ಇತಿಹಾಸ ನಿರ್ಮಿಸಿದ ದೀಪಾಗೆ ಬಿಗ್ ಬಿ ಪ್ರಶಂಸೆ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 08: ರಿಯೋ ಒಲಿಂಪಿಕ್ಸ್ 2016ರಲ್ಲಿ ಫೈನಲ್ ಹಂತ ತಲುಪಿಸಿದ ಮೊಟ್ಟ ಮೊದಲ ಭಾರತೀಯ ಮಹಿಳಾ ಜಿಮ್ನಾಸ್ಟ್ ಪಟು ದೀಪಾ ಕರ್ಮಾಕರ್ ಅವರಿಗೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ಹರಿದು ಬಂದಿದೆ. ಈ ನಡುವೆ ದೀಪಾ ಅವರ ಸಾಧನೆ ಹೊಗಳಿರುವ ಬಿಗ್ ಬಿ ಅಮಿತಾಬ್ ಅವರು ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ದೀಪಾ ಕರ್ಮಾಕರ್ ಬಗ್ಗೆ ಸುದ್ದಿ, ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತೇವೆ ಎಂದಿದ್ದರು ಆದರೆ, ಯಾಕೋ ಮಾಡಿಲ್ಲ, ಅವರಿಗೆ ಇದು ಸುದ್ದಿಯಲ್ಲವೆಂದರೆ ಮತ್ತೆ ಯಾವುದು ಸುದ್ದಿ. ನಮ್ಮ ಅಥ್ಲೀಟ್ ಗಳ ಬಗ್ಗೆ ನಾವೇ ಹೊಗಳಿ ಸುದ್ದಿ ಮಾಡದಿದ್ದರೆ ಹೇಗೆ? ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ. [ಒಲಿಂಪಿಕ್ಸ್ ಲೈವ್ ಯಾವ ವಾಹಿನಿಯಲ್ಲಿ ನೋಡ್ಬಹುದು?]

22 ವರ್ಷ ವಯಸ್ಸಿನ ತ್ರಿಪುರ ಮೂಲದ ಜಿಮ್ನಾಸ್ಟ್ ದೀಪಾ ಅವರು ವಾಲ್ಟ್ ವಿಭಾಗದಲ್ಲಿ ಅರ್ಹತಾ ಸುತ್ತಿನಲ್ಲಿ 8ನೇ ಸ್ಪರ್ಧಿಯಾಗಿ ಫೈನಲ್ ಪ್ರಶೇಸಿದ್ದಾರೆ.ಆಗಸ್ಟ್ 14ರಂದು ಫೈನಲ್ ಪಂದ್ಯ ನಡೆಯಲಿದೆ. [ಪದಕ ವಿಜೇತರು: ಲಿಯಾಂಡರ್ ನಿಂದ ಸೈನಾ ತನಕ]

ಈ ನಡುವೆ ಬಿಗ್ ಬಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಹಲವಾರು ಮಂದಿ ದೀಪಾ ಅವರ ಸ್ಪರ್ಧೆಯ ವಿಡಿಯೋ ತುಣುಕು ಹಾಕಿದ್ದಾರೆ. ದೀಪಾ ಅವರ ಸಾಧನೆ ಮೆಚ್ಚಿ ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಸೇರಿದಂತೆ ಅನೇಕ ಕ್ರೀಡಾಪಟುಗಳು, ಗಣ್ಯರು, ಸಾರ್ವಜನಿಕರು ಶುಭಹಾರೈಸಿದ್ದಾರೆ. ಟ್ವೀಟ್ ಗಳ ಸಂಗ್ರಹ ಮುಂದಿದೆ ನೋಡಿ...[ಫೈನಲ್ ತಲುಪಿ, ಇತಿಹಾಸ ನಿರ್ಮಿಸಿದ ದೀಪಾ]

ದೀಪಾ ಕರ್ಮಾಕರ್ ಅವರ ಅಂತಿಮ ಪಂದ್ಯ

ದೀಪಾ ಕರ್ಮಾಕರ್ ಅವರ ಅಂತಿಮ ಪಂದ್ಯ

ದೀಪಾ ಕರ್ಮಾಕರ್ ಅವರ ಅಂತಿಮ ಪಂದ್ಯ( ವಾಲ್ಟ್ ಫೈನಲ್) ಆಗಸ್ಟ್ 14 ರಾತ್ರಿ 11ಕ್ಕೆ ನಡೆಯಲಿದ್ದು, ಭಾರತದ ಕ್ರೀಡಾಭಿಮಾನಿಗಳ ಚಿತ್ತ ಈಗ ದೀಪಾ ಅವರ ಮೇಲಿದೆ. ಮಹಿಳಾ ವಿಭಾಗದ ಸ್ಪರ್ಧೆಗಳು ಬಾರ್, ಬೀಮ್, ವಾಲ್ಟ್ , ಎಕ್ಸರ್ಸೈಸ್ ಹಾಗೂ ವೈಯಕ್ತಿಕ ಆಲ್ ರೌಂಡ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.

ದೀಪಾರನ್ನು ಪ್ರೋತ್ಸಾಹಿಸಿ ಎಂದ ಬಿಗ್ ಬಿ

ದೀಪಾರನ್ನು ಪ್ರೋತ್ಸಾಹಿಸಿ ಎಂದ ಬಿಗ್ ಬಿ ಅಮಿತಾಬ್

ಶಿವರಾಜ್ ಚೌಹಾಣ್ ರಿಂದ ಟ್ವೀಟ್

ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್ ರಿಂದ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

ಕಾಮೆಂಟೆಟರ್ ಹರ್ಷ ಭೋಗ್ಲೆ ರಿಂದ ಟ್ವೀಟ್

ಕಾಮೆಂಟೆಟರ್ ಹರ್ಷ ಭೋಗ್ಲೆ ಅವರು ಟ್ವೀಟ್ ಮಾಡಿ, ಇದೊಂದು ಐತಿಹಾಸಿಕ ಸಾಧನೆ ಎಂದಿದ್ದಾರೆ.

ಗೌತಮ್ ಗಂಭೀರ್ ರಿಂದ ಟ್ವೀಟ್

ಕ್ರಿಕೆಟರ್ ಗೌತಮ್ ಗಂಭೀರ್ ಅವರು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ

ಬಿಜೆಪಿಯ ಶೈನಾರಿಂದ ಟ್ವೀಟ್

ಬಿಜೆಪಿ ಮುಖಂಡೆ ಶೈನಾರಿಂದ ದೀಪಾ ಕುಮಾರಿ ಸಾಧನೆ ಬಗ್ಗೆ ಟ್ವೀಟ್

ವಿವಿಎಸ್ ಲಕ್ಷ್ಮಣ್ ರಿಂದ ಟ್ವೀಟ್

ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಅವರು ಟ್ವೀಟ್ ಮಾಡಿ ಐತಿಹಾಸಿಕ ಸಾಧನೆ ಮಾಡಿದ ದೀಪಾಗೆ ಗುಡ್ ಲಕ್ ಎಂದಿದ್ದಾರೆ.

ಸೋಹಾ ಅಲಿ ಖಾನ್ ರಿಂದ ಟ್ವೀಟ್

ಬಾಲಿವುಡ್ ನಟಿ ಸೋಹಾ ಅಲಿ ಖಾನ್ ರಿಂದ ಟ್ವೀಟ್

ಬಾಕ್ಸರ್ ವಿಜೇಂದರ್ ಸಿಂಗ್

ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ ರಿಂದ ದೀಪಾ ಅವರ ಸಾಧನೆಗೆ ಪ್ರಶಂಸೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian woman gymnast Dipa Karmakar scripted history last night as she became the first woman from India to qualify for the finals at the Rio Olympics 2016.
Please Wait while comments are loading...