ಗ್ರ್ಯಾನ್ ಸ್ಲಾಮ್ ಗೆಲುವು: ಫೆಡರರ್ ಸೋಲಿಸಿದ ಸೆರೆನಾ ವಿಲಿಯಮ್ಸ್

Posted By:
Subscribe to Oneindia Kannada

ನ್ಯೂಯಾರ್ಕ್, ಸೆ.06: ಅತಿ ಹೆಚ್ಚು ಗ್ರ್ಯಾನ್ ಸ್ಲಾಮ್ ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿರುವ ರೋಜರ್ ಫೆಡರರ್ ಅವರ ದಾಖಲೆಯನ್ನು ಅಮೆರಿಕದ ಸೆರೆನಾ ವಿಲಿಯಮ್ಸ್ ಮುರಿದಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದಿರುವ ಮಾರ್ಟಿನ್ ನವ್ರಾಟಿಲೋವಾ ನಂತರ ಸೆರೆನಾ ದಾಖಲೆಯ 307 ಗ್ರ್ಯಾನ್ ಸ್ಲಾಮ್ ಪಂದ್ಯಗಳನ್ನು ಜಯಿಸಿ ನೂತನ ದಾಖಲೆ ಸೃಷ್ಟಿಸಿದ್ದರು.

ಅಮೆರಿಕದ ಆಟಗಾರ್ತಿ ಸಿಂಗಲ್ಸ್ ನಲ್ಲಿ ಒಟ್ಟು 22 ಗ್ರ್ಯಾನ್ ಸ್ಲಾಮ್ ಗಳನ್ನು ಜಯಿಸಿದ್ದು, ಇನ್ನೂ ಎರಡು ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಪಟ್ಟ ಗೆದ್ದರೆ, ಮಾರ್ಗರೇಟ್ ಕೋರ್ಟ್ ಅವರ 24 ಗ್ರ್ಯಾನ್ ಸ್ಲಾಮ್ ದಾಖಲೆಯನ್ನು ಮುರಿಯಲಿದ್ದಾರೆ. [ರಿಯೋದಲ್ಲಿ ಸೋತು, ಸಿನ್ಸಿನಾಟಿಯಲ್ಲಿ ನಂ. 1 ಪಟ್ಟಕ್ಕೇರಿದ ಸಾನಿಯಾ]

US Open: Serena Williams breaks Roger Federer's record

ದಾಖಲೆ ಏಳನೇ ಯುಎಸ್ ಪ್ರಶಸ್ತಿ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿರುವ ಸೆರೆನಾ ವಿಲಿಯಮ್ಸ್ ಅವರು ಕಜಕಿಸ್ತಾನ ಆಟಗಾರ್ತಿ ಯುರೊಸ್ಲಾವಾ ಶವೆಡವಾ ವಿರುದ್ಧ 6-2, 6-3 ಅಂತರದಲ್ಲಿ ಜಯ ದಾಖಲಿಸಿದ್ದಾರೆ.

ಆಗಸ್ಟ್ 8 ರಂದು ಫೆಡರರ್ ಅವರು 35ಕ್ಕೆ ಕಾಲಿಟ್ಟರೆ, ಸೆಪ್ಟೆಂಬರ್ 26ರಂದು ವಿಲಿಯಮ್ಸ್ 35ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾರೆ. ಯುಎಸ್ ಓಪನ್ ನಲ್ಲಿ 88, ವಿಂಬಲ್ಡನ್ ನಲ್ಲಿ 86, ಆಸ್ಟ್ರೇಲಿಯನ್ ಓಪನ್ ನಲ್ಲಿ 74 ಹಾಗೂ ಫ್ರೆಂಚ್ ಓಪನ್ ನಲ್ಲಿ 60 ಗೆಲುವು ಕಂಡಿದ್ದಾರೆ. ಗೆಲುವಿನ ಸರಾಸರಿ 308-42(880%). ಫೆಡರರ್ 307-51 (858%) ನಷ್ಟಿದೆ.(ಎಪಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Serena Williams now owns more victories in Grand Slam matches than anyone else in tennis' Open era, surpassing Roger Federer with her 308th.
Please Wait while comments are loading...