ತಾಯಿ ಆಗ್ತಾ ಇದ್ದಾಳೆ ಸೆರೆನಾ ವಿಲಿಯಮ್ಸ್

Posted By:
Subscribe to Oneindia Kannada

ಲಾಸ್ ಏಂಜಲೀಸ್, ಏಪ್ರಿಲ್ 20: ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಶೀಘ್ರದಲ್ಲೇ ತಾಯಿ ಆಗುತ್ತಿದ್ದಾರೆಂದು ಅವರ ಅಧಿಕೃತ ವಕ್ತಾರ ಕೆಲ್ಲಿ ಬುಷ್ ನೊವಾಕ್ ತಿಳಿಸಿದ್ದಾರೆ.

ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಕೆಲ್ಲಿ, ''ಸದ್ಯದಲ್ಲೇ ಸೆರೆನಾ ಅವರು ತಾಯಿಯಾಗಲಿದ್ದಾರೆಂದು ಹೇಳಲು ಸಂತಸವಾಗುತ್ತಿದೆ. ಈ ವರ್ಷ ಸೆರೆನಾ ಟೆನಿಸ್ ಅಂಗಳಕ್ಕೆ ಇಳಿಯಲಾರರು. 2018ರಲ್ಲಿ ಅವರ ಪುನರಾಗಮನವಾಗಲಿದೆ'' ಎಂದು ತಿಳಿಸಿದ್ದಾರೆ.

US tennis great Serena Williams expecting baby this year

ಖ್ಯಾತ ಸಾಮಾಜಿಕ ಜಾಲತಾಣವಾದ ಸ್ನಾಪ್ ಚಾಟ್ ನಲ್ಲಿ ಏಪ್ರಿಲ್ 19ರಂದು ತಮ್ಮದೊಂದು ಫೋಟೋ ಹಾಕಿಕೊಂಡಿದ್ದ ಸೆರೆನಾ, ತಾವು ಗರ್ಭಿಣಿಯಾಗಿರುವ ವಿಚಾರವನ್ನು ಸೂಚ್ಯವಾಗಿ ಹೇಳಿದ್ದರು.

ತಮ್ಮ ಹೊಟ್ಟೆಯನ್ನು ಕೇಂದ್ರೀಕೃತವಾಗಿಸಿ ತಮ್ಮದೊಂದು ಓರೆ ನಿಲುವಿನ ಭಾವ ಚಿತ್ರವನ್ನು ಸ್ನಾಪ್ ಚಾಟ್ ನಲ್ಲಿ ಪ್ರಕಟಿಸಿದ್ದ ಸೆರೆನಾ, ಆ ಚಿತ್ರಕ್ಕೆ '20 ವೀಕ್ಸ್' ಎಂದು ಕ್ಯಾಪ್ಷನ್ ಹಾಗಿದ್ದರು.

ಆ ವಿಚಾರ ಮಾಧ್ಯಮಗಳಲ್ಲಿ ಕೊಂಚ ಸದ್ದು ಮಾಡಿತ್ತು. ಇದಾಗಿ, ಕೆಲವೇ ಗಂಟೆಗಳಲ್ಲಿ ಸೆರೆನಾ ಅವರ, ಪ್ರಚಾರ ಜವಾಬ್ದಾರಿಗಳನ್ನು ನಿಭಾಯಿಸುವ ಹಾಗೂ ಅವರ ಅಧಿಕೃ ವಕ್ತಾರರಾದ ಕೆಲ್ಲಿ ಇದನ್ನು ಅಧಿಕೃತವಾಗಿ ಪ್ರಕಟಿಸುವ ಮೂಲಕ ಮಾಧ್ಯಮಗಳು ಬಿತ್ತರಿಸಿದ್ದ ಸುದ್ದಿಯನ್ನು ಖಚಿತಪಡಿಸಿದರು.

ಕಳೆದ ವರ್ಷ ಡಿಸೆಂಬರ್ 16ರಂದು ಸೆರೆನಾ ವಿಲಿಯಮ್ಸ್ ಅವರು, ರೆಡಿಟ್ ಎಂಬ ಸಂಸ್ಥೆಯ ಸಹ- ಸಂಸ್ಥಾಪಕ ಅಲೆಕ್ಸಿಸ್ ಒಹಾನಿಯನ್ ಅವರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Serena Williams is expecting a baby this year her spokesperson confirmed, hours after the tennis great hinted at the news in a Snapchat post. "I'm happy to confirm Serena is expecting a baby this Fall," Los Angeles-based publicist Kelly Bush Novak said in a statement emailed to AFP yesterday (April 19).
Please Wait while comments are loading...