ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವದಾಖಲೆ ಸಮಕ್ಕೆ ನಿಂತ ಕಿವೀಸ್ ವೇಗಿ ಟಿಮ್ ಸೌಥಿ

By Mahesh

ವೆಲ್ಲಿಂಗ್ಟನ್, ಫೆ.20: ವಿಶ್ವಕಪ್ 2015 ಟೂರ್ನಿಯ 9ನೇ ಪಂದ್ಯದಲ್ಲಿ ಕಿವೀಸ್ ವೇಗಿ ಟಿಮ್ ಸೌಥಿ ವಿಶ್ವ ದಾಖಲೆ ಸಮಗಟ್ಟಿದ್ದಾರೆ. ಟಿಮ್ ಸೌಥಿ 7 ವಿಕೆಟ್ ಕಿತ್ತು ಆಂಗ್ಲರ ಬ್ಯಾಟಿಂಗ್ ಬೆನ್ನಲುಬು ಮುರಿದು ವೆಸ್ಟ್ ಪ್ಯಾಕ್ ಸ್ಟೇಡಿಯಂನಲ್ಲಿ ಅದ್ಭುತ ಪ್ರದರ್ಶನ ನೀಡಿದರು.

| ವಿಶ್ವಕಪ್ ವಿಶೇಷ ಪುಟ

ಬಲಗೈ ವೇಗದ ಬೌಲರ್ ಟಿಮ್ ಸೌಥಿ ತಮ್ಮ ಆರಂಭಿಕ ಸ್ಪೆಲ್ ನಲ್ಲಿ 5 ಓವರ್ ಗಳಲ್ಲಿ 23ಕ್ಕೆ 2 ಪಡೆದು ಇಂಗ್ಲೆಂಡ್ ಗೆ ಮಾರಕವಾದರು. ಕೊನೆಗೆ 9 ಓವರ್ ಗಳಲ್ಲಿ 33 ರನ್ನಿತ್ತು 7 ವಿಕೆಟ್ ಕಿತ್ತರು. ಇದು ಸೌಥಿ ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ. ಟಿಮ್ ಸೌಥಿ ಪಡೆದ 7 ವಿಕೆಟ್ ಗಳಲ್ಲಿ ಇಯಾನ್ ಬೆಲ್, ಜೇಮ್ಸ್ ಟೇಲರ್, ಕ್ರಿಸ್ ವೋಕ್ಸ್, ಮೋಯಿನ್ ಅಲಿ ಕ್ಲೀನ್ ಬೋಲ್ಡ್ ಆಗಿದ್ದು ಗಮನಾರ್ಹ.

ವಿಶ್ವಕಪ್ ಇತಿಹಾಸದಲ್ಲಿ 7 ವಿಕೆಟ್ ಪಡೆದ 4ನೇ ಆಟಗಾರ ಎಂಬ ಕೀರ್ತಿಗೆ ಸೌಥಿ ಪಾತ್ರರಾಗಿದ್ದಾರೆ. 7 ವಿಕೆಟ್ ಕಿತ್ತ ಮೊದಲ ಕಿವೀಸ್ ಬೌಲರ್, ಏಕದಿನ ಕ್ರಿಕೆಟ್ ನಲ್ಲಿ ಕಿವೀಸ್ ಪರ ಶ್ರೇಷ್ಠ ಬೌಲಿಂಗ್ ಪ್ರದರ್ಶನ ಎಲ್ಲವೂ ಸೌಥಿ ಪಾಲಾಗಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ನ ವಿನ್ಸ್ಟನ್ ಡೇವಿಸ್, ಆಸ್ಟ್ರೇಲಿಯಾದ ಆಂಡಿ ಬಿಕಲ್, ಗ್ಲೆಮ್ ಮೆಗ್ರಾ 7 ವಿಕೆಟ್ ಕಿತ್ತಿದ್ದರು. [ಕಿವೀಸ್ ವಿರುದ್ಧ ಇಂಗ್ಲೆಂಡ್ ಹೀನಾಯ ಪ್ರದರ್ಶನ]

Tim Southee equals World Cup record with 7 wickets


ಆದರೆ, ವಿಶ್ವಕಪ್ ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಇನ್ನೂ ಗ್ಲೆನ್ ಮೆಗ್ರಾ ಹೆಸರಿನಲ್ಲಿ ನಮೀಬಿಯಾ ವಿರುದ್ಧ 2003ರಲ್ಲಿ 7/15 ಕಬಳಿಸಿದ್ದರು. 26 ವರ್ಷ ವಯಸ್ಸಿನ ಸೌಥಿ ಅವರು 88 ಪಂದ್ಯಗಳಲ್ಲಿ 127 ವಿಕೆಟ್ ಪಡೆದಿದ್ದಾರೆ.

ವಿಶ್ವಕಪ್ ಟೂರ್ನಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ
* 7/15 (7-4-15-7)- ಗ್ಲೆನ್ ಮೆಗ್ರಾ (ಆಸ್ಟ್ರೇಲಿಯಾ) vs ನಮೀಬಿಯಾ (2003)
* 7/20 (10-0-20-7)- ಆಂಡ್ ಬಿಕಲ್ (ಆಸ್ಟ್ರೇಲಿಯಾ) vs ಇಂಗ್ಲೆಂಡ್ (2003)
* 7/33 (9-0-33-7)- ಟಿಮ್ ಸೌಥಿ (ನ್ಯೂಜಿಲೆಂಡ್) vs ಇಂಗ್ಲೆಂಡ್ (2015)
* 7/51 (10.3-0-51-7)- ವಿ ಡೇವಿಸ್ (ವೆಸ್ಟ್ ಇಂಡೀಸ್) vs ಆಸ್ಟ್ರೇಲಿಯಾ (1983)

ನ್ಯೂಜಿಲೆಂಡ್ ಪರ ಶ್ರೇಷ್ಠ ಬೌಲಿಂಗ್ ಪ್ರದರ್ಶನ

* 7/33- ಸೌಥಿ vs ಇಂಗ್ಲೆಂಡ್ (2015)
* 6/19- ಶೇನ್ ಬಾಂಡ್ vs ಭಾರತ (2005)
* 6/23- ಶೇನ್ ಬಾಂಡ್ vs ಆಸ್ಟ್ರೇಲಿಯಾ (2003)
* 6/25- ಸ್ಕಾಟ್ ಸ್ಟೈರಿಸ್ vs ವೆಸ್ಟ್ ಇಂಡೀಸ್ (2002)

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X