ವಿಶ್ವದ ನಂ. 1 ಆಟಗಾರ್ತಿ ಕೆರ್ಬರ್ ಮುಡಿಗೆ ಯುಎಸ್ ಓಪನ್ ಕಿರೀಟ

Posted By:
Subscribe to Oneindia Kannada

ಬೆಂಗಳೂರು, ಸೆ. 11: ವಿಶ್ವದ ನಂ. 1 ಆಟಗಾರ್ತಿ ಕೆರ್ಬರ್ ಮುಡಿಗೆ ಯುಎಸ್ ಓಪನ್ ಕಿರೀಟ ಲಭಿಸಿದೆ. ಫೈನಲ್ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದಾರೆ.

ಸೆಮಿಫೈನಲ್‌ನಲ್ಲಿ ಅಮೆರಿಕದ 34ರ ಹರೆಯದ ಸೆರೆನಾ ಅವರನ್ನು ಜೆಕ್ ಗಣರಾಜ್ಯದ ಕ್ಯಾರೊಲಿನಾ ಪ್ಲಿಸ್ಕೊವಾ ಅವರು 6-2, 7-6(7-5) ಅಂತರದಲ್ಲಿ ಬಗ್ಗು ಬಡಿದು ಮೊದಲ ಬಾರಿ ಗ್ರ‍್ಯಾನ್ ಸ್ಲಾಮ್‌ ಫೈನಲ್‌ಗೆ ತಲುಪಿದ್ದರು. ಇನ್ನೊಂದೆಡೆ 28 ವರ್ಷ ವಯಸ್ಸಿನ ಏಂಜಲಿಕ್ ಕೆರ್ಬರ್ ಅವರು ಡೆನ್ಮಾರ್ಕ್‌ನ ಕರೋಲಿನ್ ವೋಝ್ನಿಯಾಕಿ ವಿರುದ್ಧ ಜಯ ಸಾಧಿಸಿ ಫೈನಲ್ ತಲುಪಿದ್ದರು.

World No. 1 US Open 2016: Angelique Kerber beats Karolina Pliskova in final

ಫೈನಲ್ ಪಂದ್ಯದಲ್ಲಿ ಕೆರ್ಬರ್ ಅವರು 6-3, 4-6, 6-4 ಅಂತರದಲ್ಲಿ ಪ್ಲಿಸ್ಕೋವಾ ಅವರನ್ನು ಸೋಲಿಸಿದ್ದಾರೆ. 2016 ರ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಕೂಡಾ ಕೆರ್ಬರ್ ಪಾಲಾಗಿತ್ತು.

ಸೆರೆನಾ ವಿಲಿಯಮ್ಸ್ ಸತತ ಎರಡನೆ ವರ್ಷ ಯುಎಸ್ ಓಪನ್‌ನಲ್ಲಿ ಸೆಮಿಫೈನಲ್‌ನಲ್ಲೇ ಸೋತು ಅಭಿಯಾನ ಕೊನೆಗೊಳಿಸಿದ್ದಾರೆ. ಯುಎಸ್ ಓಪನ್‌ನಲ್ಲಿ ಏಳನೆ ಬಾರಿ ಪ್ರಶಸಿತಿ ಗೆದ್ದು ತನ್ನ ಹೆಸರಿನಲ್ಲಿ ದಾಖಲೆ ಬರೆಯುವ ಸೆರೆನಾಗೆ ಅವಕಾಶ ಕೈಜಾರಿದೆ. ಇದರೊಂದಿಗೆ ಕಳೆದ ಮೂರು ವರ್ಷಗಳಿಂದ ನಂ.1 ಸ್ಥಾನದಲ್ಲಿದ್ದ ಸೆರೆನಾ ನಂ.2 ಸ್ಥಾನಕ್ಕೆ ಇಳಿದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
World No. 1 Germany's Angelique Kerber beats Czech Karolina Pliskova in the US Open final.
Please Wait while comments are loading...