ಹೊಸ ಹುಮ್ಮಸ್ಸು ತಂದ ಬ್ಯಾಡ್ಮಿಂಟನ್ ಪಂದ್ಯಾವಳಿ

Subscribe to Oneindia Kannada

ಬೆಂಗಳೂರು,ಆಗಸ್ಟ್, 30: ಹವ್ಯಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ 'ಹಾಟ್ ಶಾಟ್ಸ್-2016' ಬ್ಯಾಡ್ಮಿಂಟನ್ ಪಂದ್ಯಾವಳಿ ಕ್ರೀಡಾಪ್ರೇಮಿಗಳಲ್ಲಿ ಹೊಸ ಹುರುಪು ತುಂಬಿತು.

ಬೆಂಗಳೂರಿನ ಇಟ್ಟಮಡುವಿನ ಅನೀಲ್ ಸ್ಫೋರ್ಟ್ಸ್ ಕ್ಲಬ್ ನಲ್ಲಿ ನಡೆದ ಪಂದ್ಯಾವಳಿಯಲ್ಲಿ 200ಕ್ಕೂ ಅಧಿಕ ಜನ ಹವ್ಯಕ ಬ್ಯಾಡ್ಮಿಂಟನ್ ಆಟಗಾರರು ಭಾಗವಹಿಸಿದ್ದರು.[ಬೆಳ್ಳಿ ಪದಕ ಗೆದ್ದ ಪಿವಿ ಸಿಂಧು ಈಗ 13 ಕೋಟಿ ರು ಒಡತಿ]

 Two Days Havyaka Badminton tournament

ಆಗಸ್ಟ್ 28 ರಂದು ನಡೆದ ಸಮಾರೋಪ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಎಲುಬು ತಜ್ಞ ಡಾ. ನಾರಾಯಣ ಹುಳಸೆ ಮಾತನಾಡಿ, ಕ್ರೀಡಾ ಚಟುವಟಿಕೆಯಿಂದ ಹೇಗೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ವಿವರಿಸಿದರು.[ರಿಯೋ ಒಲಿಂಪಿಕ್ಸ್‌ ಸಾಧಕರಿಗೆ ಬಿಎಂಡಬ್ಲ್ಯೂ ಕಾರು ಕೊಡುಗೆ!]

 Two Days Havyaka Badminton tournament

ಪಂದ್ಯಾವಳಿಯ ಸಂಪೂರ್ಣ ಪ್ರಾಯೋಜಕತ್ವವನ್ನು ಕಮಲಾಕರ ಕೆ ಎಸ್ ಮತ್ತು ಜಗದೀಶ್ ಹೊಸಬಾಳೆ ವಹಿಸಿಕೊಂಡಿದ್ದರು.

 Two Days Havyaka Badminton tournament

ನ್ಯಾಯವಾದಿ ಅಶೋಕ್ ಭಟ್ ಹಾಜರಿದ್ದರು. ಕಮಲಾಕರ ಕೆ ಎಸ್ ಅತಿಥಿಗಳನ್ನು ಸ್ವಾಗತಿಸಿದರೆ, ಜಗದೀಶ್ ಹೊಸಬಾಳೆ ವಂದನಾರ್ಪಣೆ ಮಾಡಿದರು. ವಿನಾಯಕ ಹೆಗಡೆ ವಾಜಗದ್ದೆ ಕಾರ್ಯಕ್ರಮ ನಿರ್ವಹಿಸಿದ್ದರು. ನೂರಾರು ಕಾರ್ಯಕರ್ತರು ಸಹಕಾರದಲ್ಲಿ ಪಂದ್ಯಾವಳಿ ಯಶಸ್ವಿಯಾಯಿತು. ಸಾವಿರಾರು ಕ್ರೀಡಾಪ್ರೇಮಿಗಳು ಪಂದ್ಯಾವಳಿಗೆ ಸಾಕ್ಷಿಯಾದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Havyaka Badminton association has conducted two days Badminton tournament on 27, 28 August 2016 at Anil Sports club Ittamadu Bengaluru.
Please Wait while comments are loading...