಂದಿಗೆ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದ ಬೋಲ್ಟ್ ಫ್ರಾನ್ಸ್ ನ ಜಿಮ್ಮಿ ವಿಕಾಟೋ ಸ್ಥಾಪಿಸಿದ್ದ ದಾಖಲೆ (100 ಮೀಟರ್‍ ಅನ್ನು 9.86 ಸೆಕೆಂಡ್ ಗಳಲ್ಲಿ) ಯನ್ನು ಮುರಿದಿದ್ದರು. [ಒಲಿಂಪಿಕ್ಸ್ ನಂತರ ಉಸೇನ್ ಬೋಲ್ಟ್ ಓಟ ಸ್ಥಗಿತ]

ಬೋಲ್ಟ್ ಗೆ ಸದ್ಯಕ್ಕೆ 200 ಮೀಟರ್ ಓಟದಲ್ಲಿ ವಿಶ್ವ ದಾಖಲೆ ಮುರಿಯುವ ಅಸೆಯಿದೆಯಂತೆ. 200 ಮೀಟರ್ ನಲ್ಲಿ 19.19 ಸೆಕೆಂಡುಗಳ ದಾಖಲೆಯನ್ನು ಮುರಿಯುವುದು ನನ್ನ ಸದ್ಯದ ಗುರಿ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Usain Bolt roared into Olympic history today (August 15), capturing an unprecedented third consecutive 100m crown to confirm his place in the pantheon of the greatest athletes the world has ever seen.
Please Wait while comments are loading...